ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್
ಆಸ್ಟ್ರೋ ವಿಜ್ಞಾನಿ, ಸ್ನೇಹಿತ, ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್ ಅವರು ಫೇಸ್‍ಬುಕ್‌ನಲ್ಲಿ ಪರಿಚಯವಾಗಿದ್ದರು. ನನಗೆ ತಿಳಿದಂತೆ ಅವರು ಮುಂಬೈ, ಮಹಾರಾಷ್ಟ್ರದಲ್ಲಿ ನೆಲೆಸಿದ್ದಾರೆ. ಸುಮಾರು 40 ಮಂದಿಯ ತಂಡದೊಂದಿಗೆ ಕನ್‌ಸಲ್ಟೆಂಟ್ ಆಗಿ ಇವರು ಕಾರ್ಯ ನಿರ್ವಹಿಸುತ್ತಿರುವರು. ಪ್ರಾಯಶಃ ಜ್ಯೋತಿಷ್ಯದ ಗುಂಪಿನಲ್ಲಿ ಅವರಿಗೆ ನನ್ನ ಪರಿಚಯವಾಗಿದ್ದಿರಬಹುದು. ಅವರು ನನ್ನ ಅನೇಕ ಯೂಟ್ಯೂಬ್ ವಿಡಿಯೋಗಳನ್ನು ಮೆಚ್ಚಿಕೊಂಡು, ಅವುಗಳಲ್ಲಿ ಇರುವ ಅನ್ವೇಷಣೆಗಳನ್ನು ಅವರು ಅರ್ಥೈಸಿಕೊಂಡು ಅಭಿಪ್ರಾಯ ತಿಳಿಸಿದ್ದರು. ಅವರು ನನ್ನ ಆರೋಗ್ಯದ ಬಗ್ಗೆ ಅಕ್ಟೋಬರ್ 19ರಂದು ವಿಚಾರಿಸಿದಾಗ ಸುಧಾರಣೆಯಾಗುತ್ತಿರುವ ಬಗ್ಗೆ ಹೇಳಿದೆ. ನಿಧಾನವಾಗಿ ನಮ್ಮ ಮಾತುಕತೆ ಜ್ಯೋತಿಷ್ಯದತ್ತ ಸಾಗಿತು. ಸಿದ್ದೇಶ್ವರನ್ ಜ್ಯೋತಿಷ್ಯವನ್ನು ನನ್ನಂತೆ ವಿಶಿಷ್ಟ ರೀತಿಯಲ್ಲಿ ನೋಡುವ ಮನಸ್ಸುಳ್ಳವರು. ಆದ್ದರಿಂದ ಅವರ ಅಭಿಪ್ರಾಯಗಳು ನನಗೆ ಕುತೂಹಲಕಾರಿಯಾಗಿದ್ದವು. ಉದಾಹರಣೆಗೆ, ನಾನು ನನ್ನ ಜಾತಕವನ್ನೇ ಅವರ ಜೊತೆ ಸೇರಿ ವಿಶ್ಲೇಷಣೆ ಮಾಡತೊಡಗಿದೆ. ಅವರು ಕೆಲವು ವಿಚಾರಗಳನ್ನು ಲಗ್ನದಿಂದ ನೋಡಬೇಕು, ಕೆಲವು ವಿಚಾರಗಳನ್ನು ರಾಶಿಯಿಂದ ನೋಡಬೇಕು, ಇನ್ನು ಕೆಲವು ವಿಚಾರಗಳನ್ನು ರವಿಯ ಸ್ಥಾನದಿಂದ ನೋಡಬೇಕು ಎಂದು ಅಭಿಪ್ರಾಯಪಟ್ಟರು. ಸಾಂಪ್ರದಾಯಿಕ ಜ್ಯೋತಿಷ್ಯದಲ್ಲಿ ಹೇಳುವ ಉಚ್ಚ-ನೀಚ ಅಂಶವನ್ನು ಅವರು ಒಪ್ಪಲಿಲ್ಲ. ಆ ವಿಚಾರವು ಅಧಿಕೃತವಾಗಿ ಇಲ್ಲ ಎಂದರು. ಅಷ್ಟೇ ಅಲ್ಲದೆ,...