ನಗುವ ವಸಂತ
ನಿನ್ನನೆ ನೋಡಿ ನಗುವ ವಸಂತ
ಯಾರಿವನು?
ವಿಳಾಸವಿಲ್ಲದೆ, ವಿಲಾಸ ತೋರುವ
ಚೆನ್ನಿಗನು!
ಕನಸಿನ ಊರಿನ ಕಥೆಯ ಹೇಳುವ
ಜೊತೆಗಾರ;
ಕ್ರೌರ್ಯದ ಮುಂದೆ ಶೌರ್ಯವ ಸಾರುವ
ಸರದಾರ!
ಕಡಲಿನ ಮುತ್ತು, ಸೋಜಿಗವಿತ್ತು
ಸಲಹುವನು;
ಗುಟ್ಟನು ಹೇಳಿ ಚಂದ್ರನ ಲೋಕಕೆ
ಕರೆಯುವನು.
ಒಲವಿನ ಉಡುಗೊರೆ, ಪ್ರೇಮದ ಕಾಣಿಕೆ
ಮೆಚ್ಚುವನು;
ಸರಸದಿ ಮೋಹಕ ಮಾತಿನ ವರಸೆಯ
ಬಿಚ್ಚುವನು.
✍️ಶಿವಕುಮಾರ ಸಾಯ
Comments
Post a Comment