ಸ್ನೇಹ ಸಂಜೀವಿನಿ
ಸ್ನೇಹವು ಸಂಜೀವಿನಿಯಂತೆ. ಒಳ್ಳೆಯ ಸ್ನೇಹಿತರೆನಿಸಿಕೊಳ್ಳಬೇಕಾದರೆ ನಾವು ಈ 13 ಸೂತ್ರಗಳನ್ನು ಪಾಲಿಸಬೇಕು ಎನ್ನಲಾಗುತ್ತದೆ. ಆ ಬದ್ಧತೆಗಳತ್ತ ಇಲ್ಲಿ ಒಂದು ಗಮನ.
1. ವಿಶ್ವಾಸಾರ್ಹನಾಗಿರುತ್ತೇನೆ.
2. ಇತರರೊಂದಿಗೆ ಪ್ರಾಮಾಣಿಕನಾಗಿರುತ್ತೇನೆ.
3. ಸಾಮಾನ್ಯವಾಗಿ ನಂಬಿಕಸ್ಥನಾಗಿರುತ್ತೇನೆ.
4. ಕಾಳಜಿ ತೋರಬೇಕಾದವರಲ್ಲಿ ನಿಷ್ಠನಾಗಿರುತ್ತೇನೆ.
5. ಸುಲಭವಾಗಿ ಮತ್ತೊಬ್ಬರಲ್ಲಿ ನಂಬಿಕೆಯನ್ನು ತಳೆಯುತ್ತೇನೆ.
6. ಅನುಭೂತಿಯನ್ನು ಅನುಭವಿಸುತ್ತೇನೆ ಮತ್ತು ವ್ಯಕ್ತಪಡಿಸುತ್ತೇನೆ.
7. ತೀರ್ಮಾನಗಾರನಾಗಹೊರಡುವುದಿಲ್ಲ. (Non - judgemental)
8. ಒಳ್ಳೆಯ ಕೇಳುಗನಾಗಿರುತ್ತೇನೆ.
9. ಬೇರೆಯವರ ಸುಖದ ಸಮಯಗಳಲ್ಲಿ ಬೆಂಬಲಿಗನಾಗಿರುತ್ತೇನೆ.
10. ಬೇರೆಯವರ ದುಃಖದ ಸಮಯಗಳಲ್ಲಿ ಬೆಂಬಲಿಗನಾಗಿರುತ್ತೇನೆ.
11. ಆತ್ಮವಿಶ್ವಾಸಿಯಾಗಿರುತ್ತೇನೆ.
12. ಸಾಮಾನ್ಯವಾಗಿ ಜೀವನದಲ್ಲಿ ಹಾಸ್ಯವನ್ನು ಕಾಣಬಲ್ಲವನಾಗಿರುತ್ತೇನೆ.
13. ಸುತ್ತಲೂ ವಿನೋದ ಮತ್ತು ತಮಾಷೆಯನ್ನು ಕೊಡುತ್ತೇನೆ.
✍️ ಶಿವಕುಮಾರ ಸಾಯ 'ಅಭಿಜಿತ್'
ಶುಭಂ
ReplyDelete