ಅಭಯ

ಅಲೆದಾಡದೆ, ಸುಳಿದಾಡದೆ
ಸ್ಥಿರವಾಯಿತು ಮನಸು
ದೇವ, ನಿನ್ನ ಧ್ಯಾನದಿಂದ
ನನಸಾಯಿತು ಕನಸು

ಸರಾಗವಾಗಿ ಹೊಳೆದು ಬಂದು
ಶಾಂತಿ ನೀಡಿದೆ
ಮೋಹ - ಮಂಜು ಮಾಯವಾಗಿ
ಭ್ರಾಂತಿಯಳಿದಿದೆ

ನಾಡ ಜನರ ಒಂದಾಗಿಸಿ
ಧರೆಯನುಳಿಸಿದೆ
ಮೋಡ ಹರಡಿ, ಮಳೆಯ ಸುರಿಸಿ
ಆದರಿಸಿದೆ

ಉಭಯ ನೀಗಿ, ಅಭಯ ತುಂಬಿ
ಮತಿಯ ತೋರಿದೆ
ದೈವದೊಲುಮೆ - ನಿಲುಮೆಯಿಂದ
ಹಿತವುಂಟಾಗಿದೆ

✍️ ಶಿವಕುಮಾರ ಸಾಯ

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್