ಕೃಷ್ಣ + ಅರ್ಜುನ = ಮಹಾಭಾರತದ 'ವ್ಯಾಸವಿಸ್ತಾರ'!
ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಯಾಕೆ ಕೃಷ್ಣನ ಬಗ್ಗೆ ಬರೆಯಬಾರದು ಅನ್ನಿಸಿತು. ನೀನು ನಿ ನ್ನ ರಕ್ಷಣೆಯ ವಿಷಯದಲ್ಲಾಗಲೀ, ಯುದ್ಧಗಳಲ್ಲಾಗಲೀ ಹಿಂದೆ ಬೀಳುವಂತಿಲ್ಲ ಎಂಬ ಬಗ್ಗೆ ಬೋಧಿಸುವ ಒಂದು ಪವಿತ್ರ ಗ್ರಂಥ ಭಗವದ್ಗೀತೆ. ಆರನೇ ತರಗತಿಯ ಚಿಕ್ಕ ವಯಸ್ಸಿನಲ್ಲೇ ನಾನದನ್ನು ಹತ್ತಾರು ಬಾರಿ ಓದಿ ಮನನ ಮಾಡಿಕೊಂಡಿದ್ದೆ. ಕೃಷ್ಣನ ಮೂಲಕ ಅಲ್ಲಿ ವಿವಿಧ ಯೋಗಗಳು ಪ್ರತಿಪಾದಿಸಲ್ಪಟ್ಟಿದ್ದೂ ಕೂಡ ಇದೆ. ಅರ್ಜುನನಲ್ಲಿ ಎಲ್ಲ ಶಕ್ತಿ ಸಾಮರ್ಥ್ಯ ಇದ್ದು, ಆತ ಯುದ್ಧಗಳಲ್ಲಿ ಹಿಂದೆ ಬೀಳದೆ ತನ್ನೆಲ್ಲ 'ಒಳ್ಳೆಯತನ'ಗಳನ್ನು ಬಳಸಿ ಕೃಷ್ಣನ ಸಾರಥ್ಯದಲ್ಲಿ ವಿಜಯ ಸಾಧಿಸುವ ಸಂದರ್ಭ ನನಗೆ ಅತ್ಯಂತ ಮುಖ್ಯವಾಗುತ್ತದೆ. ವ್ಯಾಸ ವಿರಚಿತವಾದ ಮಹಾಭಾರತ ಹಾಗೂ ಮತ್ತೆ ಅವರಿಂದಲೇ ವಿಸ್ತರಿಸಿ ರಚಿಸಲ್ಪಟ್ಟ ಈ ಭಗವದ್ಗೀತೆಯಿಂದ ನಾನೇನಾದರೂ ಕಲಿಯಬೇಕಾಗಿದ್ದರೆ ಅಲ್ಲಿ ಅರ್ಜುನನ 'ಸಾಚಾತನ' ಮತ್ತು ಶ್ರೀಕೃಷ್ಣನ 'ಅಕಳಂಕ' ಚಾರಿತ್ರ್ಯ ಬಹಳ ಮುಖ್ಯವೆನಿಸುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ವ್ಯಾಸರ ಕಾಲ್ಪನಿಕ ಜಗತ್ತು ಅದ್ಭುತವೆನಿಸುತ್ತದೆ. ಸಂಸ್ಕೃತದ ಪದಧಾತುಗಳ ವ್ಯುತ್ಪತ್ತಿ ಮತ್ತು ಅರ್ಥನಿರ್ಣಯದ ಪ್ರತಿಪಾದನೆಗಳು ಅಗಾಧವೆನಿಸುತ್ತವೆ. ಕೇವಲ ಒಂದು ಕಥೆ ಎನ್ನುವಾಗಲೂ ಕೂಡ ಕಥೆಯೂ ಒಂದು ಸಾಧ್ಯತೆ ಮತ್ತು ಅದು ಸ್ವಯಂಸಿದ್ಧ ಎಂಬ ನನ್ನ ಕಲ್ಪನೆಗೆ ಪುಷ್ಟಿ ಕೊಡುವುದು ವ್ಯಾಸರ ಆಖ್ಯಾನಗಳು. ಏಕೆಂದರೆ ವ್ಯಾಸ ವಿರಚಿತವಾದ ಕಾವ್ಯ ಜಗತ್ತಿ...