ಸ್ಫೂರ್ತಿ

ನಮ್ಮ ನಾಯಕ ಇವನು
ಜಗದ ರಕ್ಷಕ ಶಿವನು;
ಶಂಕರ, ಶಶಿಧರ, ವರ ಗಂಗಾಧರ
ದೇವನೊಬ್ಬ ನಾಮ ಹಲವು, ಮನೋಹರ!

ಇದು ಹೊಸ ಇತಿಹಾಸದ ಪ್ರದರ್ಶನ,
ಮಹಾಶಕ್ತಿ - ಸುದರ್ಶನ - ನಿದರ್ಶನ;
ಪಂಥದಲ್ಲಿ ಗೆಲ್ಲುತ್ತಾನೆ ಹಿಗ್ಗುತ,
ಸಂತೆಯಲ್ಲಿ ಸಾಗುತ್ತಾನೆ ನುಗ್ಗುತ!

ಉಸಿರಾಡುವ ಗಾಳಿಯ ಬೀಸಿ,
ಹಸಿರೆಲೆಯ ತೋರಣ ಮೆರೆಸಿ,
ಸ್ವಯಂಪ್ರಭೆಯ ಬೀರುತ್ತಾನೆ ಪ್ರವರ್ತಕ
ಲೋಕವೆಲ್ಲ ಇವನಿಂದ್ಲೇ ಸಾರ್ಥಕ!

ನಮ್ಮ ಮನದ ಮನೆಯ ಸ್ಫೂರ್ತಿ,
ಈ ಭೂಮಂಡಲದ ಕೀರ್ತಿ;
ಸಾರಬೇಕು ಸೋಜಿಗದ ಸಂಗತಿ
ಮೆಚ್ಚಿಕೊಂಡು ಹಚ್ಚಬೇಕು ಆರತಿ!

✍️ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್