Posts

ವಿಮರ್ಶೆ 🖼️ ವಿದ್ಯಾರ್ಥಿನಿ ಪಂಚಮಿಕುಮಾರಿ ವಿರಚಿತ 'ಆರಾಧನೆ'

Image
ಕುl ಪಂಚಮಿಕುಮಾರಿ ಬಾಕಿಲಪದವು ನಮ್ಮ ಜನತಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಹುಮುಖ ಪ್ರತಿಭೆಯ ವಿದ್ಯಾರ್ಥಿನಿ. ಈಕೆ ಪ್ರಕಟಿಸುತ್ತಿರುವ ತನ್ನ ಚೊಚ್ಚಲ ಕೃತಿ 'ಆರಾಧನೆ' ಎಂಬ ಕವನ ಸಂಕಲನಕ್ಕೆ ಎರಡು ಮಾತುಗಳ ಮುನ್ನುಡಿಯನ್ನು ಬರೆದುಕೊಡಲು ಅತ್ಯಂತ ಹೆಮ್ಮೆಪಡುತ್ತೇನೆ.  ಕವಿಮನಸ್ಸು ಹೆಚ್ಚು ಸೂಕ್ಷ್ಮಗ್ರಾಹಿಯಾದುದು. ಸುತ್ತಲ ಜಗತ್ತನ್ನು ಬೆರಗಿನಿಂದ ನೋಡುತ್ತಾ, ತನ್ಮಯತೆಯಿಂದ ಅನುಭವಿಸುತ್ತಾ, ಕುತೂಹಲ ತಳೆಯುತ್ತಾ, ಪ್ರತಿಕ್ರಿಯಿಸುತ್ತಾ ಹೋದಂತೆ ಪ್ರಕೃತಿಯ ಮೂಲದ್ರವ್ಯದಿಂದಲೇ ಕೃತಿಯೊಂದು ರಚನೆಯಾಗುತ್ತದೆ. ಅದರಂತೆ ಇಲ್ಲಿ ಪಂಚಮಿಕುಮಾರಿ ತನ್ನ ಸೊಗಸಾದ ಕವನ ಸಂಕಲನವನ್ನು ಬರೆದು ಓದುಗರಿಗೆ ನೀಡಿದ್ದಾಳೆ.  ಭಾವದ ಉತ್ಕಟ ಸ್ಥಿತಿಯಲ್ಲಿ ಕವಿತೆ ಸೃಷ್ಟಿಯಾಗುತ್ತದೆ. ಜಾತ ಸ್ವರೂಪದ ಪ್ರತಿಭೆ ಮತ್ತು ವ್ಯುತ್ಪತ್ತಿಯ ಬಲದಿಂದ ಕವಿತ್ವ ಸಿದ್ಧಿಸುತ್ತದೆ. ತನ್ನ ಹೈಸ್ಕೂಲು ವಿದ್ಯಾಭ್ಯಾಸದ ಆರಂಭದಿಂದಲೇ ಕುl ಪಂಚಮಿ ಓದು ಮತ್ತು ಬರವಣಿಗೆ ಎರಡರಲ್ಲೂ ಮುಂದಿದ್ದು, ಓದಲು ಕೊಟ್ಟ ಪುಸ್ತಕಗಳನ್ನು ಲಗುಬಗೆಯಿಂದ ಜ್ಞಾನಪಿಪಾಸುವಿನಂತೆ ಓದಿ ಮುಗಿಸುತ್ತಿದ್ದಳು. ಶೈಲೀಕರಣದ ಸಮಸ್ಯೆ ಕಾಡದಂತೆ ಲಾಗಾಯ್ತಿನಿಂದಲೂ ಛಂದಸ್ಸು, ವ್ಯಾಕರಣ ಮತ್ತು ಭಾಷೆಯ ಹಿಡಿತವನ್ನು ಸಂಪಾದಿಸಿದ್ದರಿಂದ ಆಕೆಯ ಬರವಣಿಗೆಯ ಪದ್ಧತಿ ಬಲಿಷ್ಠಗೊಳ್ಳುತ್ತಿರುವುದನ್ನು ಗಮನಿಸಬೇಕಾಗಿದೆ.  ಸಂಕಲನದ ಶೀರ್ಷಿಕೆಯಾಗಿರುವ 'ಆರಾಧನೆ' ಪುಸ್ತಕದ ಮೊದಲನೇ ಕವಿ...

ಅಡ್ಯನಡ್ಕಕ್ಕೆ 4ಜಿ ನೆಟ್‌ವರ್ಕ್: ನಾವು ಮಾಡಿದ್ದೇನು?

Image
ಅಡ್ಯನಡ್ಕದಲ್ಲಿ ಇನ್ನೇನು ಜಿಯೋ 4ಜಿ ನೆಟ್‌ವರ್ಕ್ ದೊರೆಯುವ ದಿನಗಳು ಹತ್ತಿರವಾಗಿವೆ. ಆದರೆ ಎರಡು ವರ್ಷಗಳಿಂದ ಕನೆಕ್ಟಿವಿಟಿ ಸಮಸ್ಯೆ ಎದುರಿಸುತ್ತಿರುವ ಈ ಪ್ರದೇಶದಲ್ಲಿ ಮೊತ್ತಮೊದಲು 4ಜಿ ದೊರೆಯುವಂತಾದದ್ದು ವಿಶೇಷ. ಜಿಯೋ ಕಾಲಿಟ್ಟ ಸಂದರ್ಭವದು. 2017ರ ಆರಂಭದಲ್ಲಿ ಹಳೆಯ ನೋಕಿಯಾ X200ನಲ್ಲಿ ಬಿಎಸ್ಎನ್ಎಲ್ ಸಿಮ್ ಇಟ್ಟುಕೊಂಡು ಕಷ್ಟಪಡುತ್ತಿದ್ದೆ. ಆದರೆ ಅದರಲ್ಲೇ ಫೇಸ್‌ಬುಕ್ ಮತ್ತು ವಾಟ್ಸಪ್ 2ಜಿ ಬಿಎಸ್ಎನ್ಎಲ್ ನೆಟ್‌ವರ್ಕ್‌ನಲ್ಲಿ ಬಳಸುತ್ತಿದ್ದೆ. ಇನ್ನೇನು ಕೆಲ ಹಳೆಯ ಮೊಬೈಲ್ ಮೂಲಕ ವಾಟ್ಸಪ್ ಬಳಸಲು ಸಾಧ್ಯವಿಲ್ಲ ಎಂದು ಸೂಚನೆ ಸಿಕ್ಕಿದಾಗ ಅನಿವಾರ್ಯವಾಗಿ ಹೊಸ ಮೊಬೈಲ್ ಖರೀದಿಸಬೇಕಾಗಿ ಬಂತು. ಆಗ ನಾನು ರೆಡ್ಮಿ 4ಜಿ ಮೊಬೈಲ್ ಖರೀದಿಸಿದೆ. ಅಲ್ಲದೆ ಮನೆಯಲ್ಲಿ ಜಿಯೋ ನೆಟ್‌ವರ್ಕ್ ಚೆನ್ನಾಗಿ ಸಿಗುತ್ತಿದ್ದ ಕಾರಣ ನನ್ನ ನಂಬರನ್ನು ಬಿಎಸ್ಎನ್ಎಲ್‌ನಿಂದ ಜಿಯೋಗೆ ಪೋರ್ಟ್ ಮಾಡಿಕೊಂಡೆ. ಆದರೆ ದುರದೃಷ್ಟವಶಾತ್ ಅಡ್ಯನಡ್ಕದಲ್ಲಿ ಜಿಯೋ ನೆಟ್‌ವರ್ಕ್ ಇರಲಿಲ್ಲವಾದ್ದರಿಂದ ಬೇರೊಂದು ಬಿಎಸ್ಎನ್ಎಲ್ ಸಿಮ್ ಅನಿವಾರ್ಯವಾಗಿ ಇಟ್ಟುಕೊಂಡು ಕಾಲಕಳೆಯತೊಡಗಿದ್ದೆ. ಅಡ್ಯನಡ್ಕಕ್ಕೆ ಜಿಯೋ ಸಿಗ್ನಲ್ ಸಿಗುವಂತಾಗಬೇಕೆಂದು ಹಟ ಹೂಡಿ ಕಸ್ಟಮರ್ ಕೇರ್ ಅಧಿಕಾರಿಗಳಿಗೆ ರಿಕ್ವೆಸ್ಟ್‌ಗಳನ್ನು ಮಾಡತೊಡಗಿದೆವು. ಗೆಳೆಯರಾದ ನಿರಂಜನ ಮಳಿ, ಶಿವ ಮತ್ತು ಇತರರು ನನ್ನೊಡನೆ ಸೇರಿಕೊಂಡರು. ಕರ್ನಾಟಕದ ನೆಟ್‌ವರ್ಕ್ ಮುಖ್ಯಸ್ಥರಾಗಿದ್ದ ಜಿಜಿ ವರ್ಗೀಸ್ ಅವರಿಗೆ ಮೈಲ್ ...

ರಾಜ್ಯೋತ್ಸವ ಎಂಬ ಸಮಯ-ಸಂದರ್ಭ: ಒಂದು ಕುಶಲೋಪರಿ

Image
"ಸಾಧುಂಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಬಾಧಿಪ್ಪ ಕಲಿಗೆ ಕಲಿ/ಯುಗ ವಿಪರೀತನ್ ಮಾಧವನೀತನ್ ಪೆರನಲ್ಲ" ಈ ನವೆಂಬರ್ ತಿಂಗಳಲ್ಲಿ ಎಲ್ಲರೂ ಮೈಕೊಡವಿ ಒಮ್ಮೆ ಕನ್ನಡ ಮಾತಾಡತೊಡಗುತ್ತಾರೆ. ಸಮ್ಮೇಳನಗಳು ಆರಂಭವಾಗುತ್ತವೆ. ಪ್ರಚಾರದ ಭರಾಟೆ ಜೋರಾಗುತ್ತದೆ. ನಿನ್ನೆಯ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ನನ್ನ ಕನ್ನಡ ಗುರುಗಳಲ್ಲೊಬ್ಬರಾದ ಡಾ. ಎಚ್. ಜಿ. ಶ್ರೀಧರ ಅವರನ್ನು ಕಾರ್ಯಕ್ಷೇತ್ರ ಅಡ್ಯನಡ್ಕಕ್ಕೆ ಕರೆದಿದ್ದೆ. ಅವರು ನನಗೆ ಪದವಿ ಐಚ್ಛಿಕದಲ್ಲಷ್ಟೇ ಅಲ್ಲದೆ ನಾನು ಪದವಿಪೂರ್ವ ತರಗತಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದಾಗಲೂ ಕನ್ನಡ ಪಾಠ ಹೇಳುತ್ತಿದ್ದವರು. ಅಷ್ಟೇ ಅಲ್ಲದೆ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ನನ್ನ ಸಾಹಿತ್ಯ ಮನಸ್ಸನ್ನು ಸಲಹುವ ಕೆಲಸ ಮಾಡಿದ ಒಬ್ಬ ಸಾಚಾ ಮನುಷ್ಯ. ಅನೇಕ ಕಾರ್ಯಕ್ರಮಗಳಲ್ಲಿ ವೇದಿಕೆ ಕೂಡ ಕೊಡಿಸಿದವರು. ಮಾನ್ಯ ಶ್ರೀಧರ್ ಸರ್ ಅವರ ಬಗ್ಗೆ ಅಭಿಮಾನವಿರುವುದಕ್ಕೆ ಹಲವಾರು ಕಾರಣಗಳಿರಬಹುದು. ಪದವಿಯಲ್ಲಿ ಕನ್ನಡ ಐಚ್ಛಿಕಕ್ಕೆ ನಾನು ಸೀಟು ಬಯಸಿದ್ದ ಸಂದರ್ಭ.  ಆ ದಿನ ನಾನು  'ವಿಜ್ಞಾನ ವಿದ್ಯಾರ್ಥಿ' ಎಂಬ ಕಾರಣಕ್ಕೆ ಸೀಟು ನಿರಾಕರಿಸಲ್ಪಟ್ಟಿತ್ತು. ಇಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ಪೀಟರ್ ವಿಲ್ಸನ್ ಅವರಂತೂ ಕಿರಿಕಿರಿಯೆನಿಸಿ "ಸೀಟು ಕೊಡಲು ಸಾಧ್ಯವೇ ಇಲ್ಲ. ಏನು ಇನ್ಫ್ಲುಯೆನ್ಸ್ ಮಾಡುತ್ತೀಯ ನೀನು"ಎಂದು ಹೇಳಿ ವಾಪಸ್ ಕಳಿಸಿದ್ದರು. ಶ್ರೀ...

ಹರುಷದಿ ಬಾಳೋಣ

Image
ಹರುಷದಿ ಬಾಳೋಣ/ ಜೀವನ ಆಗಲಿ ಸುಖಪಯಣ// ಸಾರ್ಥಕಗೊಳಿಸೋಣ/ ಬದುಕಲಿ ಸ್ಫೂರ್ತಿಯ ಹರಿಸೋಣ// ತೋರಣ ಕಟ್ಟೋಣ/ ಗೆಲುವಿನ ಕಾರಣ ತಿಳಿಸೋಣ// ಅರ್ತಿಯ ಹಂಚೋಣ/ ಛಲದಲಿ ಕೀರ್ತಿಯ ಮೆರೆಸೋಣ// ಬಾಲ್ಯದ ಆಟೋಟ/ ಗೆಳೆಯರ ಪ್ರ...

ಅಭಿಜಿತ್ ನಕ್ಷತ್ರ! ಬ್ಲಾಗಿಗೇಕೆ ಆ ಹೆಸರು?

Image
ನಮಸ್ಕಾರ. ಅನೇಕರು ನಾನು 'ಅಭಿಜಿತ್' ಎಂಬ ಹೆಸರನ್ನು ಬಳಸುತ್ತಿರುವುದರ ಬಗ್ಗೆ ಕೇಳಿದ್ದಾರೆ. ಇಲ್ಲಿ ನನ್ನ ಬ್ಲಾಗಿಗೆ ಕೂಡ ಅದೇ ಹೆಸರು ಕೊಟ್ಟಿರುವುದು ನೋಡಿ ಕೆಲವರಿಗೆ ಆಶ್ಚರ್ಯವಾಗಿರಬಹುದು. 'ಅಭಿಜಿತ್' ಎಂಬುದು ಮನೆಯಲ್ಲಿ ನನ್ನನ್ನು ಮುದ್ದಿನಿಂದ ಕರೆಯಲು ಇಟ್ಟಿದ್ದ ಹೆಸರಲ್ಲ. ಅವರು ಕರೆಯುವ ಹೆಸರು 'ಭವೇಶ' ಎಂದು. ಅಫಿಶಿಯಲ್ ಆಗಿ ಶಿವಕುಮಾರ್ ಎಂಬ ಹೆಸರು ಬಳಕೆಯಾಗುತ್ತದೆ. ಆದರೆ ಈ 'ಅಭಿಜಿತ್' ಎಂಬ ಹೆಸರನ್ನು ಖಾಸಾ ಎಂಬಂತೆ ಬಳಸುತ್ತಿರುವುದೇಕೆ ಎಂಬುದರ ಕಾರಣದ ಬಗ್ಗೆ ಇಲ್ಲಿ ಖಾಸಗಿಯಾಗಿ ಬರೆಯುತ್ತಿದ್ದೇನೆ. 2016ರ ಆರಂಭದ ವರೆಗೂ ಅಭಿಜಿತ್ ನಕ್ಷತ್ರ ಎಂಬ ಪದವೇ ನನ್ನ ಗಮನಕ್ಕೆ ಬಂದಿರಲಿಲ್ಲ. ಹುಟ್ಟಿದ ದಿನಾಂಕ 11 ನವೆಂಬರ್ 1983 ಅದು ಉತ್ತರಾಷಾಢ 4ನೇ ಪಾದ ಮಕರ ರಾಶಿ ಎಂದು ಬರೆಯಲಾಗಿತ್ತು. 2014ರ ವರ್ಷಾಂತ್ಯದಲ್ಲಿ ನಾನು ತುಂಬಾ ನಿಗೂಢವೆಂದೂ, ನನ್ನನ್ನು ನಾನು ತಿಳಿದುಕೊಂಡಿಲ್ಲವೆಂದೂ, ನನ್ನಲ್ಲಿ ಎರಡು ಹೆಸರಿನಂತೆ ಎರಡು ವ್ಯಕ್ತಿಗಳಿರುವರೆಂದೂ, ಇನ್ನೂ ಏನಕೇನ ಪ್ರಕಾರೇಣ ತಲೆ ಹಾಳು ಮಾಡಿ ಕುಗ್ಗಿಸಲೆತ್ನಿಸಿದ್ದ ಶೂನ್ಯಬುದ್ಧಿಯವರೊಬ್ಬರ ಸ್ವಾರ್ಥದ ನಡತೆ ನನ್ನನ್ನು ಒಮ್ಮೆ ಉತ್ತರವೇ ಇಲ್ಲದೆ ಓಡಿಹೋಗುವ ಪರಿಸ್ಥಿತಿಗೆ ತಂದಿತ್ತು. ಆದರೆ "I survived because the fire inside me burned brighter than the fire around me" ಎಂಬಂತೆ ಭುಗಿಲೇಳುವ ತನಕ ನಾನು ಏನ...

ಸ್ನೇಹದ ಪ್ರಪತ್ರ

Image
ಸ್ನೇಹದ ಪ್ರಪತ್ರ ಸ್ನೇಹದ ಬೆಂಬಲಕ್ಕೆ ಸಾವಿರ ನಮನವಿದೆ; ಸಂತಸದ ಕಣ್ಣೀರಲ್ಲಿ ಹೃದಯದ ಪ್ರೇಮವಿದೆ. ಕಾಯುವವರಿವರು, ಕನಿಕರಿಸುವವರು, ಮೈದಡವಿ ಸವಿಯ ನೀಡುವವರು, ಜೀವಪರ ನಿಂತ ಸಂಕಲ್ಪ ಸಂಭೂತ ದೇವದೇವತೆಗಳು. ನಿಮ್ಮ ಕೈಗೆ ಕೈ ನೀಡಿ ಚಪ್ಪಾಳೆ ಹೊಡೆಯುತ್ತೇನೆ ಮುಖಕ್ಕೆ ಮುಖ ಕೊಟ್ಟು ಮಾತಾಡುತ್ತೇನೆ ಅನುಭವ-ಅನಿಸಿಕೆ ಹೇಳಿಬಿಡುತ್ತೇನೆ ಪ್ರಾಮಾಣಿಕ ಪ್ರೀತಿ ಪರಿಶುದ್ಧತೆಯ ಪ್ರತೀಕವೆನ್ನುತ್ತಾ ನೀವುಗಳನ್ನು ಸೇವಿಸಿ ಉಸಿರಾಡುತ್ತೇನೆ. ನಿಜದ ಸ್ನೇಹಿತರೆ, ನಿಮ್ಮವರದೊಂದು ಪಟ್ಟಿ ಸಿದ್ಧಪಡಿಸಿ, ಆಗಾಗ ಬಿಡುಗಡೆಗೊಳಿಸಿ, ಸಂಭ್ರಮಿಸಿ, ಸಂಪೂರ್ಣ ಬೆಂಬಲಿಸಿ, ಹಂಬಲಿಸಿ ಕರೆಯುತ್ತೇನೆ. ಸ್ನೇಹವೆಂಬುದು ತಂಪು, ಸ್ನೇಹವೆಂಬುದು ಆತ್ಮೀಯ, ಸ್ನೇಹವೆಂಬುದು ಸ್ವಕೀಯ; ಈ ಜಗವನ್ನು ಸ್ನೇಹಕ್ಕೆ ಸಿದ್ಧಪಡಿಸಿ ನಿಮ್ಮನ್ನು ನಾನೇ ಆಯ್ದುಕೊಂಡಿದ್ದೇನೆ ಸ್ನೇಹಕ್ಕಾಗಿ, ಸಂತೋಷಕ್ಕಾಗಿ, ಸ್ನೇಹದ ರಾಜಗಿರಿಗಾಗಿ. ✍️ಶಿವಕುಮಾರ ಸಾಯ 'ಅಭಿಜಿತ್'

ದಿನಕರ ಇಂದಾಜೆ ಅವರ 'ಗರುಡಾವತಾರ'

Image
ಹೊಸದಿಗಂತ ನಿರ್ವಾಹಕ ಸಂಪಾದಕ ಶ್ರೀಯುತ ದಿನಕರ ಇಂದಾಜೆ ಒಂದು ಸಂದರ್ಭದಲ್ಲಿ ನನ್ನನ್ನು ಪತ್ರಿಕೆಯ ಉಪಸಂಪಾದಕನನ್ನಾಗಿಸಿ ಮುನ್ನಡೆಸಿದವರು. ಸಾಹಿತಿಯಾಗಿ, ಕಾದಂಬರಿಕಾರರಾಗಿಯ ೂ ಮುಂಚೂಣಿಯಲ್ಲಿದ...