ಸ್ನೇಹದ ಪ್ರಪತ್ರ

ಸ್ನೇಹದ ಪ್ರಪತ್ರ

ಸ್ನೇಹದ ಬೆಂಬಲಕ್ಕೆ
ಸಾವಿರ ನಮನವಿದೆ;
ಸಂತಸದ ಕಣ್ಣೀರಲ್ಲಿ
ಹೃದಯದ ಪ್ರೇಮವಿದೆ.

ಕಾಯುವವರಿವರು,
ಕನಿಕರಿಸುವವರು,
ಮೈದಡವಿ ಸವಿಯ ನೀಡುವವರು,
ಜೀವಪರ ನಿಂತ
ಸಂಕಲ್ಪ ಸಂಭೂತ
ದೇವದೇವತೆಗಳು.

ನಿಮ್ಮ ಕೈಗೆ ಕೈ ನೀಡಿ
ಚಪ್ಪಾಳೆ ಹೊಡೆಯುತ್ತೇನೆ
ಮುಖಕ್ಕೆ ಮುಖ ಕೊಟ್ಟು ಮಾತಾಡುತ್ತೇನೆ
ಅನುಭವ-ಅನಿಸಿಕೆ ಹೇಳಿಬಿಡುತ್ತೇನೆ
ಪ್ರಾಮಾಣಿಕ ಪ್ರೀತಿ ಪರಿಶುದ್ಧತೆಯ ಪ್ರತೀಕವೆನ್ನುತ್ತಾ
ನೀವುಗಳನ್ನು ಸೇವಿಸಿ ಉಸಿರಾಡುತ್ತೇನೆ.

ನಿಜದ ಸ್ನೇಹಿತರೆ,
ನಿಮ್ಮವರದೊಂದು ಪಟ್ಟಿ ಸಿದ್ಧಪಡಿಸಿ,
ಆಗಾಗ ಬಿಡುಗಡೆಗೊಳಿಸಿ,
ಸಂಭ್ರಮಿಸಿ,
ಸಂಪೂರ್ಣ ಬೆಂಬಲಿಸಿ,
ಹಂಬಲಿಸಿ ಕರೆಯುತ್ತೇನೆ.

ಸ್ನೇಹವೆಂಬುದು ತಂಪು,
ಸ್ನೇಹವೆಂಬುದು ಆತ್ಮೀಯ,
ಸ್ನೇಹವೆಂಬುದು ಸ್ವಕೀಯ;
ಈ ಜಗವನ್ನು ಸ್ನೇಹಕ್ಕೆ ಸಿದ್ಧಪಡಿಸಿ
ನಿಮ್ಮನ್ನು ನಾನೇ ಆಯ್ದುಕೊಂಡಿದ್ದೇನೆ
ಸ್ನೇಹಕ್ಕಾಗಿ, ಸಂತೋಷಕ್ಕಾಗಿ,
ಸ್ನೇಹದ ರಾಜಗಿರಿಗಾಗಿ.

✍️ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆ: ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯ ರಕ್ಷಣೆಗಾಗಿ ಒಂದು ಅನಿವಾರ್ಯ ಹೆಜ್ಜೆ

ಪುಸ್ತಕ ಪರಿಚಯ: ಡಾ. ವಸಂತಕುಮಾರ ಪೆರ್ಲ ಅವರ 'ಅಮೃತ ಹಂಚುವ ಕೆಲಸ'

ನಿಶ್ಶಬ್ದದ ಗರ್ಭ ಮತ್ತು ಸೃಜನಶೀಲತೆಯ ಉದಯ: ಒಂದು ದಾರ್ಶನಿಕ ನೋಟ