ಅಧ್ಯಾತ್ಮ ಮತ್ತು ವಿಜ್ಞಾನಕ್ಕೆ ಹತ್ತಿರದ ನಂಟು ಇದೆ. Strong nuclear force, Weak nuclear force, Electromagnetic force, Gravitational force - ಅಧ್ಯಾತ್ಮದಲ್ಲಿ ಒಮ್ಮೆ ಒಂದು ಕಲ್ಪನೆಯಾಗಿದ್ದದ್ದು ವಿಜ್ಞಾನದಲ್ಲಿ ಮತ್ತೊಂದು ಕಾಲದಲ್ಲಿ ಸಾಧಿಸಲ್ಪಟ್ಟಿದೆ. ಆಧ್ಯಾತ್ಮಿಕವಾಗಿ ಎಲ್ಲದರ ಕಾರ್ಯ, ಕಾರಣ ಸಂಕಲ್ಪ. ಸಂಕಲ್ಪಕ್ಕೆ ಮಿಗಿಲಾದುದು ಯಾವುದೂ ಇಲ್ಲ. ಒಂದು ಬಲಿಷ್ಠವಾದ ಸಂಕಲ್ಪದಿಂದಲೇ ಎಲ್ಲವೂ ನಡೆಯುತ್ತಿದೆ. ಪ್ರಾಯಶಃ ಅದಕ್ಕಾಗಿಯೇ "Spiritual is stronger than any material force, that thoughts rule the world" ಎಂದು ಎಮರ್ಸನ್ ಹೇಳಿದ್ದಾನೆ. ಭಾರತೀಯ ತತ್ತ್ವಶಾಸ್ತ್ರದಲ್ಲೂ ಎಲ್ಲೆಂದರಲ್ಲಿ ಅಂತಹ ಶಕ್ತಿಯ ಬಗ್ಗೆ ಬಣ್ಣನೆಯಾಗಿದೆ. "ಅಹಂ ಬ್ರಹ್ಮಾಸ್ಮಿ" ಎಂಬ ಆದಿ ಶಂಕರಾಚಾರ್ಯರ ಸಿದ್ಧಾಂತವಿರಬಹುದು, "Iam everywhere" ಎಂದೇ ಅಂತಿಮವಾಗಿ ಹೇಳುವ ವಿಜ್ಞಾನದ ಅತ್ಯಂತ ದೊಡ್ಡ ಸಿದ್ಧಾಂತಗಳಾದ "ಜಗತ್ತಿನ ಮಾಯಾಜಾಲ", "ಸರ್ವತತ್ತ್ವ", "ಆಯಾಮಗಳು", "ಬಿಗ್ ಬ್ಯಾಂಗ್" ಮುಂತಾದ ಒಂದಷ್ಟು ಥಿಯರಿಗಳು ಹೊರಗೆಡಹಿದ ಅಂತರಾರ್ಥವಿರಬಹುದು - ಯಾರಿಗಾದರೂ ಈ ಅದ್ಭುತ ಶಕ್ತಿಯ ಬಗ್ಗೆ ಅಚ್ಚರಿ ಮತ್ತು ಕುತೂಹಲ ಮೂಡುತ್ತದೆ. ನಾವು ಯಾವುದೇ ಕಷ್ಟಗಳಿಂದ ಪಾರಾಗಲಿಕ್ಕಾಗಲೀ, ಸರಳರೇಖೆಯಂತೆ ಸಂತೋಷದ ದಿನಗಳೊಂದಿಗೆ ಬಾಳಲಿಕ್ಕಾ...