ನಾವು ನಮ್ಮ ಸುತ್ತಲೂ ನಮ್ಮದೇ ಭೂತಕಾಲ ಮತ್ತು ಭವಿಷ್ಯತ್ಕಾಲವನ್ನು ನೋಡುತ್ತೇವೆ
ನಮಗೆ ಈ ಜಗತ್ತನ್ನು ಅನುಭವಿಸುವುದಕ್ಕೆ ನಮ್ಮ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ ಎಂಬ ಐದು ಜ್ಞಾನೇಂದ್ರಿಯಗಳು ಹಾಗೂ ಕ್ರಿಯೆಗಳಿಗಾಗಿ ವಾಕ್, ಪಾಣಿ, ಪಾದ, ಪಾಯು ಮತ್ತು ಉಪಸ್ಥ ಎಂಬ ಐದು ಕರ್ಮೇಂದ್ರಿಯಗಳು ಇರುವಂಥದ್ದು. ನಮ್ಮ ದೇಹ ಒಂದು ಅದ್ವಿತೀಯ ಸಾಧನವಾಗಿದೆ. ಈ ಲೇಖನದಲ್ಲಿ ನಾವು ನಮ್ಮ ಬಗ್ಗೆ ಸಮಗ್ರವಾಗಿ ನೋಡುವ ಪ್ರಯತ್ನ ಮಾಡೋಣ. ನಮ್ಮ ದೇಹವೆಂಬ ಪಿಂಡಾಂಡವು ಬ್ರಹ್ಮಾಂಡದ ಮಾದರಿಯಲ್ಲಿದೆ. ನಾವು ಎಲ್ಲಾ ಇಂದ್ರಿಯಗಳನ್ನು ಬಳಸಿ ಪ್ರಪಂಚವನ್ನು ಅನುಭವಿಸುವಾಗಲೂ ಅದು ನಮ್ಮದೇ ಅನುಭವಪ್ರಪಂಚವಾಗಿರುತ್ತದೆ. ಆಧ್ಯಾತ್ಮಿಕವಾಗಿ ಮತ್ತು ಜ್ಯೋತಿಷ್ಯ ಅಂದರೆ ಆಸ್ಟ್ರೋನಮಿ ಆಧಾರದಲ್ಲಿ ನೋಡುವಾಗ ಎಲ್ಲಾ ನಮ್ಮ ಸುತ್ತಲ ಬಗೆಬಗೆಯ ವಸ್ತುಗಳು ಹಾಗೂ ಜೀವಿಗಳು ಸಮಸ್ತವೂ ಒಂದೇ ಮೂಲದ ನೂರೆಂಟು ಮುಖಗಳು ಎಂದು ಕಂಡುಬರುವುದಾಗಿದೆ. ವಿಕಾಸವಾದವು ಜೀವಜಗತ್ತು ಕ್ರಿಮಿಗಳ ಹಂತದಿಂದ ಈ ಭೂಮಿಯಲ್ಲಿ ಜೀವ ವಿಕಾಸವಾಗುತ್ತಾ ಬಂತು ಎನ್ನುತ್ತದೆ. ಭೌತಶಾಸ್ತ್ರವು ಸಣ್ಣ ಬೋಸಾನ್ ಕಣ ಸ್ಫೋಟಿಸಿ ಇಂದಿನ ವಿಶ್ವವಾಯಿತೆಂದು ಹೇಳುತ್ತದೆ. ಅವೆರಡನ್ನು ಬೇರೆಬೇರೆಯಾಗಿ ನೋಡದೆ ಒಟ್ಟಾಗಿ ನೋಡುವಾಗ ಕಣ ಸಿದ್ಧಾಂತದಲ್ಲಿ ಬೆಳಕಿನ ಕಣದ ಬಗ್ಗೆ ಹೇಳಿದಂತೆಯೇ ಈ ವಿಶ್ವವೆಂದರೆ ಚೈತನ್ಯದ ಕಣವು ಕಣ ಮತ್ತು ತರಂಗವೂ ಆಗಿರುತ್ತಾ ಕಂಪಿಸುತ್ತಲೇ ಇರುವಂಥದ್ದಾಗಿದೆ. ತನ್ನ ಎಲ್ಲಾ ಆಯಾಮಗಳಿಂದ ಅನೂಹ್ಯ ಬಗೆಯಲ್ಲಿ ಇದು ಕಂಪಿಸುತ್ತಲೇ ಇದೆ. ಆ ಆಂದೋಲನದಲ್ಲಿ ಚೈತ...