ಶೋಧನೆ ಎಂದರೆ.....?!
ಶೋಧನೆ ಎಂದರೆ ಹುಡುಕುವುದು. ಶೋಧನೆಯನ್ನು ನಾವು ಎರಡು ರೀತಿಯಲ್ಲಿ ಮಾಡಬಹುದು. ಒಂದು ಬಾಹ್ಯಜಗತ್ತಿನಲ್ಲಿ. ಮತ್ತೊಂದು ಆಂತರಿಕ ಜಗತ್ತಿನಲ್ಲಿ. ಎರಡೂ ಒಗ್ಗೂಡಿದಾಗ ಜ್ಞಾನವು ಹೊಳೆಯುತ್ತದೆ. ಜ್ಞಾನ ಸಾಧನೆಯಾಗುವುದು ಅಂತರಂಗದ ಶೋಧನೆಯಿಂದ. ಬಾಹ್ಯದಲ್ಲಿ ನಮ್ಮ ಇಂದ್ರಿಯಗಳು ಅನುಭವ ಪಡೆಯುತ್ತವೆ. ಅವಕ್ಕೆ ಜಗತ್ತಿನ ಪರಿಸರದಲ್ಲಿ ಬೋಧನೆ, ತರಬೇತಿ ಎಲ್ಲವೂ ಸಿಗುತ್ತಿರುತ್ತದೆ. ಅದರ ಇನ್ನೊಂದು ಮಗ್ಗುಲಲ್ಲಿ ಅಂದರೆ ಅಂತರಂಗದಲ್ಲಿ ಶೋಧನೆಯು ನಡೆಯುತ್ತದೆ. ಬಾಹ್ಯಕ್ಕೆ ತೆರೆದ ದೃಷ್ಟಿ ಮತ್ತು ಅಂತರಂಗಕ್ಕೆ ತೆರೆದ ದೃಷ್ಟಿ ಎರಡರ ಸಂಗಮದಿಂದ ಅಜ್ಞಾತವಾಗಿದ್ದ ಜ್ಞಾನವು ಜ್ಞಾತರೂಪಕ್ಕೆ ಬರುತ್ತದೆ. ನಮ್ಮ ಪೂರ್ವಜ್ಞಾನ ಹೊಸ ವಿಷಯಗಳನ್ನು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ. ನಮ್ಮ ದೇಹದ ಎಲ್ಲಾ ಅಂಗೋಪಾಂಗಗಳಿಗೂ, ಎಲ್ಲಾ ಜೀವಕಣಗಳಿಗೂ ಅನೂಹ್ಯ, ಅನಂತ, ಬೃಹತ್ ಬ್ರಹ್ಮಾಂಡಗಳ ಚೇತನದ ಚೈತನ್ಯವಿರುತ್ತದೆ ಹಾಗೂ ಅರ್ಥಪೂರ್ಣವಾದ ಸಿದ್ಧಿ, ವಿಶೇಷತರವಾದ ಸ್ಮೃತಿ ಇರುತ್ತದೆ. ಬೋಧನೆಯಿಂದ ಲಭಿಸುವುದು ತರಬೇತಿ. ಆದರೆ ನಾವು ಇಂದ್ರಿಯಗಳ ಮೂಲಕ ಪಡೆಯುವ ಪಾಠ ಏನನ್ನು ಹೇಳುತ್ತದೆ? ಕಣ್ಣಿನ ಆಕಾರವನ್ನೊಮ್ಮೆ ಗಮನಿಸಿ. ಬಹುಕೋನಗಳಲ್ಲಿ ಅದು ವ್ಯಾಪಕವಾದದ್ದನ್ನೆಲ್ಲ ನೋಡುತ್ತಿದೆ! ಎಷ್ಟು ಹೊರಗೆ ತೆರೆದಿದೆಯೋ ಅಷ್ಟೂ ಒಳಗೆ ಗ್ರಹಿಕೆಯಿದೆ. ಅಷ್ಟೊಂದು ತಂತುಗಳಿವೆ, ವ್ಯವಸ್ಥೆಯಿದೆ. ಎಲ್ಲ ಪಂಚೇಂದ್ರಿಯಗಳೂ ಹಾಗೆಯೇ. ಹೊರಪ್ರಪಂಚ ಅರ್ಥವಾಗುವುದು ಒಳಗೆ...