Posts

ಪ್ರಶಸ್ತಿ

Image
ಜರುಗಿತು ಗಣ್ಯರಿಗೆ ಪ್ರಶಸ್ತಿ ಪ್ರದಾನ; ಅದರಲ್ಲೂ ಕೆಲವರಿಗೆ ಪ್ರಶಸ್ತಿಗಳೇ ಪ್ರಧಾನ! ✍️ ಶಿವಕುಮಾರ ಸಾಯ 'ಅಭಿಜಿತ್'

ಅಂತರ

Image
ಅಪಾತ್ರರಿಗೂ ಸತ್ಪಾತ್ರರಿಗೂ ಏನು ಅಂತರವೆಂದು ಯೋಚಿಸುತ್ತಿದ್ದೆ... ಅಪಾತ್ರರು ಹಾಗೆಯೇ; ಉಪಕಾರಿಯಂತೆ ನಟಿಸುತ್ತಾರೆ ಅಪಕಾರವನ್ನೇ ಎಸಗುತ್ತಾರೆ. ಕದ್ದು ಕದ್ದು ನೋಡುತ್ತಾರೆ; ಗುಣದಲ್ಲಿ ಮತ್ಸರ ಮಾಡುತ್ತಾರೆ!  ಹೋದಲ್ಲಿ ಬಂದಲ್ಲಿ ಖಂಡನೆ; ಭಟ್ಟಂಗಿಯಂತೆ ಮಂಡನೆ! ಆದರೆ...  ಸತ್ಪಾತ್ರರು ಮಾತ್ರ ಹಾಗಲ್ಲ; ನಿಮ್ಮ ಜೊತೆ ಇರುತ್ತಾರೆ ಭಾರವನ್ನು ಹೊರುತ್ತಾರೆ ಗಂಭೀರತೆಗಳನ್ನು ನಿಜಕ್ಕೂ  ಅರ್ಥೈಸಿಕೊಳ್ಳುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರೀತಿಸುತ್ತಾರೆ ಗೌರವಿಸುತ್ತಾರೆ... ಸತ್ಪಾತ್ರರು ಬದುಕಿಗೆ ಯಾವತ್ತೂ ಸಿಹಿ ಮತ್ತು ಸವಿ ನೀಡುತ್ತಾರೆ ನಿಮ್ಮ ದೌರ್ಬಲ್ಯ ಮತ್ತು ಪ್ರಾಬಲ್ಯ ಎರಡನ್ನೂ ಸ್ವಂತಿಕೆಯ ಭಾಗವಾಗಿ ಒಪ್ಪಿ ಅಪ್ಪಿಕೊಳ್ಳುತ್ತಾರೆ. ಅವರ ಸ್ನೇಹದಲ್ಲೊಂದು ಮಾಧುರ್ಯವಿರುತ್ತದೆ ಮಾರ್ದವತೆಯಿರುತ್ತದೆ...  ನೈಜ ಸ್ನೇಹಕ್ಕೆ ಎಣೆಯಿಲ್ಲ ಕಪಟ ಸ್ನೇಹಕ್ಕೆ ಮಣೆಯಿಲ್ಲ. ✍️ ಶಿವಕುಮಾರ ಸಾಯ 'ಅಭಿಜಿತ್'

ಆನ್‌ಲೈನ್ ಮದುವೆ!

Image
ಆನ್‌ಲೈನ್ ಮದುವೆಗಳು ಆನ್‌ಲೈನ್‌ನಲ್ಲೇ ಸಂಸಾರ ಆನ್‌ಲೈನ್‌ನಲ್ಲಿ ವ್ಯವಹಾರ ಆನ್‌ಲೈನ್‌ನಲ್ಲೇ ಮಕ್ಕಳು?! ಆನ್‌ಲೈನ್‌ನಲ್ಲೇ ಕುದುರುತ್ತದೆ ವ್ಯಾಪಾರ ಸಾಗಾಟ, ಸಂಚಾರ ಬಿಟ್ಟು ನಡೆಯುತ್ತದೆ ಈಗ ಸುಖ-ಸಂತೋಷದ ರಫ್ತು ಕೈಗಾರಿಕೆ, ಕಲೆಗಾರಿಕೆ ಎಲ್ಲ ಆನ್‌ಲೈನ್‌ನಲ್ಲಿ ಏನಿದು ಮೋಡಿ ಆದರಂತೆ ಅವರಿಬ್ಬರು ಜೋಡಿ ಹೇಗೋ ಏನೋ ಒಬ್ಬರನೊಬ್ಬರು ಮೆಚ್ಚಿ ಒಡನಾಡಿ ಆನ್‌ಲೈನ್‌ನಲ್ಲೇ ಒಟ್ಟು ಕೂಡಿ ಮೂಡುತ್ತಿವೆ ಹೊಸ ವಿಚಾರಗಳು ಹೊಸ ಚಿಂತನೆಗಳು ಹೊಸ ಬಯಕೆ ಹಾಗೂ ಹೊಸ ದಿಶೆಗಳು ಬದುಕು ಎಷ್ಟು ವಿಶಾಲವಾಗಿದೆ ಜಗತ್ತು ಎಷ್ಟು ವಿಸ್ತಾರವಾಗಿದೆ ಜ್ಞಾನೋದಯವಾಗುತ್ತಿದೆ ಹಸಿ ಹಸಿ ತಿನ್ನಬಾರದಂತೆ ಬೇಯಿಸಿ ತಿನ್ನೋಣ ಎಲ್ಲವನ್ನೂ; ಕೊರೋನಾ ಬಂದ ಮೇಲೆ ಏನೋ ಶುರುವಾಗಿದೆ ಎದೆಯಲ್ಲೀಗ ಢವಢವ ಎನ್ನುತ್ತಿದೆ. ✍️ ಶಿವಕುಮಾರ ಸಾಯ

ಶಾಂತಿಯುದ್ಧದ ಮತ್ತೊಂದು ಪರಿ... ಸಂತೋಷಕ್ಕಾಗಿ...

Image
ಅಧ್ಯಾತ್ಮ ಮತ್ತು ವಿಜ್ಞಾನಕ್ಕೆ ಹತ್ತಿರದ ನಂಟು ಇದೆ. Strong nuclear force, Weak nuclear force, Electromagnetic force, Gravitational force - ಅಧ್ಯಾತ್ಮದಲ್ಲಿ ಒಮ್ಮೆ ಒಂದು ಕಲ್ಪನೆಯಾಗಿದ್ದದ್ದು ವಿಜ್ಞಾನದಲ್ಲಿ ಮತ್ತೊಂದು ಕಾಲದಲ್ಲಿ ಸಾಧಿಸಲ್ಪಟ್ಟಿದೆ. ಆಧ್ಯಾತ್ಮಿಕವಾಗಿ ಎಲ್ಲದರ ಕಾರ್ಯ, ಕಾರಣ ಸಂಕಲ್ಪ. ಸಂಕಲ್ಪಕ್ಕೆ ಮಿಗಿಲಾದುದು ಯಾವುದೂ ಇಲ್ಲ. ಒಂದು ಬಲಿಷ್ಠವಾದ ಸಂಕಲ್ಪದಿಂದಲೇ ಎಲ್ಲವೂ ನಡೆಯುತ್ತಿದೆ. ಪ್ರಾಯಶಃ ಅದಕ್ಕಾಗಿಯೇ "Spiritual is stronger than any material force, that thoughts rule the world" ಎಂದು ಎಮರ್ಸನ್ ಹೇಳಿದ್ದಾನೆ. ಭಾರತೀಯ ತತ್ತ್ವಶಾಸ್ತ್ರದಲ್ಲೂ ಎಲ್ಲೆಂದರಲ್ಲಿ ಅಂತಹ ಶಕ್ತಿಯ ಬಗ್ಗೆ ಬಣ್ಣನೆಯಾಗಿದೆ. "ಅಹಂ ಬ್ರಹ್ಮಾಸ್ಮಿ" ಎಂಬ ಆದಿ ಶಂಕರಾಚಾರ್ಯರ ಸಿದ್ಧಾಂತವಿರಬಹುದು, "Iam everywhere" ಎಂದೇ ಅಂತಿಮವಾಗಿ ಹೇಳುವ ವಿಜ್ಞಾನದ ಅತ್ಯಂತ ದೊಡ್ಡ ಸಿದ್ಧಾಂತಗಳಾದ "ಜಗತ್ತಿನ ಮಾಯಾಜಾಲ", "ಸರ್ವತತ್ತ್ವ", "ಆಯಾಮಗಳು", "ಬಿಗ್ ಬ್ಯಾಂಗ್" ಮುಂತಾದ ಒಂದಷ್ಟು ಥಿಯರಿಗಳು ಹೊರಗೆಡಹಿದ ಅಂತರಾರ್ಥವಿರಬಹುದು - ಯಾರಿಗಾದರೂ ಈ ಅದ್ಭುತ ಶಕ್ತಿಯ ಬಗ್ಗೆ ಅಚ್ಚರಿ ಮತ್ತು ಕುತೂಹಲ ಮೂಡುತ್ತದೆ. ನಾವು ಯಾವುದೇ ಕಷ್ಟಗಳಿಂದ ಪಾರಾಗಲಿಕ್ಕಾಗಲೀ, ಸರಳರೇಖೆಯಂತೆ ಸಂತೋಷದ ದಿನಗಳೊಂದಿಗೆ ಬಾಳಲಿಕ್ಕಾ...

Shivakumar Saya - About me here.....

Image
[] Poet, writer, teacher & astrologer [] Qualified M.A., B.Ed., UGC - NET, JRF [] Former sub-editor/journalist at Print media [] Havyaka Brahmins [] Single ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಸಾಯ ಎಂಬ ಊರಿನವರಾದ ಶ್ರೀ ಶಿವಕುಮಾರ್ ಸಾಯ ಕವಿ, ಸಾಹಿತಿ, ಅಧ್ಯಾಪಕರು. ಕನ್ನಡ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಬಿ. ಎಡ್. ಹಾಗೂ ವಿಶ್ವವಿದ್ಯಾಲಯ ಧನಸಹಾಯ ಆಯೋಗ, ನವದೆಹಲಿ ಇವರು ನಡೆಸುವ 'ಉಪನ್ಯಾಸಕರ ರಾಷ್ಟ್ರೀಯ ಅರ್ಹತಾ ಪರೀಕ್ಷೆ'ಯಲ್ಲಿ ಒಂದೇ ಪ್ರಯತ್ನದಲ್ಲಿ ಜೆಆರ್‌ಎಫ್ ರ್‍ಯಾಂಕ್‌ನೊಂದಿಗೆ ಉತ್ತೀರ್ಣರಾಗಿದ್ದಾರೆ. ಇವರ ನೂರಾರು ಕವಿತೆಗಳು ಹಾಗೂ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳು, ವಿಶೇಷ ಸಂಚಿಕೆಗಳು, ಸಂಪಾದನೆಗಳಲ್ಲಿ ಪ್ರಕಟವಾಗಿವೆ. ಆಕಾಶವಾಣಿ ಮತ್ತಿತರ ಮಾಧ್ಯಮಗಳಲ್ಲಿ ಬಿತ್ತರವಾಗಿವೆ. ಹಲವು ಸಾಹಿತ್ಯ ಸಮ್ಮೇಳನಗಳಲ್ಲಿ, ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಹಲವಾರು ಬಹುಮಾನಗಳನ್ನು, ಪುರಸ್ಕಾರಗಳನ್ನು ಪಡೆದಿದ್ದಾರೆ. 'ತೆರೆದ ಅಧ್ಯಾಯ' ಎಂಬ ಒಂದು ಡಿಜಿಟಲ್ ಕವನ ಸಂಕಲನ ಮತ್ತು 'ನಗುವ ಹೂ' ಎಂಬ ಒಂದು ಮಕ್ಕಳ ಕವನ ಸಂಕಲನ ಪ್ರಕಟವಾಗಿದೆ. 'ಅಮೃತವಾಹಿನಿ' ಎಂಬ ಸಂಘಟನೆಯ ಅಧ್ಯಕ್ಷರಾಗಿ ಪ್ರತಿಭಾವಂತ ಯುವಜನರನ್ನು ಒಗ್ಗೂಡಿಸುವಲ್ಲಿ ಸಕ್ರಿಯವಾಗಿ ಶ್ರಮಿಸುತ್ತಿದ್ದಾರೆ. ಅಲ್ಲದೆ, ವೇದಾಂಗ ಜ್ಯೋತಿಷ್ಯ ಕೇಂದ್ರವನ್ನು ಸ್ಥಾಪಿಸಿ ಆ...

About something one couldn't explain

Image
Here I write about some great things experienced by me and some theories that helped me also. Also I explain about some interesting topics I studied merely for my knowledge and it also connected with my personal experience and also with my intuition. I was decided to write something in English also because I know though Iam a kannada writer Kannada is a regional language but What Iam thinking, what I feel and my thoughts and theories are all universal in nature. So purposefully to reach maximum number of people in the world, at the same time English blogging is also an essentiality. If you are a person searching about miseries, about sixth sense, time travel, space study, matter, quantum, dimensions, life force, science, spirituality, meditation, yoga - what I express here are by my intuitions and experiences so that one could read by 200% is the case. Iam not a person of defeat but rather a man of success. Success is defined in our own terms is the another thing. My specia...

ಕನ್ನಡದಲ್ಲಿ ಮಕ್ಕಳ ಸಾಹಿತ್ಯ

Image
ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯವು ಒಂದು ಪ್ರತ್ಯೇಕ ವಿಭಾಗವಾಗಿ ಬೆಳೆದಿದೆ. 'ಮಕ್ಕಳ ಸಾಹಿತ್ಯ' ಎಂದರೆ ಮಕ್ಕಳ ಮನಸ್ಸನ್ನು ಅರಳಿಸಿ, ಕುತೂಹಲವನ್ನು ಕೆರಳಿಸಿ, ಕಲ್ಪನೆಯನ್ನು ರೂಪಿಸಿ, ಭಾವನೆಗಳನ್ನು ಪ್ರಚೋದಿಸಿ, ಆನಂದದಲ್ಲಿ ಮೀಯಿಸಿ ಅವರ ವ್ಯಕ್ತಿತ್ವವನ್ನು ರೂಪಿಸುವ ಸಾಹಿತ್ಯ ಎನ್ನಲಾಗುತ್ತದೆ. ಆಧುನಿಕ ಶಿಕ್ಷಣ ಮತ್ತು ನವೋದಯ ಸಾಹಿತ್ಯದ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯವು ವಿಶೇಷವಾಗಿ ವಿಕಸಿತವಾಗಿದೆ. ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಬೇರನ್ನು ಜಾನಪದ ಪರಂಪರೆಯಲ್ಲಿಯೇ ಕಾಣಬಹುದು. ಅಜ್ಜಿಕತೆಗಳು, ಲಾಲಿಹಾಡುಗಳು, ಪ್ರಾಸಬದ್ಧವಾದ ಪದಗಳು, ಬೆಡಗುಗಳು, ಒಗಟುಗಳು ಅಲ್ಲಿ ಕಂಡುಬರುತ್ತವೆ. ರಾಜಕುಮಾರ - ರಾಜಕುಮಾರಿಯರ ಕಥೆ, ರಮ್ಯಾದ್ಭುತ ಕಥೆಗಳು, ಕಾಗಕ್ಕ ಗುಬ್ಬಕ್ಕನ ಕಥೆ, ಪಂಚತಂತ್ರದ ಕಥೆ - ಇಂಥವು ಮಕ್ಕಳ ಮನಸ್ಸನ್ನು ಸಂತೋಷಗೊಳಿಸುತ್ತಿದ್ದವು. ಆದರೂ ಆಧುನಿಕ ಕಾಲದಲ್ಲಿ ಮುದ್ರಣ ಕಲೆ ಜಾರಿಗೆ ಬಂದ ಮೇಲೆ ಮಕ್ಕಳ ಸಾಹಿತ್ಯ ವಿಪುಲವಾಗಿ ಬೆಳೆಯಿತು. ಪತ್ರಿಕಾ ಮಾಧ್ಯಮ ಇದಕ್ಕೆ ಪ್ರಚಾರ ನೀಡಿತು. ಹೀಗಾಗಿ ಇಂದು ಮಕ್ಕಳ ಸಾಹಿತ್ಯದಲ್ಲಿ ಮಕ್ಕಳ ಕವಿತೆಗಳು, ಕಥೆಗಳು, ನಾಟಕ, ವಿಜ್ಞಾನ ಬರಹಗಳು, ವ್ಯಕ್ತಿಚಿತ್ರಗಳು ಪುಸ್ತಕಗಳಾಗಿ ಹೊರಬಂದು ಮಕ್ಕಳ ಮನೋಲೋಕವನ್ನು ಅರಳಿಸುತ್ತಿವೆ. ಕವಿ ಪಂಜೆ ಮಂಗೇಶ ರಾವ್ ಅವರನ್ನು ವಿಶೇಷವಾಗಿ 'ಶಿಶು ಸಾಹಿತ್ಯದ ಜನಕ' ಎಂದೇ ಕರೆಯಲಾಗುತ್ತದೆ. ಅವರ 'ಉದಯರಾಗ...