Posts

Shivakumar Saya - About me here.....

Image
[] Poet, writer, teacher & astrologer [] Qualified M.A., B.Ed., UGC - NET, JRF [] Former sub-editor/journalist at Print media [] Havyaka Brahmins [] Single ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಸಾಯ ಎಂಬ ಊರಿನವರಾದ ಶ್ರೀ ಶಿವಕುಮಾರ್ ಸಾಯ ಕವಿ, ಸಾಹಿತಿ, ಅಧ್ಯಾಪಕರು. ಕನ್ನಡ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಬಿ. ಎಡ್. ಹಾಗೂ ವಿಶ್ವವಿದ್ಯಾಲಯ ಧನಸಹಾಯ ಆಯೋಗ, ನವದೆಹಲಿ ಇವರು ನಡೆಸುವ 'ಉಪನ್ಯಾಸಕರ ರಾಷ್ಟ್ರೀಯ ಅರ್ಹತಾ ಪರೀಕ್ಷೆ'ಯಲ್ಲಿ ಒಂದೇ ಪ್ರಯತ್ನದಲ್ಲಿ ಜೆಆರ್‌ಎಫ್ ರ್‍ಯಾಂಕ್‌ನೊಂದಿಗೆ ಉತ್ತೀರ್ಣರಾಗಿದ್ದಾರೆ. ಇವರ ನೂರಾರು ಕವಿತೆಗಳು ಹಾಗೂ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳು, ವಿಶೇಷ ಸಂಚಿಕೆಗಳು, ಸಂಪಾದನೆಗಳಲ್ಲಿ ಪ್ರಕಟವಾಗಿವೆ. ಆಕಾಶವಾಣಿ ಮತ್ತಿತರ ಮಾಧ್ಯಮಗಳಲ್ಲಿ ಬಿತ್ತರವಾಗಿವೆ. ಹಲವು ಸಾಹಿತ್ಯ ಸಮ್ಮೇಳನಗಳಲ್ಲಿ, ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಹಲವಾರು ಬಹುಮಾನಗಳನ್ನು, ಪುರಸ್ಕಾರಗಳನ್ನು ಪಡೆದಿದ್ದಾರೆ. 'ತೆರೆದ ಅಧ್ಯಾಯ' ಎಂಬ ಒಂದು ಡಿಜಿಟಲ್ ಕವನ ಸಂಕಲನ ಮತ್ತು 'ನಗುವ ಹೂ' ಎಂಬ ಒಂದು ಮಕ್ಕಳ ಕವನ ಸಂಕಲನ ಪ್ರಕಟವಾಗಿದೆ. 'ಅಮೃತವಾಹಿನಿ' ಎಂಬ ಸಂಘಟನೆಯ ಅಧ್ಯಕ್ಷರಾಗಿ ಪ್ರತಿಭಾವಂತ ಯುವಜನರನ್ನು ಒಗ್ಗೂಡಿಸುವಲ್ಲಿ ಸಕ್ರಿಯವಾಗಿ ಶ್ರಮಿಸುತ್ತಿದ್ದಾರೆ. ಅಲ್ಲದೆ, ವೇದಾಂಗ ಜ್ಯೋತಿಷ್ಯ ಕೇಂದ್ರವನ್ನು ಸ್ಥಾಪಿಸಿ ಆ...

About something one couldn't explain

Image
Here I write about some great things experienced by me and some theories that helped me also. Also I explain about some interesting topics I studied merely for my knowledge and it also connected with my personal experience and also with my intuition. I was decided to write something in English also because I know though Iam a kannada writer Kannada is a regional language but What Iam thinking, what I feel and my thoughts and theories are all universal in nature. So purposefully to reach maximum number of people in the world, at the same time English blogging is also an essentiality. If you are a person searching about miseries, about sixth sense, time travel, space study, matter, quantum, dimensions, life force, science, spirituality, meditation, yoga - what I express here are by my intuitions and experiences so that one could read by 200% is the case. Iam not a person of defeat but rather a man of success. Success is defined in our own terms is the another thing. My specia...

ಕನ್ನಡದಲ್ಲಿ ಮಕ್ಕಳ ಸಾಹಿತ್ಯ

Image
ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯವು ಒಂದು ಪ್ರತ್ಯೇಕ ವಿಭಾಗವಾಗಿ ಬೆಳೆದಿದೆ. 'ಮಕ್ಕಳ ಸಾಹಿತ್ಯ' ಎಂದರೆ ಮಕ್ಕಳ ಮನಸ್ಸನ್ನು ಅರಳಿಸಿ, ಕುತೂಹಲವನ್ನು ಕೆರಳಿಸಿ, ಕಲ್ಪನೆಯನ್ನು ರೂಪಿಸಿ, ಭಾವನೆಗಳನ್ನು ಪ್ರಚೋದಿಸಿ, ಆನಂದದಲ್ಲಿ ಮೀಯಿಸಿ ಅವರ ವ್ಯಕ್ತಿತ್ವವನ್ನು ರೂಪಿಸುವ ಸಾಹಿತ್ಯ ಎನ್ನಲಾಗುತ್ತದೆ. ಆಧುನಿಕ ಶಿಕ್ಷಣ ಮತ್ತು ನವೋದಯ ಸಾಹಿತ್ಯದ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯವು ವಿಶೇಷವಾಗಿ ವಿಕಸಿತವಾಗಿದೆ. ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಬೇರನ್ನು ಜಾನಪದ ಪರಂಪರೆಯಲ್ಲಿಯೇ ಕಾಣಬಹುದು. ಅಜ್ಜಿಕತೆಗಳು, ಲಾಲಿಹಾಡುಗಳು, ಪ್ರಾಸಬದ್ಧವಾದ ಪದಗಳು, ಬೆಡಗುಗಳು, ಒಗಟುಗಳು ಅಲ್ಲಿ ಕಂಡುಬರುತ್ತವೆ. ರಾಜಕುಮಾರ - ರಾಜಕುಮಾರಿಯರ ಕಥೆ, ರಮ್ಯಾದ್ಭುತ ಕಥೆಗಳು, ಕಾಗಕ್ಕ ಗುಬ್ಬಕ್ಕನ ಕಥೆ, ಪಂಚತಂತ್ರದ ಕಥೆ - ಇಂಥವು ಮಕ್ಕಳ ಮನಸ್ಸನ್ನು ಸಂತೋಷಗೊಳಿಸುತ್ತಿದ್ದವು. ಆದರೂ ಆಧುನಿಕ ಕಾಲದಲ್ಲಿ ಮುದ್ರಣ ಕಲೆ ಜಾರಿಗೆ ಬಂದ ಮೇಲೆ ಮಕ್ಕಳ ಸಾಹಿತ್ಯ ವಿಪುಲವಾಗಿ ಬೆಳೆಯಿತು. ಪತ್ರಿಕಾ ಮಾಧ್ಯಮ ಇದಕ್ಕೆ ಪ್ರಚಾರ ನೀಡಿತು. ಹೀಗಾಗಿ ಇಂದು ಮಕ್ಕಳ ಸಾಹಿತ್ಯದಲ್ಲಿ ಮಕ್ಕಳ ಕವಿತೆಗಳು, ಕಥೆಗಳು, ನಾಟಕ, ವಿಜ್ಞಾನ ಬರಹಗಳು, ವ್ಯಕ್ತಿಚಿತ್ರಗಳು ಪುಸ್ತಕಗಳಾಗಿ ಹೊರಬಂದು ಮಕ್ಕಳ ಮನೋಲೋಕವನ್ನು ಅರಳಿಸುತ್ತಿವೆ. ಕವಿ ಪಂಜೆ ಮಂಗೇಶ ರಾವ್ ಅವರನ್ನು ವಿಶೇಷವಾಗಿ 'ಶಿಶು ಸಾಹಿತ್ಯದ ಜನಕ' ಎಂದೇ ಕರೆಯಲಾಗುತ್ತದೆ. ಅವರ 'ಉದಯರಾಗ...

ಗುರುದರ್ಶನ

Image
ನಿನ್ನೊಳಗೆ ಎಲ್ಲವೂ ಇರುವುದರಿಂದಲೇ ದರ್ಶನವು ಸಾಧ್ಯ; ಗುರುದರ್ಶನವೆಂದರೆ ದೊಡ್ಡದರ ದರ್ಶನ. ಬ್ರಹ್ಮ ಕಲ್ಪ! ಅಗಣಿತ ಬ್ರಹ್ಮಾಂಡಗಳಲ್ಲಿ ಕಲ್ಪಿಸಿ ಕಾಲಿಡುತ್ತಾ ಅನಂತದಲ್ಲಿ ವ್ಯಾಪಿಸಿ, ದೇಶ ಕಾಲದಳತೆಯಲ್ಲಿ ದಿಕ್ಸೂಚಿಯಾಗಿ ಸಾಗಿ, ಎಲ್ಲವ ರೂಪಿಸಿ, ನಿರೂಪಿಸಿ, ಅಣು - ಪರಮಾಣುಗಳಲ್ಲಿ ಅಯಾನೇ ಆಗಿ, ಚರಾಚರಗಳಲ್ಲಿ ಚಿರಂತನವಾಗಿ ಚಲಿಸುತ್ತಿರುವೆ. ಬೆಳಕಿನ ಚೈತನ್ಯದ್ದು ನಡೆದದ್ದೇ ದಾರಿ, ಪರಿಣಾಮ ಚಿರಂಜೀವ. ಲೋಕ ಲೋಕಗಳ ಇಂಚಿಂಚಲ್ಲೂ ತೋಚಿ, ಅಖಂಡ ಆಯಾಮಗಳಲ್ಲಿ ಗೋಚರಿಸಿ, ಹಗಲಿರುಳೆನ್ನದೆ, ಹುಟ್ಟುಸಾವೆನ್ನದೆ, ನಿನ್ನಷ್ಟಕ್ಕೆ ನೀನಿದ್ದು ಮಾಡುತಿಹೆ ಸದ್ದು - ನಿನ್ನದೊಂದು ವಿಸ್ಮಯದ ಚಲನೆ, ಅಪರಿಮಿತ, ಅಸೀಮ, ನಿಸ್ಸೀಮ. ಪ್ರಕೃತಿಯಲ್ಲಿ ಪವಾಡ, ನೂರಾರು ವಿದ್ಯೆ, ಚಮತ್ಕಾರ; ನೂರೆಂಟರಲ್ಲಿ ನೀನು ಒಂದಾಗಿ, ಕಣ್ತೆರೆದದ್ದು ದೊಡ್ಡದೇ. ✍️ ಶಿವಕುಮಾರ ಸಾಯ 'ಅಭಿಜಿತ್'

ಚೈತನ್ಯದ ಆಂದೋಲನ ನಿರಂತರ - ಇದು ಜೀವ, ಇದೇ ಜೀವನ!

Image
“No man ever steps in the same river twice, for it's not the same river and he's not the same man.” - ಹೀಗೆಂದು ಹೇಳಿದವನು ಹಿರಾಕ್ಲಿಟಸ್. ಬದುಕಿನ ಬಗ್ಗೆ ಆತ ಎಷ್ಟೊಂದು ಅರ್ಥವತ್ತಾಗಿ ಹೇಳಿದ್ದಾನೆ ಅಲ್ಲವೇ? ನದಿ ಹೇಗೆ ಕ್ಷಣ ಕ್ಷಣ ಬದಲಾಗುತ್ತಿರುತ್ತದೆಯೋ ಮನುಷ್ಯ ಕೂಡ ಕ್ಷಣ ಕ್ಷಣ ಬದಲಾಗುತ್ತಾನೆ. ಅಚಲ ಎಂದು ಭಾವಿಸಿದರೆ ಎಲ್ಲವೂ ಅಚಲ, ಸ್ಥಿರ. ಆದರೆ ಪ್ರತಿಕ್ಷಣ ಬದಲಾವಣೆಯೊಂದಿಗೆ ಪ್ರಕೃತಿಯಾಗಿ ತೆರೆದುಕೊಳ್ಳುವುದು ಬ್ರಹ್ಮಾಂಡವೇ. "ಜೀವನ" ಎಂಬ ಪದವನ್ನು ಬದುಕಿಗೆ ಅನ್ವರ್ಥವಾಗಿ ಬಳಸುವಾಗ ಅದರ ನೀರು ಎಂಬರ್ಥವನ್ನು ಗ್ರಹಿಸಬೇಕು. ನೀರು ಎಲ್ಲಾ ಸ್ಥಿತಿಯಲ್ಲೂ ಇರುತ್ತದೆ. ಈ ಅನಂತ, ಅಖಂಡ ವಿಶ್ವವೂ ತನ್ನಷ್ಟಕ್ಕೆ ತಾನೇ ಬಹು ಆಯಾಮಗಳ ಬೃಹತ್ ಬೆಳಕು ಅಂದರೆ ಚೈತನ್ಯ. ಅದು ಅದರಷ್ಟಕ್ಕೇ ಸ್ಥಿರವೂ, ಚಲನಶೀಲವೂ ಹೌದು. ಅದು ಬದಲಾಗುವ ಸ್ವರೂಪ ಹೊಂದಿರುವುದರಿಂದಲೇ ಶಾಶ್ವತ! ಅದಕ್ಕೆ ಒಳಗೆ ಹೊರಗೆ ಎಂಬುದಿಲ್ಲ. ಅದರ ಹೊರಗೆ ಮತ್ತೊಂದು ಎಂಬುದೂ ಇಲ್ಲ. ಜೀವವಿಜ್ಞಾನವು ಉಸಿರಾಟದ ಆಧಾರದಲ್ಲಿ, ಹೃದಯಬಡಿತದ ಆಧಾರದಲ್ಲಿ ಜೀವಂತಿಕೆಯನ್ನು ಗುರುತಿಸುತ್ತದೆ. ದೇಹದ ಕಣಕಣಗಳಲ್ಲಿ ಶಕ್ತಿಯ ಸ್ವೀಕರಣೆಯಾಗುತ್ತದೆ. ಶಕ್ತಿಯ ಪರಿವರ್ತನೆಯಾಗುತ್ತದೆ. ಶಕ್ತಿಯ ಬಿಡುಗಡೆಯಾಗುತ್ತದೆ. ಜೀವಿ ಪರಿಸರಶಾಸ್ತ್ರದಲ್ಲಿ ಜೀವಿಗಳ ಮೂಲ ಉದ್ದೇಶ ಪ್ರತ್ಯುತ್ಪಾದನೆಯಲ್ಲದೆ ಮತ್ತೇನೂ ಅಲ್ಲ ಎನ್ನುತ್ತಾರೆ. ರಸಾಯನಶಾಸ್ತ್ರವು ...

'ತಪಸ್ಸು' ಎಂಬ ಟೆಲಿಪೋರ್ಟೇಶನ್!

Image
ನನ್ನ ನಂಬಿಕೆ ನಿಜಕ್ಕೂ Body consciousnessನ ಬಗ್ಗೆ! ಹಾಗಾಗಿ "ದೇಹೋ ದೇವಾಲಯ ಪ್ರೋಕ್ತಃ ಜೀವೋ ದೇವೋ ಸದಾಶಿವಃ" ಎಂಬ ಸನಾತನ ವಾಣಿ ಸಮ್ಮತ. ತಿಳಿಯಲ್ಪಟ್ಟಂತೆ ಆಂದೋಲನ ಮತ್ತು ಅಚಲತೆ ಎರಡೂ ಸ್ಥಿತಿಗಳೇ! ತಪಸ್ಸನ್ನು, ಧ್ಯಾನವನ್ನು ಉನ್ನತ ಮಟ್ಟದ ಪ್ರಾರ್ಥನೆ ಎನ್ನಲಾಗುತ್ತದೆ. ಧ್ಯಾನಗೈಯುವಾಗ ದೇಹದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನಷ್ಟೇ ಗಮನಿಸಬೇಕೆಂದು ಯೋಗಶಾಸ್ತ್ರ ಹೇಳುತ್ತದೆ. ಏಕೆಂದರೆ ದೇಹವನ್ನು ವಿಶ್ವವೆಂದೇ ಇಲ್ಲಿ ಪರಿಗಣಿಸಲಾಗುತ್ತದೆ. ಈಗ ನಾನು ಬರೆಯುತ್ತಿರುವುದು ಟೆಲಿಪೋರ್ಟೇಶನ್ ಬಗ್ಗೆ! ಆಧುನಿಕ ವಿಜ್ಞಾನದಲ್ಲಿ ಪ್ರಾಯೋಗಿಕವಾಗಿ ಧ್ವನಿ, ಚಿತ್ರ ಇತ್ಯಾದಿ ಟೆಲಿಪೋರ್ಟ್ ಆಗುವಂಥದ್ದು ನಾವು ನೋಡಿದ್ದೇವೆ. ತಪಸ್ಸು ನೀಡುವ ಫಲಗಳನ್ನು ಟೆಲಿಪೋರ್ಟ್ ಎಂಬರ್ಥದಲ್ಲಿ ಗ್ರಹಿಸಲು ಸಾಧ್ಯವಾಗಿರುವ ಅನುಭವ-ಅನುಭಾವಗಳಿಗೆ ವ್ಯಕ್ತ ರೂಪ ನೀಡಲು ಪ್ರಯತ್ನಿಸಿದ್ದೇನೆ. ನಾವು ತಿಳಿದಂತೆ ಟೆಲಿಪೋರ್ಟ್ ಮಾಡುವ ಸಂದರ್ಭದಲ್ಲಿ ಏನನ್ನಾದರೂ ಕೋಡಿಂಗ್ ಮಾಡಬೇಕಾಗುತ್ತದೆ. ಹಾಗೆಯೇ ಮತ್ತೊಂದು ಕಡೆ ಆ ವಸ್ತು ಡೀಕೋಡಿಂಗ್ ಕೂಡಾ ಆಗಬೇಕಾಗುತ್ತದೆ. ಈ ವಿಷಯ ಕ್ವಾಂಟಂ ಫಿಸಿಕ್ಸ್‌ಗೆ ಸಂಬಂಧಿಸಿದೆ. ಕೋಡಿಂಗ್ ಮಾಡಲ್ಪಟ್ಟಾಗ ವಸ್ತು ಅದೃಶ್ಯವಾಗುತ್ತದೆ. ಡೀಕೋಡಿಂಗ್ ಆದಾಗ ಮರಳಿ ವಸ್ತುವಾಗುತ್ತದೆ. ಪ್ರಾರ್ಥನೆ ಅಥವಾ ಧ್ಯಾನದಲ್ಲಿ ಕೋಡಿಂಗ್ - ಡೀಕೋಡಿಂಗ್ ವಿಧಾನ ಅನುಸರಿಸಲ್ಪಡುತ್ತದೆ ಎಂಬುದು ನನ್ನ ಅನುಭವ-ಅನುಭಾವಗಳಿಂದ ಕಂಡುಕೊಂಡ ಅದ್ಭ...

ಕೊಳಲ ದನಿ

Image
ಶ್ರೀಕೃಷ್ಣನ ಮುಕುಟದಲ್ಲಿ ಎಷ್ಟೊಂದು ನವಿಲುಗರಿಗಳು! ಶ್ರೀಹರಿಗೆ ಹಾರವಾದವು ಅದೆಷ್ಟೋ ಮಣಿಗಳು! ನಾರಾಯಣನ ನಂಬಿ ಎನಿತೋ ನರರು ವೀರ ಅರ್ಜುನರಾದರು ವಾಮನ ಬೆಳೆದು ವಿಶ್ವರೂಪವ ತೋರಿ ತ್ರಿವಿಕ್ರಮನಾದನು ನಂದಕುಮಾರನ ವೃಂದಾವನದಲ್ಲಿ ಅರಳಿದವು ನೂರಾರು ಹೂವುಗಳು ಶ್ರೀರಂಗನಿಗೆ ಕೈಮುಗಿದು ನಲಿದರು ಹದಿನಾರು ಸಾವಿರ ಗೋಪಿಕೆಯರು ಕೃಷ್ಣನ ಕೊಳಲ ದನಿ ಕೇಳಿ ಬಂದವು ಗೋಕುಲಕೆ ಹಿಂಡು ಹಿಂಡು ಗೋವುಗಳು. ✍️ ಶಿವಕುಮಾರ ಸಾಯ