ಹಣಕಾಸು ನಿರ್ವಹಣೆ ಹೇಗಿರಬೇಕು?
ಸಾಮಾನ್ಯ ಜನರಿಗೆ ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಹೇಗೆ ಉಳಿಸಬೇಕು, ಎಲ್ಲಿ ಹೂಡಿಕೆ ಮಾಡಬೇಕು ಎಂಬ ಬಗ್ಗೆ ಗೊತ್ತಿರುವುದಿಲ್ಲ. ಹಾಗಾಗಿ, ಈ ಲೇಖನದಲ್ಲಿ ನಾನು ಹಣಕಾಸು ನಿರ್ವಹಣೆ ಮತ್ತು ಹೂಡಿಕೆ ಬಗ್ಗೆ ಸಾಕಷ್ಟು ಅಧ್ಯಯನ ಮತ್ತು ಅನುಭವಗಳ ಆಧಾರದಲ್ಲಿ ಪ್ರೀತಿಯಿಂದ ಒಂದಷ್ಟು ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಈ ಲೇಖನ ತಮಗೆ ಇಷ್ಟವಾದರೆ ಒಂದು ಲೈಕ್, ಕಮೆಂಟ್ ಅಥವಾ ಮೆಸೇಜ್ ಬಾಕ್ಸಿನಲ್ಲಿ ಮೆಚ್ಚುಗೆಯನ್ನು ತಿಳಿಸಿ. ಹಣದುಬ್ಬರ ಎಂಬ ಪದವನ್ನು ನೀವು ಕೇಳಿರಬಹುದು. ಏನಿದು ಹಣದುಬ್ಬರ? ನಮ್ಮ ಕರೆನ್ಸಿ ಪ್ರತಿವರ್ಷ ಅಪಮೌಲ್ಯಕ್ಕೆ ಒಳಗಾಗುತ್ತಲೇ ಇರುತ್ತದೆ. ಹಣದುಬ್ಬರದಿಂದಾಗಿ ಅದರ ಕೊಳ್ಳುವ ಸಾಮರ್ಥ್ಯ(Purchasing power) ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತದೆ. ಪ್ರಸ್ತುತ ಭಾರತದಲ್ಲಿ ಈ ಹಣದುಬ್ಬರದ ದರ 6-7% ಸುಮಾರಿಗೆ ಇದೆ. ಅಂದರೆ, ವರ್ಷದಿಂದ ವರ್ಷಕ್ಕೆ ಹಣದ ಮೌಲ್ಯ ಅಷ್ಟು ಕುಸಿದಿರುತ್ತದೆ ಎಂದರ್ಥ. ಹಾಗಾಗಿ, ನಮ್ಮಲ್ಲಿರುವ ಹಣವು ಈ ಹಣದುಬ್ಬರವನ್ನು ಮೀರಿ ಬೆಳೆಯಬೇಕು. ಹಾಗಿದ್ದರೆ ಮಾತ್ರ ಅದು ಹೂಡಿಕೆಯಾಗುತ್ತದೆ. ಷೇರು ಮಾರುಕಟ್ಟೆಯು ನಿಮ್ಮ ಹಣ ಉತ್ಕೃಷ್ಟ ರೀತಿಯಲ್ಲಿ ಬೆಳೆಯಲು ನೀವು ನೀಡಬಹುದಾದ ಅವಕಾಶವಾಗಿದೆ. ಷೇರುಗಳ ಮೂಲಕ ಅಥವಾ ಇಂಡೆಕ್ಸ್ ಫಂಡ್ಗಳ ಮೂಲಕ ದೀರ್ಘ ಅವಧಿಗೆ ನಿಮ್ಮ ಉಳಿತಾಯದ ಒಂದು ಭಾಗವನ್ನು ಹೂಡಿಕೆ ಮಾಡಲು ಪ್ರಯತ್ನಿಸಬಹುದು. ಇದಕ್ಕಾಗಿ ವಿವಿಧ ಎಸೆಟ್ ಮೇನೇಜ್ಮೆಂಟ್ ಕಂಪ...
Comments
Post a Comment