ಹೊಸತನ
ಹೊಸ ದೃಷ್ಟಿಯಂತೆ, ಹೊಸ ಸೃಷ್ಟಿಯಂತೆ ಹಸಿರಾದ ಹಾದಿ ಅಂದ; ತುಸು ತಂಪು ಗಾಳಿ, ಪರಿಮಳದ ಗಂಧ, ಉಸಿರಾಡುವಾಗ ಚಂದ. ಬದಲಾದ ರೂಪ, ಬದಲಾದ ಬಣ್ಣ, ಬದಲಾದ ಬಣ್ಣನೆ; ಮೊದಲಿಲ್ಲದಂತೆ, ಮುದವಳಿಯದಂತೆ, ಪದದಲ್ಲಿ ಬದಲಾವಣೆ! ನಭದಲ್ಲಿ ತಾರೆ - ಪ್ರಭೆ ಮಿಂಚಿದಂತೆ ಶುಭ ಲಹರಿಯೊಂದು ಬರಲು, ರಾಗ ಮೂಡುತ್ತ, ನಾದ ಹೊಮ್ಮುತ್ತ ಯೋಗ ನುಡಿಯ ತರಲು; ಅನುದಿನವು ಬೆಳಕು, ಅನುಕ್ಷಣವು ಹುರುಪು ಮಿನುಗುವುದು ಹೊಳಪು ನಿತ್ಯ; ಅನುಮಾನವಿಲ್ಲ, ಅಪಮಾನವಿಲ್ಲ, ಅನ್ವೇಷಿಸುವುದು ಸತ್ಯ. ✍️ ಶಿವಕುಮಾರ ಸಾಯ 'ಅಭಿಜಿತ್'