ಹಿರಿಯ ಕವಿ, ವಿದ್ವಾಂಸ ಡಾ. ವಸಂತಕುಮಾರ ಪೆರ್ಲ ಅವರು ಬರೆದಿರುವ 'ಅಮೃತ ಹಂಚುವ ಕೆಲಸ' ಪುಸ್ತಕವನ್ನು ಪರಿಚಯಿಸಲು ಸಂತೋಷಪಡುತ್ತೇನೆ. ಆಕಾಶವಾಣಿಯಲ್ಲಿ ಕೇಂದ್ರ ನಿರ್ದೇಶಕರಾಗಿದ್ದು ನಿವೃತ್ತರಾಗಿರುವ ಮಾಧ್ಯಮ ತಜ್ಞ, ಕವಿ - ಲೇಖಕ, ಅಂಕಣಕಾರ ಡಾ. ವಸಂತಕುಮಾರ ಪೆರ್ಲ ಅವರು ಸಮೃದ್ಧವಾದ ಭಾಷಾಜ್ಞಾನ, ಪಾಂಡಿತ್ಯವುಳ್ಳವರು. ಇದುವರೆಗೆ 45ಕ್ಕೂ ಹೆಚ್ಚು ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ಅವರು ಅಪ್ಪಟ ಹವ್ಯಕ ಭಾಷೆಯಲ್ಲಿ ಬರೆದ ಚಿಂತನಗಳ ಸಂಕಲನವೇ 'ಅಮೃತ ಹಂಚುವ ಕೆಲಸ'. ಹವ್ಯಕ ಸಮಾಜದ ಮನೆಗಳಲ್ಲಿರುವ ವಿಚಾರ ಸಂಪದವನ್ನು ತಮ್ಮದೇ ಆದ ಶೈಲಿಯಲ್ಲಿ ಪ್ರಸ್ತುತೀಕರಿಸಿರುವ ಪೆರ್ಲರ ಈ ಕೃತಿಯಲ್ಲಿ ಹವ್ಯಕ ಬ್ರಾಹ್ಮಣರ ಸಾಮಾಜಿಕ ಇತಿಹಾಸವನ್ನೇ ಕಾಣಬಹುದು. ಹವ್ಯಕ ಬ್ರಾಹ್ಮಣರ ಕೃಷಿ, ಆಚಾರ ವಿಚಾರ, ಆಲೋಚನೆಗಳು, ಭಜನೆ - ಆರಾಧನಾ ಪದ್ಧತಿ, ಸಂಸ್ಕಾರ, ಸಂಬಂಧಗಳು, ಮಾತುಕತೆ ಮುಂತಾದ ವಿವಿಧ ಮಗ್ಗುಲುಗಳಲ್ಲಿ ಹಾಸುಹೊಕ್ಕಾಗಿರುವ ಎಲ್ಲ ವಿಚಾರಗಳ ಮಂಥನ ಪ್ರಸ್ತುತ ಕೃತಿಯಲ್ಲಿ ವ್ಯಕ್ತವಾಗಿದೆ. ವಿವಿಧೆಡೆಗಳಲ್ಲಿ ಪ್ರತಿನಿತ್ಯ ಲೇಖಕರು ಬರೆದು ಪ್ರಕಟಿಸುವ ಈ ಲೇಖನಗಳು ಗ್ರಂಥವಾಗಿ ಹೊರಹೊಮ್ಮಿದ್ದು, ಹವ್ಯಕರ ಇತಿಹಾಸವನ್ನು ಬಿಂಬಿಸುವ ಒಂದು ದಾಖಲೀಕರಣ ಇದಾಗಿದೆ. ಹವ್ಯಕ ಭಾಷೆಯಲ್ಲಿ ಚಿಂತನೆಗಳ ಹೊತ್ತಗೆ ಪ್ರಕಟವಾಗಿರುವುದು ವಿರಳ. ಇಂದಿನ ಕಾಲಘಟ್ಟದಲ್ಲಿ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಶೋಧಗಳು, ಒಳನೋಟಗಳು ಅವಶ್ಯ....
Comments
Post a Comment