'ತಪಸ್ಸು' ಎಂಬ ಟೆಲಿಪೋರ್ಟೇಶನ್!

ನನ್ನ ನಂಬಿಕೆ ನಿಜಕ್ಕೂ Body consciousnessನ ಬಗ್ಗೆ! ಹಾಗಾಗಿ "ದೇಹೋ ದೇವಾಲಯ ಪ್ರೋಕ್ತಃ ಜೀವೋ ದೇವೋ ಸದಾಶಿವಃ" ಎಂಬ ಸನಾತನ ವಾಣಿ ಸಮ್ಮತ. ತಿಳಿಯಲ್ಪಟ್ಟಂತೆ ಆಂದೋಲನ ಮತ್ತು ಅಚಲತೆ ಎರಡೂ ಸ್ಥಿತಿಗಳೇ! ತಪಸ್ಸನ್ನು, ಧ್ಯಾನವನ್ನು ಉನ್ನತ ಮಟ್ಟದ ಪ್ರಾರ್ಥನೆ ಎನ್ನಲಾಗುತ್ತದೆ. ಧ್ಯಾನಗೈಯುವಾಗ ದೇಹದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನಷ್ಟೇ ಗಮನಿಸಬೇಕೆಂದು ಯೋಗಶಾಸ್ತ್ರ ಹೇಳುತ್ತದೆ. ಏಕೆಂದರೆ ದೇಹವನ್ನು ವಿಶ್ವವೆಂದೇ ಇಲ್ಲಿ ಪರಿಗಣಿಸಲಾಗುತ್ತದೆ.
ಈಗ ನಾನು ಬರೆಯುತ್ತಿರುವುದು ಟೆಲಿಪೋರ್ಟೇಶನ್ ಬಗ್ಗೆ! ಆಧುನಿಕ ವಿಜ್ಞಾನದಲ್ಲಿ ಪ್ರಾಯೋಗಿಕವಾಗಿ ಧ್ವನಿ, ಚಿತ್ರ ಇತ್ಯಾದಿ ಟೆಲಿಪೋರ್ಟ್ ಆಗುವಂಥದ್ದು ನಾವು ನೋಡಿದ್ದೇವೆ. ತಪಸ್ಸು ನೀಡುವ ಫಲಗಳನ್ನು ಟೆಲಿಪೋರ್ಟ್ ಎಂಬರ್ಥದಲ್ಲಿ ಗ್ರಹಿಸಲು ಸಾಧ್ಯವಾಗಿರುವ ಅನುಭವ-ಅನುಭಾವಗಳಿಗೆ ವ್ಯಕ್ತ ರೂಪ ನೀಡಲು ಪ್ರಯತ್ನಿಸಿದ್ದೇನೆ. ನಾವು ತಿಳಿದಂತೆ ಟೆಲಿಪೋರ್ಟ್ ಮಾಡುವ ಸಂದರ್ಭದಲ್ಲಿ ಏನನ್ನಾದರೂ ಕೋಡಿಂಗ್ ಮಾಡಬೇಕಾಗುತ್ತದೆ. ಹಾಗೆಯೇ ಮತ್ತೊಂದು ಕಡೆ ಆ ವಸ್ತು ಡೀಕೋಡಿಂಗ್ ಕೂಡಾ ಆಗಬೇಕಾಗುತ್ತದೆ. ಈ ವಿಷಯ ಕ್ವಾಂಟಂ ಫಿಸಿಕ್ಸ್‌ಗೆ ಸಂಬಂಧಿಸಿದೆ. ಕೋಡಿಂಗ್ ಮಾಡಲ್ಪಟ್ಟಾಗ ವಸ್ತು ಅದೃಶ್ಯವಾಗುತ್ತದೆ. ಡೀಕೋಡಿಂಗ್ ಆದಾಗ ಮರಳಿ ವಸ್ತುವಾಗುತ್ತದೆ.
ಪ್ರಾರ್ಥನೆ ಅಥವಾ ಧ್ಯಾನದಲ್ಲಿ ಕೋಡಿಂಗ್ - ಡೀಕೋಡಿಂಗ್ ವಿಧಾನ ಅನುಸರಿಸಲ್ಪಡುತ್ತದೆ ಎಂಬುದು ನನ್ನ ಅನುಭವ-ಅನುಭಾವಗಳಿಂದ ಕಂಡುಕೊಂಡ ಅದ್ಭುತ ಸತ್ಯ. ಅದು ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ನನ್ನ ಈ ಮುಂದಿನ ವಿವರಣೆಯನ್ನು ನೀವು ಗಮನಿಸಬೇಕಾಗುತ್ತದೆ.
ಧ್ಯಾನದಲ್ಲಿ Aaa(ಆ), Uuu(ಊ), Mmm(ಮ್) ಈ ಮೂರು ಸ್ವರಗಳಲ್ಲಿ - ಅಂದರೆ ಶರೀರದ ಆದಿ, ಮಧ್ಯ, ಅಂತ್ಯ ಎಂಬ ಪ್ರಮಾಣದಲ್ಲಿ ಗ್ರಹಿಕೆಗಳು ಸಾಧಾರಣೀಕರಣಗೊಂಡು ವಿಶ್ವಶಕ್ತಿಯಲ್ಲಿ ಕೋಡಿಂಗ್ ಆಗುತ್ತದೆ. ಅದಕ್ಕಿರುವ ಡೀಕೋಡಿಂಗ್ ವ್ಯವಸ್ಥೆ ಕೂಡಾ ಧ್ಯಾನವೇ. ನಂಬಿಕೆಯಲ್ಲಿ ಅದು ಡೀಕೋಡಿಂಗ್ ಆಗುತ್ತದೆ. ವಿಶ್ವದ ಎಲ್ಲಾ ಕಣಗಳೂ ಪರಸ್ಪರ ಚೈತನ್ಯದ ಪ್ರವಹಿಸುವಿಕೆಯೊಂದಿಗೆ interconnect ಆಗಿರುವುದರಿಂದ ದೇಹದ ಗಾತ್ರವು collective consciousness ಹಂತದಲ್ಲಿ ಭಾವಿಸಿದಷ್ಟೂ ವಿಸ್ತಾರವಾಗಿರುತ್ತದೆ. ಇದರಿಂದ ಜಗತ್ತಿನಲ್ಲಿ ಗಮನಿಸಿದಾಗ ನಮ್ಮ ಕಷ್ಟಗಳನ್ನು ಪರಿಹರಿಸುವ ಕೈಗಳು ಪ್ರತ್ಯಕ್ಷವಾಗಿ ಲಭ್ಯವಾಗುತ್ತವೆ. ನಿಜಕ್ಕೂ ಅದೇನೂ ಆಶ್ಚರ್ಯವಲ್ಲ.
✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್