ತಾಲೂಕು ಚುಸಾಪ ಅಧ್ಯಕ್ಷರಾಗಲಿರುವ ವರ್ಮರು

ನಮ್ಮ ಆಪ್ತರು ಯಾವ ಸಾಧನೆ ಮಾಡಿದರೂ ಅದು ನಮ್ಮದೇ ಸಾಧನೆ ಎಂಬಷ್ಟು ಸಂತೋಷವಾಗುತ್ತದೆ. ಏಕೆಂದರೆ ನಮ್ಮ ಮನಸ್ಸಿಗೆ ಬಾಹ್ಯದ ದೃಢೀಕರಣವೊಂದು ಏನೋ ಒಂದು ಮಹತ್ವ ನೀಡಿದಂತೆನಿಸುತ್ತದೆ.
ಅಮೃತವಾಹಿನಿ ಮಾಡುತ್ತಿರುವ ಕೆಲಸಗಳಿಗೆ ಸಿಂಹದ ಬಲ ಸಿಕ್ಕಂತಾಗಿದೆ. ಈ ಹಿಂದೆ ನಾವು ನಿರೀಕ್ಷಿಸಿರುವಂತೆ ನಮ್ಮ ಸ್ನೇಹಿತರು ಸಂಕಲ್ಪದ ಪ್ರಕಾರ ಸಾಹಿತ್ಯಪರ ಚಟುವಟಿಕೆಗಳಲ್ಲಿ ಮುನ್ನಡೆಯುತ್ತಿರುವುದು ಸಂತಸಕರ ಎನ್ನಬೇಕು. ಈಗ ಕಾರಣ ಬೇರೇನಲ್ಲ. ಶ್ರೀಯುತ ರಾಜಾರಾಮ ವರ್ಮ ವಿಟ್ಲ ಅವರು ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂಬುದೇ ಸಂಚಲನ ಮೂಡಿಸುವ ವಿದ್ಯಮಾನವಾಗಿದೆ.
ಶ್ರೀಯುತ ರಾಜಾರಾಮ ವರ್ಮ ಅವರು ಮುಖ್ಯವಾಗಿ ಕವಿ. ಸಂಘಟಕ. ನನ್ನ ಅತ್ಯಂತ ಹತ್ತಿರದ ಸ್ನೇಹಿತರು. ಆಡಳಿತಾತ್ಮಕವಾಗಿ ಮತ್ತು ಮಿಕ್ಕೆಲ್ಲಾ ರೀತಿನೀತಿಗಳಿಂದಲೂ ಅಪಾರ ಅನುಭವಿ ಮತ್ತು ಜ್ಞಾನವುಳ್ಳವರು. ವಿದ್ಯಾಸಂಸ್ಥೆಗಳಲ್ಲಿ ಮಹತ್ವದ ಹುದ್ದೆಗಳನ್ನು ಅಲಂಕರಿಸಿದವರು. ಹಾಗೆಂದು ಯಾವುದೇ ಆಗ್ರಹಗಳನ್ನು ಸಮಗ್ರವಾಗಿ ಪರಿಶೀಲಿಸಿಯೇ ಅವರು ನಿರ್ಣಯಗಳನ್ನು ಎತ್ತಿಕೊಳ್ಳುತ್ತಾರೆ.
ಶ್ರೀಯುತ ರಾಜಾರಾಮ ವರ್ಮ ವಿಟ್ಲ ಅವರು ಉತ್ತಮ ಕವಿ. ಕಟ್ಟುನಿಟ್ಟಿನ ವ್ಯಕ್ತಿ. ಇವರ ನಿಲುವುಗಳೆಲ್ಲವೂ ಜೀವಪರ. ಸಮಾಜಶಾಸ್ತ್ರೀಯ ನೆಲೆಗಟ್ಟಿನಲ್ಲಿ ಯಾವುದನ್ನಾದರೂ ಇದಮಿತ್ಥಂ ಎಂಬಂತೆ ವಿಮರ್ಶೆ ಮಾಡಬಲ್ಲ ಪಾಂಡಿತ್ಯವಿದೆ. ಹೀಗಿದ್ದೂ ಮಾತುಗಳಲ್ಲಿ ತೀರ್ಮಾನಗಳನ್ನು ಕೊಡದೇ ಸ್ವಂತಿಕೆಗಳಿಗೆ ಸ್ವಾತಂತ್ರ್ಯ ನೀಡುವ ವಾಂಛೆ ಉಳ್ಳವರು. ನನ್ನಂತೆ ಅನೇಕರಿಗೆ ಅವರು ಅದಕ್ಕೇ ಇಷ್ಟವಾಗುತ್ತಾರೇನೋ.
ಶ್ರೀಯುತರು ಸಂಘಟನಾತ್ಮಕವಾಗಿ ಪ್ರಸ್ತುತ ವಿಟ್ಲ ಹೋಬಳಿ ಸಾಹಿತ್ಯ ಪರಿಷತ್ ಸಂಘಟನಾ ಸಂಚಾಲಕರೂ ಕೂಡ ಹೌದು. ಇನ್ನೂ ಹಲವಾರು ಸಂಘಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿದ್ದಾರೆ. ಇದಕ್ಕೆ ಹೊರತಾಗಿ ಅಪಾರ ಜನಪ್ರಿಯತೆ ಹಾಗೂ ಬೆಂಬಲ ಹೊಂದಿದ್ದಾರೆ.
ಮುಂಬರುವ ಕೆಲವೇ ದಿನಗಳಲ್ಲಿ ಶ್ರೀಯುತ ವರ್ಮರ ಪ್ರಭಾವ ಏನೆಂಬುದು ಪರಿಸ್ಫುಟವಾಗಿ ವ್ಯಕ್ತವಾಗುವ ಎಲ್ಲ ಸಾಧ್ಯತೆಗಳಿವೆ. ನನ್ನ ಗೌರವಪೂರ್ವಕ ಮಿತ್ರರಲ್ಲೊಬ್ಬರೂ ಆಗಿರುವ ಶ್ರೀಯುತ ರಾಜಾರಾಮ ವರ್ಮ, ವಿಟ್ಲ ಅರಮನೆ ಅವರಿಗೆ ನನ್ನ ಮತ್ತು ನನ್ನ ಪ್ರಿಯಸ್ನೇಹಿತರೆಲ್ಲರ ಶುಭಾಶಯಗಳು.

✍️ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್