ನುಡಿಬಿಂದು: 'ಧ್ರುವೀಕರಣ'

ಮೊಟ್ಟೆಯೊಳಗೆ ಪಕ್ವವಾಗಿರುವ ಭ್ರೂಣವು ಯಾವ ಬಿಂದುವಿನಲ್ಲಿ ಹೊರಬರಬೇಕೋ ಅಲ್ಲೇ ಮರಿಯಾಗಿ ಹೊರಬಂದಿರುತ್ತದೆ. ಅಷ್ಟರ ಮುನ್ನ ಆ ವ್ಯವಸ್ಥೆ ಇನ್ನಷ್ಟು ಸುಲಭವೋ ಅಥವಾ ಕ್ಲಿಷ್ಟವೋ ಆಗಿರುತ್ತಿದ್ದರೆ ಮೊಟ್ಟೆ ಮರಿಯಾಗುವ ಪ್ರಕ್ರಿಯೆಯೇ ಜರಗುವುದಿಲ್ಲ. ಹಾಗೆಯೇ ನೀರಿನಲ್ಲಿ ಒಂದು ನೆಲವಾಸಿ ಜೀವಿ ಬಿದ್ದುಬಿಟ್ಟಿತು ಎಂದಿಟ್ಟುಕೊಳ್ಳಿ. ಆಗ ಅದರ ಒಳಹೊರಗಿನ ಒದ್ದಾಟ-ಗುದ್ದಾಟ ಮತ್ತು ಚಲನವಲನಗಳ ಫ್ರೀಕ್ವೆನ್ಸಿ ಕೂಡಾ ಒಂದು ಬಗೆಯಲ್ಲಿ ಜೀವಿಯನ್ನು ಕಾಪಾಡುವ ಸಾಧ್ಯತೆಗಳತ್ತ ಕೊಂಡೊಯ್ಯಬಹುದು. ಎತ್ತರದ ಬೆಟ್ಟಗಳಲ್ಲಿ ಯಶಸ್ವಿಯಾಗಿ ಬದುಕುವ ಮರಗಳಾಗಿರಲಿ ಅಥವಾ ಭೂಮಿಯೊಳಗಿನ ಹುಳುಹುಪ್ಪಟೆಗಳಾಗಿರಲಿ, ಎಲ್ಲವೂ ತಮಗೆ ಬೇಕಾದ ಅಂಗೋಪಾಂಗಗಳನ್ನು ಹೊಂದಿರುವುದರಿಂದ ವ್ಯತ್ಯಸ್ತ ಪರಿಸರದಲ್ಲಿ ವ್ಯತ್ಯಸ್ತ ರೀತಿಯಲ್ಲಿ ಬದುಕುತ್ತವೆ. ನಾವು ಎಲ್ಲಿ ಯಾವ ಪರಿಸ್ಥಿತಿಯಲ್ಲಿ ಬೆಳೆದು ಬದುಕುತ್ತಿದ್ದೇವೋ ಅದು ನಾವು ಮಾತ್ರ ಸುಲಭವಾಗಿ ನಿಭಾಯಿಸಬಲ್ಲ ಪರಿಸ್ಥಿತಿಯಾಗಿರುತ್ತದೆ. ಎಲ್ಲರೂ ಯಾವಾಗಲೂ ಎಲ್ಲಿರಬೇಕೋ ಅಲ್ಲೇ ಇರುತ್ತಾರೆ. ಇದು ಪ್ರಕೃತಿಯಲ್ಲಿ ನಡೆಯುವ ಸಹಜ, ಸಾರ್ವತ್ರಿಕ ಧ್ರುವೀಕರಣ.
✍️ಶಿವಕುಮಾರ ಸಾಯ 'ಅಭಿಜಿತ್'
🔵🔴

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್