ಕಲ್ಕಿ: ಭಗವಂತನ 10ನೇ ರಹಸ್ಯ ಅವತಾರವೇ?! (ವಿಶೇಷ ಲೇಖನ)

ಕಲ್ಕಿ ಅವತಾರವನ್ನು ಭಗವಂತನ 10ನೇ ಅವತಾರವೆಂದು ಭಾವಿಸಲಾಗಿದೆ. ಕಲ್ಕಿ ಅವತಾರದ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ. ಕಲ್ಕಿಯು ಕಲಿಯುಗದ ದುರಿತಗಳನ್ನು ಕಂಡು ಅದನ್ನು ಕೃತಯುಗಕ್ಕೆ ಮರಳಿ ತರಲು ದೇವರು ತಾಳುವ ಅವತಾರವೆನ್ನಲಾಗಿದೆ.
ಕಲ್ಕಿಯು 'ಸಂಭಾಲ' ಎಂಬ ಹಳ್ಳಿಯಲ್ಲಿ ನದೀ ತೀರದಲ್ಲಿ ಬ್ರಾಹ್ಮಣ ದಂಪತಿಯ ಮಗನಾಗಿ ಹುಟ್ಟುತ್ತಾನೆ. ಆತ ಸಂಸಾರಿಯಾಗಿರುತ್ತಾನೆ. ಬಿಳಿಯ ಕುದುರೆಯೇರಿ ಆತ ಅವತರಿಸುತ್ತಾನೆ ಎಂದು ರೂಪಕಗಳಿವೆ. ಕಲ್ಕಿ ಈಗಾಗಲೇ ಜನ್ಮ ತಾಳಿದ್ದಾನೆ ಎಂದು ಕೆಲವರು, ಕಲ್ಕಿ ಬಂದ ನಂತರ ಯುಗಾಂತ್ಯವಾಗುವುದೆಂದು ಹಲವರು ಭಾವಿಸುತ್ತಾ ಕಲ್ಕಿ ಅವತಾರವನ್ನು ನಾವು ಕಾಣಲಾರೆವು ಎನ್ನುವವರೂ ಇದ್ದಾರೆ. ವಾಸ್ತವದಲ್ಲಿ ಧರ್ಮ ಸಂಸ್ಥಾಪನೆಗೆ ಸಂಬಂಧಿಸಿ ಕಲ್ಕಿಯಷ್ಟು ಸುಂದರ ರೂಪಕವೇ ಇಲ್ಲ. ಏಕೆಂದರೆ ಕಲ್ಕಿ ಕ್ರೂರಿಯಲ್ಲ. ಕಲ್ಕಿ ಕಣ್ಣಿಗೆ ಕಾಣಬಲ್ಲ ಅವತಾರವಲ್ಲ. ಮತ್ತೆ ಕಲಿಯುಗವು ನಿಧಾನವಾಗಿ ಸತ್ಯಯುಗವಾಗುತ್ತದೆ. ಅಲ್ಲಿ ಪ್ರಳಯವಿಲ್ಲ. ಪರಿವರ್ತನೆ. ಇದು ಮತ್ತೊಂದು ವಾದ.
ಕಲ್ಕಿಯು ಕಲಿಯನ್ನು, ನಂತರ ತನ್ನ ಕೆಲವು ಶತ್ರುಗಳನ್ನು ಮೊದಲು ನಾಶಮಾಡುತ್ತಾನೆ ಎಂದು ಸಾಂಕೇತಿಕವಾಗಿಯೂ ಹೇಳಲಾಗಿದೆ. ಇದಕ್ಕೆ ಪೂರಕವಾಗಿ ಭಾಗವತದ ವಿಭೂತಿಯೋಗಾಧ್ಯಾಯದಲ್ಲಿ ರೋಹಿಣಿ ನಕ್ಷತ್ರದ ಶ್ರೀಕೃಷ್ಣನ ಹೇಳಿಕೆಯಿದೆ. ಆತ ಅಲ್ಲಿ ನಡೆದ ಕಾಲ್ಪನಿಕ ಸಂವಾದದಲ್ಲಿ 'ನಕ್ಷತ್ರಗಳಲ್ಲಿ ನಾನು ಅಭಿಜಿತ್' ಎಂದಿದ್ದಾನೆ. ಪುನರ್ವಸು ನಕ್ಷತ್ರದ ಪರಶುರಾಮ ಅವತಾರವು ಎಲ್ಲ ಕಾಲದಲ್ಲೂ ಇದ್ದು, ಕಲ್ಕಿ ಅಂಥ ಒಬ್ಬನಿಂದ ಎತ್ತರದ ಪ್ರದೇಶದಲ್ಲಿ ತರಬೇತಿ ಪಡೆಯುತ್ತಾನೆ ಮತ್ತು 'ನೀನು ಧರ್ಮರಕ್ಷಣೆಗಾಗಿ ಇಲ್ಲಿ ಇರಬೇಕಾದವನು' ಎಂಬ ಅಭಯ ಪಡೆಯುತ್ತಾನೆ. ಕಲ್ಕಿ ಅವತಾರವು ಪರಶುರಾಮನು ಬ್ರಾಹ್ಮಣರಿಗಾಗಿ ಸೃಷ್ಟಿಸಿದ ದಕ್ಷಿಣ ಭಾರತದಲ್ಲಿ ಆಗುತ್ತದೆ. ಆತ ಬ್ರಾಹ್ಮಣ ರೂಪದಲ್ಲಿ ಹುಟ್ಟಿದ ಕ್ಷಾತ್ರ ಗುಣದವನು ಎಂದರೆ ಆತನ ಗುಣ ಅಂಥದ್ದಾಗಿರುತ್ತದೆ ಎಂದು ವಾದವಿದೆ. ಆಶ್ಚರ್ಯವೆಂದರೆ ಕಲ್ಕಿ ಕ್ರೂರಿಯಲ್ಲ. ಶಾಂತಮಯ. ಆತ  ಸತ್ಯಯುಗಕ್ಕೆ ಕೊಂಡೊಯ್ಯುವ ಪ್ರವರ್ತಕ. ಕಲ್ಕಿ ಏಕೆ ಭಗವಂತನ ಶ್ರೇಷ್ಠ ಅವತಾರ ಎಂದರೆ ಕಲ್ಕಿ ಧರ್ಮದ 4 ಸ್ತಂಭಗಳನ್ನು- ಸತ್ಯ, ಸಂಪತ್ತು, ದಯೆ, ಧ್ಯಾನ ಇವನ್ನು ಪ್ರತಿಷ್ಠಾಪಿಸುವ ಏಕೈಕ ಅವತಾರ. ಆದ್ದರಿಂದ ಅಲ್ಲಿ ಹಿಂಸೆಯಿರುವುದಿಲ್ಲ. ಯುದ್ಧಗಳಿಲ್ಲದೆ Golden age ಕಲ್ಕಿಯಿಂದ ಪ್ರಾಪ್ತವಾಗುತ್ತದೆ ಎನ್ನಲಾಗಿದೆ.
ಕಲ್ಕಿ ಅವತಾರ ಹೇಗಾಗುತ್ತದೆ?
ಕಲ್ಕಿ ಅವತಾರ ಅನುಭವಿಸಲಿಕ್ಕಾದೀತು ಅಷ್ಟೇ! ಕೆಲವು ಕಾಸ್ಮಿಕ್ ಹೇಳಿಕೆಗಳ ಪ್ರಕಾರ ವ್ಯೋಮದಿಂದ ಸೂರ್ಯಮಂಡಲಕ್ಕೆ ಮೊದಲು ತರಂಗಗಳ ಸೂಚನೆ ರವಾನೆಯಾಗುತ್ತದೆ. ಸೂರ್ಯಮಂಡಲದಿಂದ ಭೂಮಿಯಲ್ಲಿ ಅಭಿಜಿತ್ ನಕ್ಷತ್ರದ ಮೂಲಕ ಸಂದೇಶಗಳು ಹರಡುತ್ತವೆ. Golden age ಆರಂಭದ ಸೂಚನೆ ದೊರೆತು ಹೊಸ ಪೀಳಿಗೆ ಒಳ್ಳೆಯವರಾಗುತ್ತಾರೆ. ಅವರು ಉಳಿದವರನ್ನು ಯುದ್ಧಗಳೇ ಇಲ್ಲದೆ ಬದಲಾಯಿಸುತ್ತಾರೆ. Golden ageನಲ್ಲಿ ಯುದ್ಧಗಳೇ ಇರುವುದಿಲ್ಲ. ಅಲ್ಲಿ ಆದರ್ಶಮಯ ಬದುಕು ಇರುತ್ತದೆ.
ಯುಗಧರ್ಮದ ಮರ್ಮವೇನು?
ಧರ್ಮದ ಪ್ರಧಾನ 4 ಸ್ತಂಭಗಳೆಂದರೆ ಸತ್ಯ (Truth), ಸಂಪತ್ತು (Wealth), ದಯೆ (Compassion) ಹಾಗೂ ಧ್ಯಾನ (Penance). ಆದರೆ ಯುಗಧರ್ಮಗಳು ಇವು:
*ಕೃತಯುಗದಲ್ಲಿ ಧರ್ಮದ 4 ಅಂಗಗಳು ಸತ್ಯ, ಸಂಪತ್ತು, ದಯೆ, ಧ್ಯಾನ.
*ತ್ರೇತಾಯುಗದಲ್ಲಿ ಸಂಪತ್ತು, ದಯೆ, ಧ್ಯಾನ.
*ದ್ವಾಪರದಲ್ಲಿ ಸಂಪತ್ತು ಮತ್ತು ಧ್ಯಾನ.
*ಕಲಿಯುಗದಲ್ಲಿ ಸಂಪತ್ತೇ ಧರ್ಮ.

✍️ ಶಿವಕುಮಾರ ಸಾಯ 'ಅಭಿಜಿತ್'
________¤_______

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್