'ಟೆಲಿಪತಿ' ಪ್ರಯೋಗಗಳ ಸುತ್ತಮುತ್ತ
ಸುಮಾರು ವರ್ಷಗಳ ಹಿಂದೊಮ್ಮೆ ದಿಢೀರಾಗಿ ನನ್ನ ಬಾಲ್ಯದ ಗುರುಗಳೂ, ಸ್ನೇಹಿತರೂ ಆದ ಶ್ರೀಯುತ ಶ್ರೀಪತಿ ಭಟ್ ಪದ್ಯಾಣ ಅವರು "Do you know telepathy?" ಎಂದು ಒಂದು ಮೊಬೈಲ್ ಮೆಸೇಜ್ ಕಳಿಸಿದ್ದರು. "Don't know" ಎಂದಷ್ಟೇ ಉತ್ತರಿಸಿದ್ದೆ. ಹಲವಾರು ವರ್ಷಗಳ ನಂತರ ಅಂತಹ ಅರೆವಿಜ್ಞಾನದ ವಿಷಯಗಳು ನನ್ನ ಪರಿಗಣನೆಗೆ ಬಂದಿದ್ದವು. ಅದು 2016ನೇ ಇಸವಿ . ವಿಶೇಷಾಂಕವೊಂದರಲ್ಲಿ 'ಅತೀಂದ್ರಿಯ ಲೋಕದಲ್ಲಿ' ಎಂಬ ಲೇಖನವನ್ನು ಓದುತ್ತಿದ್ದಾಗ ಕುತೂಹಲ ಕೆರಳಿತು. ಆ ನಂತರ ಟೆಲಿಪತಿ ಎಂಬ ಈ mind to mind communication ಬಗ್ಗೆ ಕುತೂಹಲಿಯಾದೆ. ಟೆಲಿಪತಿ ಪ್ರಯೋಗಗಳನ್ನು ಮಾಡಲು ವಿಶೇಷ ಶಕ್ತಿ ಬೇಕಾಗುತ್ತದೆ. ಈ ದಿನಗಳಲ್ಲಿ ನಾವು ಪ್ರಾಪಂಚಿಕ ನೆಟ್‌ವರ್ಕ್‌ಗಳನ್ನು ಹೆಚ್ಚಿಸಿಕೊಂ ಡಿದ್ದೇವೆ. ಆದರೆ ನಮ್ಮ "inner engineering" ಬಗ್ಗೆ ತಿಳಿದಿಲ್ಲ. ನಿಜವಾಗಿ ಪಿಂಡಾಂಡದಲ್ಲಿ ಬ್ರಹ್ಮಾಂಡ ಅಡಗಿದೆ ಎನ್ನುತ್ತಾರೆ ನೋಡಿ. ನಮ್ಮ ಒಳಗೇನೇ ಎಲ್ಲವೂ ಇದೆಯಂತೆ. ಟೆಲಿಪತಿಕ್ ವ್ಯಕ್ತಿಗಳಲ್ಲಿ ಎರಡು ಬಗೆ. ಕೆಲವರು ಸುಲಭವಾಗಿ ರಿಸೀವ್ ಮಾಡುತ್ತಾರೆ. ಇನ್ನು ಕೆಲವರು ಸುಲಭವಾಗಿ ಸಂದೇಶ ಕಳುಹಿಸುತ್ತಾರೆ. ಮನುಷ್ಯನೆಂದರೆ ಒಂದು ಜೀವರಾಸಾಯನಿಕ ವ್ಯವಸ್ಥೆ ಎಂದು ವೈದ್ಯ ವಿಜ್ಞಾನ ಹೇಳುತ್ತದೆ. ದೇಹದ ಒಳಗೆ ಸಂವೇದನೆಗಳನ್ನು ರವಾನಿಸಬಲ್ಲ ಇಂದ್ರಿಯಗಳೊಂದಿಗಿನ ಆಂತರಿಕ ನೆಟ್‌ವರ್ಕ್ ವ್ಯವಸ್ಥೆ ಇದೆ ತಾನೇ? ಅ...