ಅಡ್ಯನಡ್ಕಕ್ಕೆ 4ಜಿ ನೆಟ್‌ವರ್ಕ್: ನಾವು ಮಾಡಿದ್ದೇನು?
ಅಡ್ಯನಡ್ಕದಲ್ಲಿ ಇನ್ನೇನು ಜಿಯೋ 4ಜಿ ನೆಟ್‌ವರ್ಕ್ ದೊರೆಯುವ ದಿನಗಳು ಹತ್ತಿರವಾಗಿವೆ. ಆದರೆ ಎರಡು ವರ್ಷಗಳಿಂದ ಕನೆಕ್ಟಿವಿಟಿ ಸಮಸ್ಯೆ ಎದುರಿಸುತ್ತಿರುವ ಈ ಪ್ರದೇಶದಲ್ಲಿ ಮೊತ್ತಮೊದಲು 4ಜಿ ದೊರೆಯುವಂತಾದದ್ದು ವಿಶೇಷ.
ಜಿಯೋ ಕಾಲಿಟ್ಟ ಸಂದರ್ಭವದು. 2017ರ ಆರಂಭದಲ್ಲಿ ಹಳೆಯ ನೋಕಿಯಾ X200ನಲ್ಲಿ ಬಿಎಸ್ಎನ್ಎಲ್ ಸಿಮ್ ಇಟ್ಟುಕೊಂಡು ಕಷ್ಟಪಡುತ್ತಿದ್ದೆ. ಆದರೆ ಅದರಲ್ಲೇ ಫೇಸ್‌ಬುಕ್ ಮತ್ತು ವಾಟ್ಸಪ್ 2ಜಿ ಬಿಎಸ್ಎನ್ಎಲ್ ನೆಟ್‌ವರ್ಕ್‌ನಲ್ಲಿ ಬಳಸುತ್ತಿದ್ದೆ. ಇನ್ನೇನು ಕೆಲ ಹಳೆಯ ಮೊಬೈಲ್ ಮೂಲಕ ವಾಟ್ಸಪ್ ಬಳಸಲು ಸಾಧ್ಯವಿಲ್ಲ ಎಂದು ಸೂಚನೆ ಸಿಕ್ಕಿದಾಗ ಅನಿವಾರ್ಯವಾಗಿ ಹೊಸ ಮೊಬೈಲ್ ಖರೀದಿಸಬೇಕಾಗಿ ಬಂತು. ಆಗ ನಾನು ರೆಡ್ಮಿ 4ಜಿ ಮೊಬೈಲ್ ಖರೀದಿಸಿದೆ. ಅಲ್ಲದೆ ಮನೆಯಲ್ಲಿ ಜಿಯೋ ನೆಟ್‌ವರ್ಕ್ ಚೆನ್ನಾಗಿ ಸಿಗುತ್ತಿದ್ದ ಕಾರಣ ನನ್ನ ನಂಬರನ್ನು ಬಿಎಸ್ಎನ್ಎಲ್‌ನಿಂದ ಜಿಯೋಗೆ ಪೋರ್ಟ್ ಮಾಡಿಕೊಂಡೆ. ಆದರೆ ದುರದೃಷ್ಟವಶಾತ್ ಅಡ್ಯನಡ್ಕದಲ್ಲಿ ಜಿಯೋ ನೆಟ್‌ವರ್ಕ್ ಇರಲಿಲ್ಲವಾದ್ದರಿಂದ ಬೇರೊಂದು ಬಿಎಸ್ಎನ್ಎಲ್ ಸಿಮ್ ಅನಿವಾರ್ಯವಾಗಿ ಇಟ್ಟುಕೊಂಡು ಕಾಲಕಳೆಯತೊಡಗಿದ್ದೆ.
ಅಡ್ಯನಡ್ಕಕ್ಕೆ ಜಿಯೋ ಸಿಗ್ನಲ್ ಸಿಗುವಂತಾಗಬೇಕೆಂದು ಹಟ ಹೂಡಿ ಕಸ್ಟಮರ್ ಕೇರ್ ಅಧಿಕಾರಿಗಳಿಗೆ ರಿಕ್ವೆಸ್ಟ್‌ಗಳನ್ನು ಮಾಡತೊಡಗಿದೆವು. ಗೆಳೆಯರಾದ ನಿರಂಜನ ಮಳಿ, ಶಿವ ಮತ್ತು ಇತರರು ನನ್ನೊಡನೆ ಸೇರಿಕೊಂಡರು. ಕರ್ನಾಟಕದ ನೆಟ್‌ವರ್ಕ್ ಮುಖ್ಯಸ್ಥರಾಗಿದ್ದ ಜಿಜಿ ವರ್ಗೀಸ್ ಅವರಿಗೆ ಮೈಲ್ ಮಾಡಿ ನಂಬರ್ ಪಡೆದು ಸಂಪರ್ಕಿಸಿದ ಬಳಿಕ ಈ ವಿಭಾಗದ ಸತೀಶ್ ರಾವ್ ಮತ್ತು ಬಿಜು ಎಂಬವರನ್ನು ಕೂಡ ಮಾತನಾಡಿಸಿದೆ. 2018ರ ಜನವರಿ ಮತ್ತು ಆ ನಂತರ ಮಾರ್ಚ್ ತಿಂಗಳಲ್ಲಿ ನೆಟ್‌ವರ್ಕ್ ಕೊಡುತ್ತೇವೆ ಎಂದು ಆ ಹಿಂದೆ ಸಿಕ್ಕಿದ ರೆಸೊಲ್ಯೂಶನ್ ಬಗ್ಗೆ ಚರ್ಚಿಸಿದಾಗ "ಅಡ್ಯನಡ್ಕದಲ್ಲಿ ಕನೆಕ್ಟಿವಿಟಿ ಸಮಸ್ಯೆ ಇದೆ. ಮೈಕ್ರೋವೇವ್ ಕನೆಕ್ಟಿವಿಟಿ ಸಿಗುತ್ತಿಲ್ಲ. ಬಿಎಸ್ಎನ್ಎಲ್ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ಆದರೆ ಅಲ್ಲಿ ಗ್ರೌಂಡ್ ಕೇಬಲ್ ಅಳವಡಿಸಲು ಪರವಾನಗಿ ಇಲ್ಲ. ಇಂತಹ ಪ್ಲಾನ್ ಆಗಿರುವ ಸೈಟ್‌ಗಳು ಸಾಕಷ್ಟು ಆಕ್ಟಿವೇಟ್ ಆಗದೆ ಉಳಿದಂಥವು ಇವೆ. ಮಂದೆ ನೋಡಬೇಕಾಗಿದೆ" ಎಂದರು. ನಾವು ಹೀಗಿದ್ದರೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿನಂತಿಸುತ್ತಲೇ ಬಂದೆವು. ಆ ಮಾರ್ಚ್‌ನಲ್ಲಿ ಆಕ್ಟಿವೇಟ್ ಆಗಬೇಕಾಗಿದ್ದ ಜಿಯೋ ಸೈಟ್ ಲೈವ್ ಆಗಲಿಲ್ಲ.
ಬಳಿಕ ನಾವು care@jio.com, jiji varghese, ಬಿಜು ಅವರಲ್ಲಿ ವಿಚಾರಿಸುತ್ತಲೇ ಬಂದೆವು. ಮಧ್ಯ ಬೇರೊಂದು ಜಿಯೋ ಟವರ್ ಬಂದ ನಂತರ ಬಹುಶಃ ಕನೆಕ್ಟಿವಿಟಿ ಸಮಸ್ಯೆ ಪರಿಹಾರವಾಗಿತ್ತೇನೋ. ಆದರೆ ಸರಕಾರದ ಪರವಾನಗಿ ಪಡೆದಿದ್ದರೂ ಮೊದಲಿನ ಸೈಟ್ ರದ್ದಾಗಿತ್ತು. ಆಗ ನಾನು ಈ ಎಲ್ಲಾ ವಿಚಾರಗಳನ್ನು appellate.kar@jio.com ಅವರಿಗೆ ಆಧಾರಗಳೊಂದಿಗೆ ಮೇಲ್ಮನವಿ ಸಲ್ಲಿಸಿದೆ. ನಿರಂಜನ ಅವರೂ ಪ್ರಯತ್ನ ನಡೆಸಿದರು. ಮತ್ತೆ ಸೈಟ್ ಪ್ಲಾನ್ ಮಾಡಲು ಹೇಳಿದೆವು. ನಮ್ಮ ರಿಕ್ವೆಸ್ಟ್‌ಗಳಿಗೆ ಬಂದಿರುವ ಆಶ್ವಾಸನೆಗಳು ಈಡೇರಿಕೆಯಾಗಿಲ್ಲವೆಂದೂ ಯಾಕೆ ಆ ಪ್ರದೇಶದಲ್ಲಿ ಮಾತ್ರ ಹೀಗಾಗುತ್ತದೆ ಎಂದೂ ಬರೆದೆವು ಅಲ್ಲದೆ ಅಡ್ಯನಡ್ಕ ಕೇರಳ ಮತ್ತು ಕರ್ನಾಟಕದ ಸಂಪರ್ಕ ಸೇತುವಾಗಿದೆ ಎಂಬ ಬಗ್ಗೆ ಕೂಡ ಮನವರಿಕೆ ಮಾಡಿದೆವು. 2018ರ ಮಳೆಗಾಲದಲ್ಲಿ ನನ್ನ appellate ರಿಕ್ವೆಸ್ಟ್‌ಗೆ ಸ್ಪಂದಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಮತ್ತೆ ಒಬ್ಬರು ನನ್ನ ಬಳಿ ಮಾಹಿತಿ ಪಡೆದು ಸ್ಥಳ ವಿಚಾರಣೆ ನಡೆಸಿ ತೆರಳಿದರು. ಹೀಗಿದ್ದರೂ ನನಗೆ ಅಪ್‍ಡೇಟ್‌ಗಳಲ್ಲಿ ಸೆಕ್ಯುರಿಟಿ ಸಮಸ್ಯೆಯಿಂದ ಡೆಡ್‌ಲೈನ್ ವಿಧಿಸಲು ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿ ಸಿಕ್ಕಿತು. ಆದರೆ ಇನ್ನೂ ಹೆಚ್ಚಿನ ದೂರುಗಳನ್ನು ನೀಡಿದಾಗ ಹೊಸ ಸೈಟ್ ಮಾಡುತ್ತಿಲ್ಲ. ಆದರೆ 120 ದಿನಗಳಲ್ಲಿ ಕನೆಕ್ಟಿವಿಟಿ ಕೊಡುತ್ತೇವೆ ಎಂದು ತಿಳಿಸಿದರು. ಆದರೆ ನಾನು ಮತ್ತೆ ಇದನ್ನೇ ಆಧರಿಸಿ ಮೇಲ್ಮನವಿಗಳನ್ನು ಸಲ್ಲಿಸುತ್ತಿದ್ದು, ಕರ್ನಾಟಕದ ನೆಟ್‌ವರ್ಕ್ ಮುಖ್ಯಸ್ಥರಾದ Kavita.nelagiriyappa@ril.com ಅವರಿಗೂ ತಿಳಿಸಿದೆ. appellate.kar@jio.com ಅವರಿಗೆ ತಕ್ಷಣ ಏನಕೇನ ಪ್ರಕಾರೇಣ ಕನೆಕ್ಟಿವಿಟಿ ಒದಗಿಸುವಂತೆ ಆಗ್ರಹಿಸಿದೆ. ಇದಾದ ಕೆಲ ದಿನಗಳಲ್ಲೇ ಏರ್‌ಟೆಲ್ ಟವರ್ ಜೊತೆ ಹಂಚಿಕೆ ಮಾಡಿಕೊಂಡು ಜಿಯೋದವರು ತುರ್ತು 4ಜಿ ಮೈಕ್ರೋವೇವ್ ಕನೆಕ್ಟಿವಿಟಿ ಒದಗಿಸುತ್ತಿದ್ದು ಗುಡ್ಡಗಳಿಂದ ಆವೃತವಾದ ಅಡ್ಯನಡ್ಕ ಪ್ರದೇಶದವರು ಜಿಯೋದವರಿಗೆ ಇಷ್ಟಕ್ಕೂ ಧನ್ಯವಾದ ಹೇಳಬೇಕಾಗಿದೆ.
-ಶಿವಕುಮಾರ ಸಾಯ 'ಅಭಿಜಿತ್'
ನಿಮ್ಮ ಸಾಧನೆˌ ಹಠ ಫಲ ನೀಡುವ ಕಾಲ ಬೇಗನೇ ಸನ್ನಿಹಿತವಾಗಲಿ ಎಂದು ಹಾರೈಸುವೆ.
ReplyDeleteThank you sir
ReplyDeleteನಾನು ಶಿವ ತುಂಬಾನೆ ಮೈಲ್ ಮಡದಿದ್ವಿ
ReplyDeleteBrother nim number send maadi
ReplyDeleteನಮಗೆ ಜಿಯೋ ಕಡೆಯಿಂದ ಟವರ್ ಇನ್ಸ್ಟಾಲೇಶನ್ ಮಾಡ್ತೀವಿ ಅಂತ ಹೇಳಿದ್ದಾರೆ ಮುಂಬೈಯಿಂದ ಪೋಸ್ಟ್ ಅಲಿ ಲೆಟ್ರು ಕೂಡ ಬಂದಿದೆ ಕೂಡ ಬಂದಿದೆ ಇದು ಸತ್ಯವೇ ನಮಗೆ ಸ್ವಲ್ಪ ತಿಳಿಸಿ ಕೊಡಿ
ReplyDelete