ಹೀಗೊಂದು ಒತ್ತಡದ ವಾತಾವರಣದಲ್ಲಿ.....
ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಬಹಳ ಹಿಂದಿನಿಂದಲೂ ನನ್ನ ಆತ್ಮೀಯರು. ನಾನು ಚಿಕ್ಕಂದಿನಲ್ಲಿ ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾಗ ನನಗೆ ಸಸ್ಯಶಾಸ್ತ್ರದ ಪ್ರಯೋಗಾಲಯದಲ್ಲಿ ಅವರು ಪ್ರಯೋಗ ವಿವರಣೆ ಕೊಟ್ಟದ್ದಿದೆ. ಹಾಗಾಗಿ ಅವರು ಗುರುಗಳೂ ಹೌದು. ನನ್ನಿಂದ ವೈಯಕ್ತಿಕವಾಗಿ ಲೇಖನವನ್ನು ಬರೆಸಿಕೊಂಡದ್ದುಂಟು. ಅನೇಕ ಬರಹಗಳನ್ನು ತಿದ್ದಿಸಿಕೊಂಡದ್ದುಂಟು. ಆದರೆ ಇತ್ತೀಚಿನ ಕೆಲವು ದಿನಗಳಲ್ಲಿ ಅವರು ವರ್ತಿಸುತ್ತಿರುವ ರೀತಿ ನನ್ನಲ್ಲಿ ತುಂಬಾ ಬೇಸರ ಮತ್ತು ಆತಂಕಗಳನ್ನು ಮೂಡಿಸುತ್ತಿರುವುದು ಸುಳ್ಳಲ್ಲ. 'ಜನತಾ ದರ್ಪಣ' ಎಂಬುದು ಜನತಾ ಪದವಿಪೂರ್ವ ಕಾಲೇಜಿನ ಹಸ್ತಪತ್ರಿಕೆಯಾಗಿತ್ತು. ಜನತಾ ಪ್ರೌಢಶಾಲೆಗೆ 'ಕಲರವ' ಎಂಬ ಹಸ್ತಪತ್ರಿಕೆಯನ್ನು ನಾನು ಸಂಪಾದಿಸುತ್ತಿದ್ದೆ. ಶ್ರೀಯುತ ರಮೇಶ್ ಎಂ ಬಾಯಾರು ಅವರು ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳಲ್ಲಿ ಆಡಳಿತ ಅಧಿಕಾರಿಯಾಗಿ ಬಂದ ನಂತರ ಮಾಡಿದ ಸುಧಾರಣೆಗಳಲ್ಲಿ 'ಜನತಾ ದರ್ಪಣ' ಎಂಬ ವಾರ್ಷಿಕ ಸಂಚಿಕೆಯನ್ನು ಮುದ್ರಿತ ರೂಪದಲ್ಲಿ ಹೊರತರುತ್ತಿರುವುದು ಬಹಳ ದೊಡ್ಡ ಕಾರ್ಯಕ್ರಮ. ಜನತಾ ಪದವಿಪೂರ್ವ ಕಾಲೇಜಿನ ಭಾಷಾ ಅಧ್ಯಾಪಕರು ಇದರ ಮುಖ್ಯ ಹೊಣೆಯನ್ನು ಹೊತ್ತು ಮೂರು ವರ್ಷಗಳ ಕಾಲ ಪ್ರಾಮಾಣಿಕವಾಗಿ ಪರಿಶ್ರಮ ಪಟ್ಟಿದ್ದಾರೆ. ಅವರ ಜೊತೆ ನಾನು ಬಹಳ ಮುಖ್ಯವಾಗಿ ಪರಿಶ್ರಮಿಸಿದ್ದೇನೆ ಎಂಬುದು ಸತ್ಯಸ್ಯ ಸತ್ಯ. ಕಾಲೇಜಿನ ಭಾಷಾ ಅಧ್ಯಾಪಕರು ಬಿ.ಎಡ್. ಪ...