ಅನುಭವ

ನಗುನಗುತ ಬದುಕಿ ಬಾಳು/ ಓ ಮನುಜ
ಹಸನಾಗಿ ಹರುಷ ತಾಳು//

ಗಾಢನಿದಿರೆಯ ಸೀಳಿ ಸೋಜಿಗವು ಸೆಳೆಯುತಿದೆ
ಮೂಢಮನ ಸುಮ್ಮನಾಗು/
ಖಾಲಿಹೃದಯವಿದಲ್ಲ; ವಾಲಗದ ಶಬ್ದವಿದೆ-
ಖಾಸಗಿಯ ಕನಸ ಕಾಣು/ ಹೊಳೆಹೊಳೆವ
ಖಾಸಗಿಯ ಕನಸ ಕಾಣು//

ಅನ್ಯವೆಂಬುದು ಇಲ್ಲ; ಧನ್ಯವಿರು ಜೀವಿತಕೆ
ಮಾನವನೆ ಮಾನ್ಯನಾಗು/
ನಂಬಿಕೆಯ ನೆಲೆಯಿರಲಿ, ನಲಿವು ಚಿರವಾಗಿರಲಿ
ಮನವೇ ವಿಶಾಲವಾಗು/ ಬೆಳೆಬೆಳೆದು
ಮನವೇ ವಿಶಾಲವಾಗು//

ಹಗಲು ಇದೆ, ರಾತ್ರಿ ಇದೆ; ಮುಗಿಲು-ಮಳೆ-ಋತುವು ಇದೆ
ಸೊಗಸಾಗಿ ಜಗವ ನೋಡು/
ಬೆಚ್ಚನೆಯ ಹಾರೈಕೆ, ಇಚ್ಛೆಗಳ ಪೂರೈಕೆ
ಅನುಭವಿಸಿ ಪಕ್ವವಾಗು/ ನಳನಳಿಸಿ
ಅನುಭವಿಸಿ ಪಕ್ವವಾಗು//

✍️ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್