ಕೊಳಲ ದನಿ

ಶ್ರೀಕೃಷ್ಣನ ಮುಕುಟದಲ್ಲಿ
ಎಷ್ಟೊಂದು
ನವಿಲುಗರಿಗಳು!

ಶ್ರೀಹರಿಗೆ
ಹಾರವಾದವು
ಅದೆಷ್ಟೋ ಮಣಿಗಳು!

ನಾರಾಯಣನ ನಂಬಿ
ಎನಿತೋ ನರರು
ವೀರ ಅರ್ಜುನರಾದರು

ವಾಮನ ಬೆಳೆದು
ವಿಶ್ವರೂಪವ ತೋರಿ
ತ್ರಿವಿಕ್ರಮನಾದನು

ನಂದಕುಮಾರನ ವೃಂದಾವನದಲ್ಲಿ
ಅರಳಿದವು
ನೂರಾರು ಹೂವುಗಳು

ಶ್ರೀರಂಗನಿಗೆ ಕೈಮುಗಿದು
ನಲಿದರು
ಹದಿನಾರು ಸಾವಿರ
ಗೋಪಿಕೆಯರು

ಕೃಷ್ಣನ
ಕೊಳಲ ದನಿ ಕೇಳಿ ಬಂದವು
ಗೋಕುಲಕೆ
ಹಿಂಡು ಹಿಂಡು ಗೋವುಗಳು.

✍️ ಶಿವಕುಮಾರ ಸಾಯ

Comments

Popular posts from this blog

ಹಣಕಾಸು ನಿರ್ವಹಣೆ ಹೇಗಿರಬೇಕು?

ಬಹಿರಂತಶ್ಚ ಭೂತಾನಾಂ........

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್