ಹೀಗೊಂದು ಹಬ್ಬ ಮತ್ತು ಕುಶಲೋಪರಿ

ವಿಜಯದಶಮಿಯ ದಿನ ಬೆಳಿಗ್ಗೆ ನನ್ನ ಕಾಲೇಜು ಸಹಪಾಠಿಯೂ, ಸ್ನೇಹಿತರೂ, ಅನಿಮೇಟರ್ ಕೂಡ ಆಗಿರುವ ಶ್ರೀಯುತ ಜಯರಾಮ ನಾವಡ ಅವರು ಕರೆ ಮಾಡಿ ತಾನು ಈ ದಿವಸ ನಮ್ಮಿಬ್ಬರಿಗೂ ಮಿತ್ರರಾದ ಶ್ರೀಯುತ ಗಣೇಶ್ ಕೆ. ಆರ್. ಅವರ ಜೊತೆ ನಮ್ಮ ಮನೆಗೆ ಆಗಮಿಸುತ್ತಿರುವುದಾಗಿ ಹೇಳಿದರು. ಬಹಳ ಸಂತೋಷವಾಯಿತು.
ಸುಮಾರು ಹನ್ನೊಂದು ಮೂವತ್ತಕ್ಕೆ ಮನೆಯಲ್ಲಿ ಹಬ್ಬದ ಕಾರ್ಯಕ್ರಮಗಳು ನಡೆಯುತ್ತಿದ್ದರೆ, ಪಕ್ಕದ ಹೊಳೆಯಲ್ಲಿ - ಪ್ರಕೃತಿಯ ಮಡಿಲಲ್ಲಿ ನಮ್ಮ ಕಾರ್ಯಕಲಾಪಗಳು ನಡೆಯುತ್ತಿದ್ದವು. ಹೆಚ್ಚಾಗಿ ಸಾಹಿತ್ಯ, ಕಲೆ,  ಮನೋವ್ಯಾಪಾರಗಳ ಬಗ್ಗೆ ನಮ್ಮ ಗೋಷ್ಠಿ ಮತ್ತು ಗೊತ್ತುವಳಿಗಳು ಇರುತ್ತವೆ. ಆದರೆ ಈ ಸಲ ಮುಖ್ಯವಾಗಿ ಒಂದಷ್ಟು ನಿರಾಳತೆ, ಸಂತೋಷ ಅಷ್ಟೇ. ಹಬ್ಬದ ಊಟ, ಆಟ, ಕೂಟ, ಕುಶಲೋಪರಿಗಳು ಇವು ಖುಷಿ ಕೊಡುವ ಸಂಗತಿಗಳು.

✍️ ಶಿವಕುಮಾರ ಸಾಯ 'ಅಭಿಜಿತ್'

ಅಕ್ಟೋಬರ್ 8ರಂದು ಮಿತ್ರರಾದ ಸನ್ಮಾನ್ಯ ಶ್ರೀಯುತ ಜಯರಾಮ ನಾವಡ ಹಾಗೂ ಸನ್ಮಾನ್ಯ ಶ್ರೀಯುತ ಗಣೇಶ್ ಕೆ. ಆರ್. ಅವರ ಆಗಮನದೊಂದಿಗೆ ನಮ್ಮ ಮನೆಯಲ್ಲಿ ವಿಜಯದಶಮಿಯ ಸಂಭ್ರಮ
ಚಿತ್ರ ಕೃಪೆ: ಅಮೃತವಾಹಿನಿ

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್