ಬಹಿರಂತಶ್ಚ ಭೂತಾನಾಂ........
ಬಹಿರಂತಶ್ಚ ಭೂತನಾಮಚರಂ ಚರಮೇವ ಚ | ಸೂಕ್ಷ್ಮತ್ವಾತ್ತದವಿಜ್ಞೇಯಂ ದೂರಸ್ಥಂ ಚಾಂತಿಕೇ ಚ ತತ್ || ಭಗವದ್ಗೀತೆಯ ಕೆಲವು ಸಾಲುಗಳಿವು. ಈ ಶ್ಲೋಕದ ಅರ್ಥ ದೇವರು ಎಂದರೆ ಯಾರು? ಅವನು ಎಲ್ಲಿದ್ದಾನೆ? ಎಂಬ ನಮ್ಮ ಹುಡುಕಾಟಕ್ಕೆ ಉತ್ತರ. " ಅದು ಜೀವಿಗಳ ಹೊರಗಿದೆ ; ಒಳಗೂ ಇದೆ ; ಆದರೂ ಎಲ್ಲೆಡೆ ಚಲಿಸುತ್ತಿದೆ. ಅದು ಅಣುವಿಗಿಂತ ಅಣು ; ಅದಕೆಂದೆ ತಿಳಿವಿಗೆಟುಕದ್ದು. ಅದು ದೂರದಲ್ಲಿದ್ದರೂ ಎಲ್ಲರ ಹತ್ತಿರದಲ್ಲಿದೆ. " ಇದು ಸಾರ. ಈಶೋಪನಿಷದ್ ಮಂತ್ರದಲ್ಲಿ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ವಿವರಿಸಿದ ರೀತಿಯಲ್ಲಿಯೇ ಪ್ರಾಯೋಗಿಕವಾಗಿ ದೇವರನ್ನು ವಿವರಿಸುವ ವೈದಿಕ ಮಂತ್ರವಿದೆ: "ತದ್ ಅಂತರ ಅಸ್ಯ ಸರ್ವಸ್ಯ ತದ್ ಸರ್ವಸ್ಯ ಬಾಹ್ಯಃ" - ಅಂದರೆ, "ಅವನು ಎಲ್ಲದರೊಳಗೆ ಅಸ್ತಿತ್ವದಲ್ಲಿದ್ದಾನೆ, ಆದರೆ ಅವನು ಎಲ್ಲದರ ಹೊರಗಿದ್ದಾನೆ." ನಾವು ಭಗವಂತನಂತೆ ಆಗುವುದಕ್ಕೆ ಸಾಧ್ಯವಾ? ಕೀಳರಿಮೆ ಮತ್ತು ಮೇಲರಿಮೆ ಎರಡರಿಂದಲೂ ಅದು ಸಾಧ್ಯವಿಲ್ಲ. ಆದರೆ, ಸಾಧ್ಯವಿದೆ - ನಮ್ಮ ಶಕ್ತಿಯನ್ನು ನಮ್ಮ ಒಳಹೊರಗು ಇರುವ ಸರ್ವ ಭೂತಗಳಲ್ಲೂ ಕಂಡುಕೊಳ್ಳುವ ಮೂಲಕ ಮಾತ್ರ. ಆ ಶಕ್ತಿ ಸರ್ವಾಂತರ್ಯಾಮಿ. ಅಂದರೆ, ಯಾರೂ ಮೇಲೂ ಅಲ್ಲ. ಯಾರೂ ಕೀಳೂ ಅಲ್ಲ. ನೀವು - ನಾವು ನಮ್ಮ ನಮ್ಮ ಆಳಕ್ಕಿಳಿದು ಪ್ರಶ್ನಿಸಿಕೊಳ್ಳಬೇಕು. ನಮ್ಮ ಊಹೆಗೆ ನಿಲುಕದ, ನಾವು ಕಾಣದ ಹಲವಾರು ವಿಚಾರಗಳು ನಮ್ಮೆಲ್ಲರನ್ನೂ ಬದುಕಿಸುತ್ತಲೇ ಇರುತ್ತ...
Comments
Post a Comment