ಹಿರಿಯ ಕವಿ, ವಿದ್ವಾಂಸ ಡಾ. ವಸಂತಕುಮಾರ ಪೆರ್ಲ ಅವರು ಬರೆದಿರುವ 'ಅಮೃತ ಹಂಚುವ ಕೆಲಸ' ಪುಸ್ತಕವನ್ನು ಪರಿಚಯಿಸಲು ಸಂತೋಷಪಡುತ್ತೇನೆ. ಆಕಾಶವಾಣಿಯಲ್ಲಿ ಕೇಂದ್ರ ನಿರ್ದೇಶಕರಾಗಿದ್ದು ನಿವೃತ್ತರಾಗಿರುವ ಮಾಧ್ಯಮ ತಜ್ಞ, ಕವಿ - ಲೇಖಕ, ಅಂಕಣಕಾರ ಡಾ. ವಸಂತಕುಮಾರ ಪೆರ್ಲ ಅವರು ಸಮೃದ್ಧವಾದ ಭಾಷಾಜ್ಞಾನ, ಪಾಂಡಿತ್ಯವುಳ್ಳವರು. ಇದುವರೆಗೆ 45ಕ್ಕೂ ಹೆಚ್ಚು ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ಅವರು ಅಪ್ಪಟ ಹವ್ಯಕ ಭಾಷೆಯಲ್ಲಿ ಬರೆದ ಚಿಂತನಗಳ ಸಂಕಲನವೇ 'ಅಮೃತ ಹಂಚುವ ಕೆಲಸ'. ಹವ್ಯಕ ಸಮಾಜದ ಮನೆಗಳಲ್ಲಿರುವ ವಿಚಾರ ಸಂಪದವನ್ನು ತಮ್ಮದೇ ಆದ ಶೈಲಿಯಲ್ಲಿ ಪ್ರಸ್ತುತೀಕರಿಸಿರುವ ಪೆರ್ಲರ ಈ ಕೃತಿಯಲ್ಲಿ ಹವ್ಯಕ ಬ್ರಾಹ್ಮಣರ ಸಾಮಾಜಿಕ ಇತಿಹಾಸವನ್ನೇ ಕಾಣಬಹುದು. ಹವ್ಯಕ ಬ್ರಾಹ್ಮಣರ ಕೃಷಿ, ಆಚಾರ ವಿಚಾರ, ಆಲೋಚನೆಗಳು, ಭಜನೆ - ಆರಾಧನಾ ಪದ್ಧತಿ, ಸಂಸ್ಕಾರ, ಸಂಬಂಧಗಳು, ಮಾತುಕತೆ ಮುಂತಾದ ವಿವಿಧ ಮಗ್ಗುಲುಗಳಲ್ಲಿ ಹಾಸುಹೊಕ್ಕಾಗಿರುವ ಎಲ್ಲ ವಿಚಾರಗಳ ಮಂಥನ ಪ್ರಸ್ತುತ ಕೃತಿಯಲ್ಲಿ ವ್ಯಕ್ತವಾಗಿದೆ. ವಿವಿಧೆಡೆಗಳಲ್ಲಿ ಪ್ರತಿನಿತ್ಯ ಲೇಖಕರು ಬರೆದು ಪ್ರಕಟಿಸುವ ಈ ಲೇಖನಗಳು ಗ್ರಂಥವಾಗಿ ಹೊರಹೊಮ್ಮಿದ್ದು, ಹವ್ಯಕರ ಇತಿಹಾಸವನ್ನು ಬಿಂಬಿಸುವ ಒಂದು ದಾಖಲೀಕರಣ ಇದಾಗಿದೆ. ಹವ್ಯಕ ಭಾಷೆಯಲ್ಲಿ ಚಿಂತನೆಗಳ ಹೊತ್ತಗೆ ಪ್ರಕಟವಾಗಿರುವುದು ವಿರಳ. ಇಂದಿನ ಕಾಲಘಟ್ಟದಲ್ಲಿ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಶೋಧಗಳು, ಒಳನೋಟಗಳು ಅವಶ್ಯ....
"ವೇದಿಕೆಯಲ್ಲಿರುವ ಗಣ್ಯರೇ, ಸಹೋದ್ಯೋಗಿ ಬಂಧುಗಳೇ, ವಿದ್ಯಾರ್ಥಿಗಳೇ.... 'ಅಂತರರಾಷ್ಟ್ರೀಯ ಯೋಗ ದಿನಾಚರಣೆ' ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಕ್ರೀಡಾ ಸಂಘದ ವತಿಯಿಂದ ಹಮ್ಮಿಕೊಂಡಿರುವ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಒಂದೆರಡು ನುಡಿಗಳು.... ಈ ಯೋಗ ದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ ಮಾತ್ರ ಅಲ್ಲ; ನಮ್ಮ ದೇಶದಲ್ಲಿ ಮಾತ್ರ ಅಲ್ಲ; ವಿಶ್ವಮಟ್ಟದಲ್ಲೇ ಆಚರಿಸಲಾಗುತ್ತಾ ಇದೆ. ಈ ಮಾನ್ಯತೆ ದೊರಕಿದ್ದು 2014ರ ಡಿಸೆಂಬರ್ನಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆ ಅಥವಾ ವಿಶ್ವಸಂಸ್ಥೆ ಯೋಗವನ್ನು ಅಂತರರಾಷ್ಟ್ರೀಯ ದಿನಾಚರಣೆ ಎಂದು ಘೋಷಿಸಿದ ಬಳಿಕ. ಇನ್ನು ಈ ಯೋಗವನ್ನು ನಾವು ಅಭ್ಯಸಿಸುವುದಕ್ಕೆ ಮೊದಲು ಯೋಗ ಅಂದರೇನು, ಯೋಗವನ್ನು ಯಾಕೆ ಮಾಡಬೇಕು ಇದನ್ನೆಲ್ಲ ತಿಳಿದಿದ್ದರೆ ಒಳ್ಳೆಯದು. ಯೋಗ ನಮ್ಮ ದೇಶದಲ್ಲಿ ಒಂದು ಪರಂಪರೆಯಾಗಿ ಬೆಳೆದದ್ದು. ನಮ್ಮ ದೇಶಕ್ಕೆ ಅದು ಹೊಸದೇನೂ ಅಲ್ಲ. ಯೋಗವಿದ್ಯೆಯು ಇಡೀ ಜಗತ್ತಿಗೆ ಭಾರತೀಯರು ನೀಡಿದ ಕೊಡುಗೆ. ಅದು ನಮ್ಮ ದೇಶದ ಸನಾತನ ಋಷಿಮುನಿಗಳು ಸಾಧಿಸಿ ಕಂಡುಹಿಡಿದ ಮಹಾನ್ ವಿದ್ಯೆ. ಆದ್ದರಿಂದ ನಾವು ಯೋಗದ ಬಗ್ಗೆ ತಿಳಿದಿರಬೇಕು. ಈ ಯೋಗ ಎಂಬ ಶಬ್ದ ಬಂದಿದ್ದು 'ಯುಜ್' ಎಂಬ ಧಾತುವಿನಿಂದ. 'ಯುಜ್' ಅಂದರೆ 'ಒಂದುಗೂಡಿಸುವುದು' ಅಂತ ಅರ್ಥ. ಜೀವಾತ್ಮನನ್ನು ಪರಮಾತ್ಮನ ಜೊತೆ ಒಂದುಗೂಡಿಸುವುದು. ಅಂದರೆ ನಮ್ಮನ್ನು ನಮ್ಮ ದೇಹಕ್ರಿಯೆಗಳ ಕೇಂದ್ರದ ಜೊತೆ ಸೇರಿಸು...
ಆಸ್ಟ್ರೋ ವಿಜ್ಞಾನಿ, ಸ್ನೇಹಿತ, ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್ ಅವರು ಫೇಸ್ಬುಕ್ನಲ್ಲಿ ಪರಿಚಯವಾಗಿದ್ದರು. ನನಗೆ ತಿಳಿದಂತೆ ಅವರು ಮುಂಬೈ, ಮಹಾರಾಷ್ಟ್ರದಲ್ಲಿ ನೆಲೆಸಿದ್ದಾರೆ. ಸುಮಾರು 40 ಮಂದಿಯ ತಂಡದೊಂದಿಗೆ ಕನ್ಸಲ್ಟೆಂಟ್ ಆಗಿ ಇವರು ಕಾರ್ಯ ನಿರ್ವಹಿಸುತ್ತಿರುವರು. ಪ್ರಾಯಶಃ ಜ್ಯೋತಿಷ್ಯದ ಗುಂಪಿನಲ್ಲಿ ಅವರಿಗೆ ನನ್ನ ಪರಿಚಯವಾಗಿದ್ದಿರಬಹುದು. ಅವರು ನನ್ನ ಅನೇಕ ಯೂಟ್ಯೂಬ್ ವಿಡಿಯೋಗಳನ್ನು ಮೆಚ್ಚಿಕೊಂಡು, ಅವುಗಳಲ್ಲಿ ಇರುವ ಅನ್ವೇಷಣೆಗಳನ್ನು ಅವರು ಅರ್ಥೈಸಿಕೊಂಡು ಅಭಿಪ್ರಾಯ ತಿಳಿಸಿದ್ದರು. ಅವರು ನನ್ನ ಆರೋಗ್ಯದ ಬಗ್ಗೆ ಅಕ್ಟೋಬರ್ 19ರಂದು ವಿಚಾರಿಸಿದಾಗ ಸುಧಾರಣೆಯಾಗುತ್ತಿರುವ ಬಗ್ಗೆ ಹೇಳಿದೆ. ನಿಧಾನವಾಗಿ ನಮ್ಮ ಮಾತುಕತೆ ಜ್ಯೋತಿಷ್ಯದತ್ತ ಸಾಗಿತು. ಸಿದ್ದೇಶ್ವರನ್ ಜ್ಯೋತಿಷ್ಯವನ್ನು ನನ್ನಂತೆ ವಿಶಿಷ್ಟ ರೀತಿಯಲ್ಲಿ ನೋಡುವ ಮನಸ್ಸುಳ್ಳವರು. ಆದ್ದರಿಂದ ಅವರ ಅಭಿಪ್ರಾಯಗಳು ನನಗೆ ಕುತೂಹಲಕಾರಿಯಾಗಿದ್ದವು. ಉದಾಹರಣೆಗೆ, ನಾನು ನನ್ನ ಜಾತಕವನ್ನೇ ಅವರ ಜೊತೆ ಸೇರಿ ವಿಶ್ಲೇಷಣೆ ಮಾಡತೊಡಗಿದೆ. ಅವರು ಕೆಲವು ವಿಚಾರಗಳನ್ನು ಲಗ್ನದಿಂದ ನೋಡಬೇಕು, ಕೆಲವು ವಿಚಾರಗಳನ್ನು ರಾಶಿಯಿಂದ ನೋಡಬೇಕು, ಇನ್ನು ಕೆಲವು ವಿಚಾರಗಳನ್ನು ರವಿಯ ಸ್ಥಾನದಿಂದ ನೋಡಬೇಕು ಎಂದು ಅಭಿಪ್ರಾಯಪಟ್ಟರು. ಸಾಂಪ್ರದಾಯಿಕ ಜ್ಯೋತಿಷ್ಯದಲ್ಲಿ ಹೇಳುವ ಉಚ್ಚ-ನೀಚ ಅಂಶವನ್ನು ಅವರು ಒಪ್ಪಲಿಲ್ಲ. ಆ ವಿಚಾರವು ಅಧಿಕೃತವಾಗಿ ಇಲ್ಲ ಎಂದರು. ಅಷ್ಟೇ ಅಲ್ಲದೆ,...
Comments
Post a Comment