ತಂತ್ರಗಾರಿಕೆ

ನಮ್ಮ ಸುತ್ತಲೂ ಹಲವು ಬಗೆಯ ಜನರು ಇರುತ್ತಾರೆ. ವಿವಿಧ ರಂಗಗಳಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಹಾಗೂ ಮುಂದುವರಿಯಲು ಹಲವಾರು ಚಾಣಾಕ್ಷ ನಡೆಗಳನ್ನು, ತಂತ್ರಗಳನ್ನು ಅನುಸರಿಸುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಇಂದು ಇಂತಹ ತಂತ್ರಗಾರಿಕೆ ನಮ್ಮ ಪ್ರಾಪಂಚಿಕತೆಯ ಬಹಳ ಮುಖ್ಯವಾದ ಅನಿವಾರ್ಯತೆಯಾಗಿ ಪರಿಣಮಿಸಿದೆ.
ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಉದ್ಯೋಗಿಗಳು ತಂತ್ರಗಾರಿಕೆಯನ್ನು ಅನುಸರಿಸುವುದನ್ನು ನೋಡುತ್ತೇವೆ. ಯಾವುದೇ ತಂತ್ರವನ್ನು ಅನುಸರಿಸದಿದ್ದರೆ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಾಧ್ಯವೇ ಇಲ್ಲವೇನೋ.
ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ - ಅದನ್ನು ನೀವೇ ಹುಡುಕಿಕೊಳ್ಳಬೇಕು ಎನ್ನುತ್ತಾರೆ. ನಿಮ್ಮ ಚಾಣಾಕ್ಷತೆಯನ್ನು, ತಂತ್ರಗಾರಿಕೆಯನ್ನು ಪ್ರತಿದಿನ ಹೆಚ್ಚಿಸಿಕೊಳ್ಳುತ್ತಲೇ ಇರಬೇಕು.
ನಮ್ಮನ್ನು ಮೆಚ್ಚುವ ಒಂದಷ್ಟು ಜನರ ಗುಂಪನ್ನು ನಾವು ಹೊಂದಿರಬೇಕು. ನಮ್ಮ ಕಾರ್ಯಗಳನ್ನು ಅನಿವಾರ್ಯವಾಗಿ ಜಾಹೀರುಪಡಿಸಲೂ ಬೇಕು. ಏಕೆಂದರೆ ವಿನಾಕಾರಣ 100 ಜನರು ದೂಷಿಸುವ ಸಂದರ್ಭದಲ್ಲಿ 900 ಜನರು ನಿಮ್ಮನ್ನು ಅರ್ಥಬದ್ಧವಾಗಿ ಕೊಂಡಾಡುತ್ತಿದ್ದರೆ ದೂಷಣೆಗಳು ಹಿಂದೆ ಸರಿಯುತ್ತವೆ.
ನನ್ನ ಸ್ನೇಹಿತರೊಡನೆ ಇಂತಹ ಲೋಕವೃತ್ತಾಂತಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೆ. ಸ್ನೇಹಿತರೊಬ್ಬರು ದೊಡ್ಡ ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಅವರು ನಮ್ಮ ಮಾತುಕತೆಯ ಮಧ್ಯೆ "ಇವತ್ತು ಎದುರಲ್ಲಿ ರೌಡಿಯಾಗಿರಲು ಸಾಧ್ಯವಿಲ್ಲದಿರಬಹುದು. ಆದರೆ ಹಿಂದಿನಿಂದಲಾದರೂ ರೌಡಿಯಾಗಿರಬೇಕು" ಎಂದು ತಮಾಷೆಯಾಗಿಯೇ ಹೇಳಿದರು.
ಈ ಜಗತ್ತಿನಲ್ಲಿ ಎಲ್ಲರೂ ಒಂದಲ್ಲ ಒಂದು ವಿಷಯದಲ್ಲಿ ಮುಂದಿರುತ್ತಾರೆ ಎನ್ನಬಹುದು. ಹಾಗಿದ್ದಾಗ ಎಲ್ಲರಿಗೆ ಎಲ್ಲರೂ ಒಂದರ್ಥದಲ್ಲಿ ಅನಿವಾರ್ಯವೇ.

✍️ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್