ಹರುಷದಿ ಬಾಳೋಣ
ಹರುಷದಿ ಬಾಳೋಣ/ ಜೀವನ
ಆಗಲಿ ಸುಖಪಯಣ//
ಸಾರ್ಥಕಗೊಳಿಸೋಣ/ ಬದುಕಲಿ
ಸ್ಫೂರ್ತಿಯ ಹರಿಸೋಣ//
ತೋರಣ ಕಟ್ಟೋಣ/ ಗೆಲುವಿನ
ಕಾರಣ ತಿಳಿಸೋಣ//
ಅರ್ತಿಯ ಹಂಚೋಣ/ ಛಲದಲಿ
ಕೀರ್ತಿಯ ಮೆರೆಸೋಣ//
ಬಾಲ್ಯದ ಆಟೋಟ/ ಗೆಳೆಯರ
ಪ್ರೀತಿಯ ತುಂಟಾಟ//
ಅಮ್ಮನ ಅಕ್ಕರೆಗೆ/ ಧನ್ಯತೆ
ಗುರುಹಿರಿಯರ ಕೃಪೆಗೆ//
ನೆನೆದರೆ ಅಭಿಮಾನ/ ಹರೆಯದಿ
ಚಿಮ್ಮಿದ ವೀರತನ//
ಸಂತಸ - ಸಲ್ಲಾಪ/ ಜೊತೆಯಲಿ
ಹೊಮ್ಮಿದ ಆಲಾಪ//
ಬಾಳಿನ ಬೆಳವಣಿಗೆ/ ತುಂಬಿದ
ಸೌಖ್ಯದ ಮೆರವಣಿಗೆ//
ಚಿತ್ರದ ಬರವಣಿಗೆ/ ಸ್ನೇಹದ
ಸಖ್ಯದ ರಸಗಳಿಗೆ//
✍️ಶಿವಕುಮಾರ ಸಾಯ 'ಅಭಿಜಿತ್'
Comments
Post a Comment