ಅಂತರ
ಅಪಾತ್ರರಿಗೂ ಸತ್ಪಾತ್ರರಿಗೂ
ಏನು ಅಂತರವೆಂದು
ಯೋಚಿಸುತ್ತಿದ್ದೆ...
ಅಪಾತ್ರರು ಹಾಗೆಯೇ;
ಉಪಕಾರಿಯಂತೆ ನಟಿಸುತ್ತಾರೆ
ಅಪಕಾರವನ್ನೇ ಎಸಗುತ್ತಾರೆ.
ಕದ್ದು ಕದ್ದು
ನೋಡುತ್ತಾರೆ;
ಗುಣದಲ್ಲಿ ಮತ್ಸರ
ಮಾಡುತ್ತಾರೆ!
ಹೋದಲ್ಲಿ ಬಂದಲ್ಲಿ
ಖಂಡನೆ;
ಭಟ್ಟಂಗಿಯಂತೆ
ಮಂಡನೆ!
ಆದರೆ...
ಸತ್ಪಾತ್ರರು ಮಾತ್ರ ಹಾಗಲ್ಲ;
ನಿಮ್ಮ ಜೊತೆ
ಇರುತ್ತಾರೆ
ಭಾರವನ್ನು
ಹೊರುತ್ತಾರೆ
ಗಂಭೀರತೆಗಳನ್ನು ನಿಜಕ್ಕೂ
ಅರ್ಥೈಸಿಕೊಳ್ಳುತ್ತಾರೆ.
ಎಲ್ಲಕ್ಕಿಂತ ಮುಖ್ಯವಾಗಿ
ಪ್ರೀತಿಸುತ್ತಾರೆ
ಗೌರವಿಸುತ್ತಾರೆ...
ಸತ್ಪಾತ್ರರು
ಬದುಕಿಗೆ ಯಾವತ್ತೂ
ಸಿಹಿ ಮತ್ತು ಸವಿ ನೀಡುತ್ತಾರೆ
ನಿಮ್ಮ ದೌರ್ಬಲ್ಯ ಮತ್ತು ಪ್ರಾಬಲ್ಯ
ಎರಡನ್ನೂ ಸ್ವಂತಿಕೆಯ ಭಾಗವಾಗಿ
ಒಪ್ಪಿ ಅಪ್ಪಿಕೊಳ್ಳುತ್ತಾರೆ.
ಅವರ ಸ್ನೇಹದಲ್ಲೊಂದು
ಮಾಧುರ್ಯವಿರುತ್ತದೆ
ಮಾರ್ದವತೆಯಿರುತ್ತದೆ...
ನೈಜ ಸ್ನೇಹಕ್ಕೆ
ಎಣೆಯಿಲ್ಲ
ಕಪಟ ಸ್ನೇಹಕ್ಕೆ
ಮಣೆಯಿಲ್ಲ.
✍️ ಶಿವಕುಮಾರ ಸಾಯ 'ಅಭಿಜಿತ್'
Comments
Post a Comment