ಬಯಕೆ

ಮೂಡುತಿದೆ ಚುಕ್ಕಿ,
ಹಾಡುತಿದೆ ಹಕ್ಕಿ;
ಕಾಡುತಿದೆ ಬಯಕೆ,
ಈಡೇರಲಿ ಹರಕೆ.

ಪಂಚಮದ ಶ್ರುತಿಯಲ್ಲಿ
ಮಿಡಿಯುತಿದೆ ಮನಸು;
ಇಂಚರದ ಹಂಚಿಕೆಗೆ
ಶುರುವಾಯ್ತು ಕನಸು.

ಮಧುವನದ ಸೌಭಾಗ್ಯ
ಮಲ್ಲಿಗೆಯ ತೋಟ;
ಶ್ರೀಹರಿಯ ನಂದನದಿ
ಶೃಂಗಾರದ ಆಟ!

ಹೂವಿಗೂ, ಪಕಳೆಗೂ
ದುಂಬಿಯ ಸ್ಪರ್ಶ;
ಪ್ರಕೃತಿಗೂ, ಪರಿಸರಕೂ
ತುಂಬಿದ ಹರ್ಷ.

ಮೊದಲಿಲ್ಲ ಕಡೆಯಿಲ್ಲ
ಸಾಗುತಿದೆ ಪಯಣ;
ಸೋಜಿಗಕೂ, ಸೊಬಗಿಗೂ
ತೆರೆದಿದೆ ಕರಣ.

✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್