ನಿಲುವು

ಗೆಲುವು ನಿನ್ನದಾಗಲು
ಒಲವಿರಬೇಕು
ಬಲವಿರಬೇಕು
ಛಲವೂ ಇರಬೇಕು.

ನಿಯಮ, ನಿಷ್ಪತ್ತಿ ಬೇಕು
ಬದುಕಿ ಬಾಳಲು;
ಕಿವಿಮಾತು ಹೇಳಲು,
ಆಶಯವ ತಾಳಲು.

ವರ್ಣರಂಜಿತ
ಪಾತ್ರ - ಸೂತ್ರಗಳು,
ಬಗೆಬಗೆಯ ಕಲ್ಪನೆಗಳು,
ಹಲವು ಆಯಾಮಗಳು,
ಕೈಚಳಕ.

ಸಲಹುವ ಧರ್ಮ
ಸ್ವತಂತ್ರ;
ಕರ್ಮಭೂಮಿಯೇ
ಸ್ವರ್ಗ-
ದಯೆಯಿಲ್ಲದ
ಧರ್ಮವಿಲ್ಲ

ಈ ನಡುವೆ ನಿರಂತರ-
ಅತ್ತಲೂ ಗೆಲುವು
ಇತ್ತಲೂ ಗೆಲುವು
ಸುತ್ತಲೂ ಗೆಲುವು
ನೀ ಹೊತ್ತ ನಿಲುವು!

✍️ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್