ಭಾಗ್ಯೋದಯ ಈ ಸೂರ್ಯೋದಯ
ಭಾಗ್ಯೋದಯ ಈ ಸೂರ್ಯೋದಯ
ಅಹಾ! ರಸಮಯ, ಹೃದಯ ತನ್ಮಯ
ಕಪ್ಪು ರಾತ್ರಿ ಕಳೆದು, ಬೆಳಕು ಮೂಡಿ ಹರಿದು,
ಬೆಟ್ಟ ಘಟ್ಟ ಏರಿ, ರವಿಯು ಬಂದ ಜಾರಿ
ಬಾನ ಅರಳು ಬಣ್ಣ, ಕಾಂತಿ ತೆರೆದ ಕಣ್ಣ,
ನೋಡಿ ಸುಖದ ಮೋಡಿ, ಮುದದಿ ರಾಗ ಹಾಡಿ
ಮಹತಿ ಎಂಬ ಮೇಲ್ಮೆ, ತಾಳಿ ಸ್ಥಿರದ ಜಾಣ್ಮೆ,
ಹಿಗ್ಗಿನಿಂದ ಬೀಗಿ, ಜಗ್ಗದೇ ನಿಂತು ತೂಗಿ
ಧವಳತೆಯ ಹೊಳಪು ಮಿನುಗಿ, ಚಿಂತನೆಯ ಲಹರಿ ಜಿನುಗಿ,
ಶಕ್ತಿ ಸ್ಥಾಯಿಯಾಗಿ, ನಿತ್ಯ ವಿಜಯ ಮೊಳಗಿ
ಭಾಗ್ಯೋದಯ ಈ ಸೂರ್ಯೋದಯ
ಅಹಾ! ರಸಮಯ, ಹೃದಯ ತನ್ಮಯ
✍️ ಶಿವಕುಮಾರ ಸಾಯ 'ಅಭಿಜಿತ್'
Comments
Post a Comment