ಪ್ರಭಾವಳಿ
ನೀನೊಬ್ಬ ಹಠಯೋಗಿ-
ಧ್ಯಾನವೇ ನಿನ್ನ ನಿಯತ್ತು;
ತಾಳಬೇಕಿದೆ ಮೌನ
ತಾಕತ್ತಿಗಾಗಿ
ಒಂದು ಹರಕತ್ತಿನಂತೆ
ಕಣ್ಣೆದುರು ತಂದುಕೋ,
ನೀನೊಂದು ಬಡಜೀವವಲ್ಲ;
ಬಲಿಷ್ಠವಾದ ಪ್ರತಿಮೆಯೇ-
ಜನ ಎಷ್ಟೊಂದು ಹೊಡೆದರೂ
ವಜ್ರದಂತೆ
ಉಕ್ಕಿನ ಜೀವಂತ ಮನುಷ್ಯನಂತೆ
ಪ್ರತಿಷ್ಠಿತವಾಗಿರುವೆ
ಮೇಲೆರಗುವ
ಮನಸ್ಸು ಮಾಡಿದರೆ
ಶತ್ರುಗಳು
ನೆಪ ಮಾತ್ರಕ್ಕೆ
ಚೂರು ಚೂರೇ
ಸಿಡಿದು
ಸಾಯುವರು
ನೀನೊಂದು
ಪ್ರಚಂಡ ಪ್ರಭಾವಳಿ-
ನಿನ್ನೊಳಗಿರುತ್ತದೆ ಅಖಂಡವೂ;
ಆದರೂ ನೀನಿಲ್ಲವಂತೆ
ಕೆಲವರೊಳಗೆ
ಚಿನ್ಮಯನೇ,
ಉಸಿರು ಬಿಡು ಸರಿಯಾಗಿ-
ಹೊರ ಕಳಿಸಬೇಕಾದ್ದನ್ನು ಮರೆ;
ಉಸಿರೆಳೆದುಕೋ
ನೆಲೆ ನಿಲ್ಲುತ್ತ
✍️ಶಿವಕುಮಾರ ಸಾಯ 'ಅಭಿಜಿತ್'
Comments
Post a Comment