ಅಂಟು - ನಂಟು
ಪ್ರಾಚೀನ ಕಾಲದ ಜನರು
ಮನೆಗಳನ್ನು ಕಟ್ಟಿದರು
ಇಟ್ಟಿಗೆಗಳಿಂದ....
ಕಟ್ಟಿದ ಮೇಲೆ
ಒಂದೊಂದು ಇಟ್ಟಿಗೆಯೂ
ತಾನೇ ಮನೆಯಾಗಿದ್ದೇನೆಂದು
ಬೀಗಿತು.
ಇಟ್ಟಿಗೆಗಳು ಗರ್ವಪಟ್ಟದ್ದಕ್ಕೆ
ದೊಡ್ಡ ಅವಾಂತರವಾಗಿ
ಕಟ್ಟಡವೇ ಬಿರಿಯಿತು;
ಮನೆಯೇ ಮುರಿಯಿತು.
ಲೋಕಕ್ಕೆ ತಿಳಿಯಿತು -
ಪ್ರಾಚೀನ ಕಾಲದ ಜನರು
ಮನೆಗಳನ್ನು ಕಟ್ಟಿದ್ದು
ಇಟ್ಟಿಗೆಗಳಿಂದಲ್ಲ;
ಅಂಟಿನಿಂದ!
ಅಂಟು - ನಂಟು ಇಲ್ಲದೆ ಹೋದರೆ
ಇಟ್ಟಿಗೆಯೂ ಇಲ್ಲ
ಮನೆಯೂ ಇಲ್ಲ.
✍️ ಶಿವಕುಮಾರ ಸಾಯ 'ಅಭಿಜಿತ್'
Comments
Post a Comment