Posts

Showing posts from July, 2026

ಕೃತಜ್ಞತೆಯ ಮಹಾಪ್ರವಾಹ: ಭವ್ಯ ಜೀವನಯಾತ್ರೆಗೆ ಮೌನವಾಗಿ ಬೆಳಕಾದ ಮಹಾ ಚೇತನಗಳಿಗೆ ಭಕ್ತಿಪೂರ್ವಕ ಅರ್ಪಣೆ

Image
ನಾವು ಜೀವಿಸುತ್ತಿರುವ ಈ ಇಪ್ಪತ್ತೊಂದನೇ ಶತಮಾನದ ಪ್ರಪಂಚವು ಅತ್ಯಂತ ಜಟಿಲವಾದುದು. ಇಲ್ಲಿ ಉದಯದಿಂದ ಅಸ್ತಮಾನದವರೆಗೆ ಕಣ್ಣಿಗೆ ಬೀಳುವುದು ಮಾನವನ ಧಾವಂತ, ತಲ್ಲಣ ಹಾಗೂ ಲೌಕಿಕ ಹಂಬಲಗಳು ಮಾತ್ರ. ಪ್ರತಿಯೊಬ್ಬ ಮನುಷ್ಯನೂ ತನ್ನದೇ ಆದ ವೈಯಕ್ತಿಕ ಬೇಡಿಕೆಗಳ ದೀರ್ಘ ಸರಮಾಲೆಯನ್ನು ಹಿಡಿದು ನಮ್ಮೆದುರು ನಿಲ್ಲುತ್ತಾನೆ; ತಂತಮ್ಮ ನೋವುಗಳು, ಕೊರತೆಗಳು ಮತ್ತು ಆಸೆ-ಆಕಾಂಕ್ಷೆಗಳ ಕುರಿತಾಗಿಯೇ ಗಂಟೆಗಟ್ಟಲೆ ಸಂಭಾಷಿಸುತ್ತಾನೆ. ಆದರೆ, "ನಿನ್ನ ಮನದಾಳದ ಸ್ಥಿತಿಯೇನು? ನಿನ್ನ ಅಂತರಂಗವು ಸುಖವಾಗಿದೆಯೇ?" ಎಂದು ನಮ್ಮ ಒಳಬದುಕನ್ನು ಸ್ಪರ್ಶಿಸಿ, ಒಂದಿನಿತು ನಿಷ್ಕಲ್ಮಷ ಪ್ರೀತಿಯನ್ನು ಧಾರೆ ಎರೆಯುವ ಉದಾತ್ತ ಹೃದಯಗಳು ಇಂದು ತೀರಾ ವಿರಳ. ಸಮಕಾಲೀನ ಜಗತ್ತು ಇಂದು ಕೇವಲ ಲಾಭ-ನಷ್ಟಗಳ ತಳಹದಿಯ ಮೇಲೆ ನಡೆಯುವ ಕೃತಕ ವ್ಯವಹಾರವಾಗಿಬಿಟ್ಟಿದೆ. ಸ್ನೇಹ, ವಾತ್ಸಲ್ಯ ಮತ್ತು ಸಂಬಂಧಗಳೂ ಸಹ ಕೇವಲ ಉಪಯುಕ್ತತೆಯ ತಕ್ಕಡಿಯ ಮೇಲೆ ತೂಗಲ್ಪಡುತ್ತಿವೆ. ಒಣಗಿಹೋಗುತ್ತಿರುವ ಈ ಮರುಭೂಮಿಯಂತಹ ಬದುಕಿನ ನಡುವೆಯೂ, ಯಾರೋ ಕೆಲವು ಅಪರೂಪದ ಸಜ್ಜನರು ನಮ್ಮನ್ನು ಆಳವಾಗಿ ಅರಿತುಕೊಳ್ಳುತ್ತಾರೆ. ನಮ್ಮ ಮೌನಕ್ಕೆ ಧ್ವನಿಯಾಗುತ್ತಾರೆ; ನಮಗೆ ತಿಳಿಯದಂತೆ ನಮ್ಮ ಅಭ್ಯುದಯಕ್ಕಾಗಿ ಅಹರ್ನಿಶಿ ಪ್ರಾರ್ಥಿಸುತ್ತಾರೆ. ಜನ್ಮದಾತರಿಂದ ತೊಡಗಿ, ವಾತ್ಸಲ್ಯಮಯ ಬಂಧು-ಬಳಗದವರು, ನೂರಾರು ಬಾಲ್ಯದ ಸಖ-ಸಖಿಯರು ಮತ್ತು ನಮ್ಮ ಜೀವಯಾತ್ರೆಯ ಕವಲುಹಾದಿಗಳಲ್ಲಿ ಒದಗಿಬಂದ ...

ಇಲ್ಲಿಂದ ಬದಲಾಗಲಿದೆ ಭವಿಷ್ಯ?!

Image
ಪ್ರಿಯ ಓದುಗರೇ, 2024ನೇ ಇಸವಿಯ ಮಧ್ಯಭಾಗದಲ್ಲಿ ನಾನು ಅಪಘಾತದಿಂದ ಗಂಭೀರವಾಗಿ ಗಾಯಗೊಂಡದ್ದು, ವಿದೇಶಿ ಹೂಡಿಕೆದಾರರು (FII) ನಿವ್ವಳ ಮಾರಾಟಗಾರರಾಗಿ ತಿರುಗಿದ್ದು ಮತ್ತು ಮಾರುಕಟ್ಟೆ ಮೌಲ್ಯ ದುಬಾರಿಯಾಗಿದ್ದ ಕಾರಣ ಭಾರತೀಯ ಶೇರುಪೇಟೆ ಕುಸಿಯತೊಡಗಿದ್ದು — ಇವೆಲ್ಲವೂ ಕಾಕತಾಳೀಯವಾಗಿ ಒಂದೇ ಸಮಯದ ಆಸುಪಾಸಿನಲ್ಲಿ ನಡೆದ ಸಂಗತಿಗಳು. ಅಪಘಾತ ನಡೆದದ್ದು ಆಗಸ್ಟ್ 30ರಂದು. ಕೆಪಿ (KP) ನ್ಯೂ ಅಯನಾಂಶದ ಪ್ರಕಾರ, ಅಂದು ನನ್ನ ವಿಂಶೋತ್ತರಿ ದಶೆಯಲ್ಲಿ ಗುರು ಮಹಾದೆಸೆಯಲ್ಲಿ ಬುಧ ಅಂತರ್ದಶೆ, ಶುಕ್ರ ಪ್ರತ್ಯಂತರ ದೆಸೆ, ಗುರು ಸೂಕ್ಷ್ಮ ದೆಸೆ ಹಾಗೂ ಮಂಗಳ ಗ್ರಹದ ಪ್ರಾಣ ದೆಸೆ ಇತ್ತು ಎಂದು ತಿಳಿದುಬರುತ್ತದೆ. ದುರ್ಘಟನೆ ನಡೆದ ಕಾರಣ ಶೇರುಪೇಟೆಯಲ್ಲಿ ನಾನೊಬ್ಬ ನುರಿತ ಅಭ್ಯಾಸಿಯಾಗಿದ್ದರೂ, ಗಾಯಾಳುವಾಗಿದ್ದರಿಂದ ಏನೂ ಮಾಡಲಾಗದೇ ಹೋದ ದುಃಖದಾಯಕ ಸಮಯವದು. ಆ ನಂತರ ಲಾಭವಿರಲಿ, ನಷ್ಟ ಬರಲಿ ನಾನೊಬ್ಬ ಮ್ಯೂಚುವಲ್ ಫಂಡ್‌ಗಳ ಹೂಡಿಕೆದಾರನಾಗಿ ಬದಲಾದೆ. ಆದರೆ, 2024ರ ಸೆಪ್ಟೆಂಬರ್ - ಅಕ್ಟೋಬರ್ ಸಮಯದಿಂದ ಕುಸಿತ ಕಾಣುತ್ತಿರುವ ನಮ್ಮ ಮಾರುಕಟ್ಟೆ, ಇದುವರೆಗೂ ಅಂದರೆ ಜುಲೈ 10, 2026ರ ತನಕವೂ ತನ್ನ ಗರಿಷ್ಠ ಮಟ್ಟದಿಂದ ಕೆಳಗೆಯೇ ಇರುವುದು ಕಂಡುಬಂದಿದೆ. ಹೂಡಿಕೆಗಳು ನಷ್ಟದಲ್ಲೇ ಉಳಿದದ್ದರಿಂದ, ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಉದ್ಯೋಗಕ್ಕೆ ರಾಜೀನಾಮೆ ನೀಡುವ ಭಾವನಾತ್ಮಕ ನಿರ್ಧಾರವನ್ನು ನಾನು ಕೈಬಿಡುವಂತಾದದ್ದು ದೈವಲೀಲೆಯೇ ಸರಿ. ಆದರ...