ಪ್ರೀತಿಯ ಪ್ರಪಂಚ
ದಿನದ ಸಂಭ್ರಮಕೆ ಕೊನೆಯೇ
ಇರದಂತೆ,
ಸಂತಸಕೆ ಎಣೆಯಿಲ್ಲದಂತೆ
ನಡೆಯಿತು ನಡುಮನೆಯಲ್ಲಿ
ಪ್ರೇಮದ ಮಹೋತ್ಸವ.
ಪ್ರಕೃತಿಯ ಮಡಿಲಲ್ಲಿ
ಹೂವು ಅರಳಿ
ಗಾನವೈಭವ, ಗೋಷ್ಠಿಗಳು
ಜರಗಿದವು ಮರಳಿ.
ರಾಗ - ಅನುರಾಗ
ತೋರಿ ಚೆಲುವು
ಸುಸ್ವರವ ತಂತು
ಒಲವು.
ಎಡಬಲಗಳಲ್ಲಿ ಎಡತಾಕುತಿದ್ದ
ಮಡಿವಂತಿಕೆಯ ಇಕ್ಕಿ,
ದೃಢವಾಗಿ ಸುಖಿಸಿತು
ಭಾವಲೋಕದ ಹಕ್ಕಿ....
✍️ ಶಿವಕುಮಾರ ಸಾಯ 'ಅಭಿಜಿತ್'
Comments
Post a Comment