Posts

ವಿಮರ್ಶೆ 🖼️ ಕವಿ ವಿ. ನರಸಿಂಹ ವರ್ಮ ವಿರಚಿತ 'ಆಕಾಶದ ಚಿತ್ರಗಳು'

Image
ವಿಟ್ಲ ರಾಜ ಮನೆತನದ ಶ್ರೀಯುತ ವಿ. ನರಸಿಂಹ ವರ್ಮ ಅವರು ಕಳೆದ ಹಲವಾರು ವರ್ಷಗಳಿಂದ ಕನ್ನಡ ಕಾವ್ಯರಚನೆಯಲ್ಲಿ ಗಂಭೀರವಾಗಿ ತೊಡಗಿಕೊಂಡಿರುವ ಸ್ವಂತಿಕೆಯ ಛಾಪುಳ್ಳ ಕವಿ. 'ಆಕಾಶದ ಚಿತ್ರಗಳು' ಇದು ಸನ್ಮಾನ್ಯ ನರಸಿಂಹ ವರ್ಮರು ಹೊರತರುತ್ತಿರುವ ಚೊಚ್ಚಲ ಕೃತಿ. ವೃತ್ತಿಯಲ್ಲಿ ಉನ್ನತ ಕಾನೂನು ಅಧಿಕಾರಿಯಾಗಿದ್ದು, ಪ್ರವೃತ್ತಿಯಲ್ಲಿ ಅಪ್ಪಟ ಕವಿತ್ವವನ್ನು ಸಾರುತ್ತಿರುವ ಇವರ ಕಾರಯಿತ್ರೀ ಪ್ರತಿಭೆ ಮೆಚ್ಚುವಂಥದ್ದು. ಶ್ರೀಯುತ ನರಸಿಂಹ ವರ್ಮರು ಸತತ ಅಧ್ಯಯನಶೀಲರು. ನನ್ನ ತಿಳಿ ವಳಿಕೆಯಂತೆ ಇವರು ಯಾವುದೇ ಚೌಕಟ್ಟು ಮತ್ತು ಪಂಥಗಳಿಗೆ ಒಳಪಟ್ಟವರಲ್ಲ. ಇವರ ಕವಿತೆಗಳನ್ನು ಓದುತ್ತಿದ್ದಂತೆ ವಿಪುಲವಾದ ಜ್ಞಾನ ಮತ್ತು ಕಾವ್ಯದ ಕಲೆಗಾರಿಕೆ ಎರಡರ ಸಮ್ಮಿಶ್ರಣದಂತೆ ಕವಿತೆಗಳು ಭಾಸವಾಗುತ್ತವೆ. ಆದರೆ ಸ್ವತಂತ್ರವಾದ ಕವಿಯ ಮನೋಧರ್ಮವು ಪರಿಪಕ್ವವಾದ ಕವಿತೆಗಳನ್ನು ಹುಟ್ಟುಹಾಕುವ ಶ್ರೇಯಸ್ಸಿಗೆ ಪಾತ್ರವಾಗಿ ಧನ್ಯವಾಗಿದೆ. ಬದುಕಿನ ಗಹನತೆಯನ್ನು, ಸೂಕ್ಷ್ಮಗಳನ್ನು ಗಮನಿಸಿ ಇವರ ಕವಿತೆ ಅನನ್ಯವಾಗಿ ಹೊಮ್ಮಿದೆ. ಸಾಲುಗಳ ವೇಗ, ಓಘ ಮತ್ತು ಶಿಸ್ತನ್ನು ಹುಲುಸಾಗಿ ಬಳಸಿದ ಅನೇಕ ಕವಿತೆಗಳು ಅಲಂಕಾರಗಳ ಚಮತ್ಕಾರದಿಂದಲೂ ಕೂಡಿವೆ. 'ಆಕಾಶದ ಚಿತ್ರಗಳು' ಈ ಕೃತಿಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಕವನಗಳಿವೆ. ಪ್ರತಿಯೊಂದು ಕವನವು ವಸ್ತು, ವಿಷಯ ಮತ್ತು ಪ್ರಸ್ತುತಿಯಲ್ಲಿ ವಿಭಿನ್ನವೂ ವಿಶಿಷ್ಟವೂ ಆಗಿರುವುದನ್ನು ಕಾಣುತ್ತೇವೆ. ಶ್ರೀಯುತರ ನೂರಾರ...

ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಪದಗ್ರಹಣ: ವಿಟ್ಲದಲ್ಲೊಂದು ಸಭ್ಯ ಸಾಹಿತ್ಯ ಸಮ್ಮಿಲನ

Image
ಮೇ 5ರಂದು ವಿಟ್ಲ ವಿಠಲ ಪ್ರೌಢಶಾಲಾ ಸಭಾಂಗಣ ದಲ್ಲಿ ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಪದಗ್ರಹಣ ಕಾರ್ಯಕ್ರಮ ಮೌಲಿಕವಾ ಗಿ ನಡೆದಿದೆ. ಸನ್ಮಾನ್ಯ ಶ್ರೀಯುತ ರಾಜಾರಾಮ ವರ್ಮ ವಿಟ್ಲ ಅವರು ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ದಿನ ಪದಗ್ರಹಣದೊಂದಿಗೆ ಚುಟುಕು ಕವಿಗೋಷ್ಠಿಯೂ ಭರ್ಜರಿಯಾಗಿ ನೆರವೇರಿದೆ. ಸಮಾರಂಭವು ಜರಗುತ್ತಿದ್ದಂತೆ ಒಂದು ಬಗೆಯ ಕಾಳಜಿ ಮತ್ತು ಒತ್ತಾಸೆ ಅಲ್ಲಿ ಸೇರಿದ ಎಲ್ಲ ಸಂಘಟಕರ ಮುಖದಲ್ಲಿ ವ್ಯಕ್ತವಾಗುತ್ತಿತ್ತು. ನನ್ನನ್ನು ಕವಿಗೋಷ್ಠಿಯ ಅಧ್ಯಕ್ಷನನ್ನಾಗಿ ಕರೆಸಿದ ನೂತನ ಅಧ್ಯಕ್ಷರ ನಿರ್ಧಾರವನ್ನು ಗೌರವಿಸಿ, ಒಪ್ಪಿಕೊಂಡು ತೆರಳಿ ಒಂದು ಭಾಷಣ ಸಿದ್ಧಪಡಿಸಿ ಓದಿದಂತೆಯೂ ಆಯಿತು. ಆ ಕಾರ್ಯಕ್ರಮದಲ್ಲಿ ಸುಮಾರು ಹದಿನೇಳು ಮಂದಿ ಕವಿ-ಕವಯಿತ್ರಿಯರು ಚುಟುಕು ಮತ್ತು ಕವಿತೆಗಳನ್ನು ವಾಚಿಸಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿ ಕವಿಗಳಿಗೂ ಅವಕಾಶ ನೀಡಲಾಗಿದೆ. ಎಲೆ ಮರೆಯ ಹೂವಿನಂತಿದ್ದ ಅನೇಕ ಪ್ರತಿಭಾವಂತ ಕವಿಗಳನ್ನು ಮತ್ತೆ ವೇದಿಕೆಗೆ ಕರೆ ತರುವ ಪ್ರಾಮಾಣಿಕ ಪ್ರಯತ್ನವನ್ನು ವರ್ಮರು ಅಲ್ಲಿ ಮಾಡಿದ್ದಾರೆ. ಇದೆಲ್ಲವನ್ನೂ ಮನಸಾರೆ ಶ್ಲಾಘಿಸಲೇ ಬೇಕಾಗಿದೆ. ಗೋಷ್ಠಿಯಲ್ಲಿ ಪಾಲ್ಗೊಂಡ ಎಲ್ಲ ಕವಿಗಳ ಚುಟುಕು-ಕವಿತೆಗಳ ಬಗೆಗೂ ನಾನು ಟಿಪ್ಪಣಿ ಮಾಡಿಕೊಂಡಿದ್ದೆ. ಅಲ್ಲಿ ನೆರೆದ ನಮ್ಮ ಸಾಹಿತ್ಯ ಮಿತ್ರರು ಕಾರ್ಯಕ್ರಮದ ಬಗ್ಗೆ ಅಂತರಾಳದಿಂದ ಮೆಚ್ಚುಗೆ ಪ್ರಕಟಿಸಿರುವುದಕ್ಕೆ ನಾವೆಲ್ಲರೂ ಕೃತಜ್ಞರು. ಹೀಗೆ ಯಾವುದೇ ಅಬ್ಬರ...

🔶🔷 ನನ್ನ ಜೀವವಿಕಾಸ 🔸🔹 ಜೀವನ ಕಥನ

Image
ಯಾವುದೇ ಹೆಚ್ಚುಗಾರಿಕೆಯಿಲ್ಲದೆ ನನ್ನ ಬದುಕಿನ ಕೆಲವಾರು ಸಂಗತಿಗಳನ್ನು ದಾಖಲಿಸುತ್ತಿರುವುದು ಅಗತ್ಯ ಎಂದು ಹಲವಾರು ಬಾರಿ ಮನಗಂಡಿದ್ದೇನೆ. ನನ್ನ ಹಲವಾರು ಅನುಭವಗಳು ಮತ್ತು ಪ್ರಯೋಗಗಳು 'ಸವಿನೆನಪುಗಳನ್ನು ಪುಷ್ಟೀಕರಿಸಬೇಕು' ಎಂಬ ತೀರ್ಪು ಪ್ರಕಟಿಸಿಬಿಟ್ಟ ಮೇಲೆ ನಾನು ರೀವೈರಿಂಗ್ ಮಾಡಿಕೊಳ್ಳಬೇಕು ಎಂಬ ಇಚ್ಛೆಯಿಂದ, ಹಾಗೆಯೇ ಪದಗಳು ಹಾಗೂ ವಸ್ತುಗಳ ಬಗೆಗೂ ಎಚ್ಚರಿಕೆಯಿಟ್ಟು ಬರೆಯುವ ವರ್ತಮಾನದ ಸಾಹಸ ನನ್ನದಾಗುತ್ತಿದೆ. ಅಮ್ಮ ಹೇಳಿದಂತೆ ನಾನು ಜನಿಸಿದ್ದು 11, ನವೆಂಬರ್ 1983ರಂದು. ಅಂದು ಶುಕ್ರವಾರವಾಗಿತ್ತಂತೆ. ನಮ್ಮದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಬೆಳೆಯೂರು ಹವ್ಯಕ ಬ್ರಾಹ್ಮಣ ಕುಟುಂಬದ ಸಂಪ್ರದಾಯಸ್ಥ ಮನೆತನ. ನನ್ನ ತಾಯಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ 'ಸಾಯ' ಎಂಬಲ್ಲಿನ ಸಂಪ್ರದಾಯಸ್ಥ ಹವ್ಯಕರಾಗಿದ್ದು, ತಂದೆಯವರು ವಿವಾಹದ ಬಳಿಕ ಆ ಊರಿನ ಪಕ್ಕದಲ್ಲೇ ನೆಲೆಸಿದ್ದರಿಂದ ನಮಗೆ ದಕ್ಷಿಣ ಕನ್ನಡ ಜಿಲ್ಲೆಯ ಪರಿಸರ ಲಭಿಸಿತು. ಬೆಳೆಯೂರು ಮನೆತನ ಕಲೆ ಮತ್ತು ಸೃಜನಶೀಲತೆಗೆ ಹೆಸರಾದ ಮನೆತನ. ನಮ್ಮ ಅಜ್ಜ ಅಂದರೆ ತಂದೆಯ ತಂದೆ ಬೆಳೆಯೂರು ಪರಮಯ್ಯನವರು ಯಕ್ಷಗಾನದ  ಹವ್ಯಾಸಿಯೂ, ಪ್ರಸಿದ್ಧರೂ, ಕಾರಣಿಕರೂ, ಕಾಲಜ್ಞಾನಿಯೂ ಆಗಿದ್ದರೆಂದು ತಂದೆಯವರು ಹೇಳುತ್ತಾರೆ. ಆದರೆ ನಾನು ಜನಿಸುವ ವೇಳೆಗೆ ಅವರು ತೀರಿಕೊಂಡಿದ್ದರು. ನಾವು ಸಾಗರಕ್ಕೆ ಹೋದಾಗ ಅಜ್ಜಿ ಭಜನೆ ಮಾಡುತ್ತಿದ್ದುದನ್ನು ನೋ...

'ಟೆಲಿಪತಿ' ಪ್ರಯೋಗಗಳ ಸುತ್ತಮುತ್ತ

Image
ಸುಮಾರು ವರ್ಷಗಳ ಹಿಂದೊಮ್ಮೆ ದಿಢೀರಾಗಿ ನನ್ನ ಬಾಲ್ಯದ ಗುರುಗಳೂ, ಸ್ನೇಹಿತರೂ ಆದ ಶ್ರೀಯುತ ಶ್ರೀಪತಿ ಭಟ್ ಪದ್ಯಾಣ ಅವರು "Do you know telepathy?" ಎಂದು ಒಂದು ಮೊಬೈಲ್ ಮೆಸೇಜ್ ಕಳಿಸಿದ್ದರು. "Don't know" ಎಂದಷ್ಟೇ ಉತ್ತರಿಸಿದ್ದೆ. ಹಲವಾರು ವರ್ಷಗಳ ನಂತರ ಅಂತಹ ಅರೆವಿಜ್ಞಾನದ ವಿಷಯಗಳು ನನ್ನ ಪರಿಗಣನೆಗೆ ಬಂದಿದ್ದವು. ಅದು 2016ನೇ  ಇಸವಿ . ವಿಶೇಷಾಂಕವೊಂದರಲ್ಲಿ 'ಅತೀಂದ್ರಿಯ ಲೋಕದಲ್ಲಿ' ಎಂಬ ಲೇಖನವನ್ನು ಓದುತ್ತಿದ್ದಾಗ ಕುತೂಹಲ ಕೆರಳಿತು. ಆ ನಂತರ ಟೆಲಿಪತಿ ಎಂಬ ಈ mind to mind  communication  ಬಗ್ಗೆ ಕುತೂಹಲಿಯಾದೆ. ಟೆಲಿಪತಿ ಪ್ರಯೋಗಗಳನ್ನು ಮಾಡಲು ವಿಶೇಷ ಶಕ್ತಿ ಬೇಕಾಗುತ್ತದೆ. ಈ ದಿನಗಳಲ್ಲಿ ನಾವು ಪ್ರಾಪಂಚಿಕ ನೆಟ್‌ವರ್ಕ್‌ಗಳನ್ನು  ಹೆಚ್ಚಿಸಿಕೊಂ ಡಿದ್ದೇವೆ. ಆದರೆ ನಮ್ಮ "inner engineering" ಬಗ್ಗೆ ತಿಳಿದಿಲ್ಲ. ನಿಜವಾಗಿ ಪಿಂಡಾಂಡದಲ್ಲಿ ಬ್ರಹ್ಮಾಂಡ ಅಡಗಿದೆ ಎನ್ನುತ್ತಾರೆ ನೋಡಿ. ನಮ್ಮ ಒಳಗೇನೇ ಎಲ್ಲವೂ ಇದೆಯಂತೆ. ಟೆಲಿಪತಿಕ್ ವ್ಯಕ್ತಿಗಳಲ್ಲಿ ಎರಡು ಬಗೆ. ಕೆಲವರು ಸುಲಭವಾಗಿ ರಿಸೀವ್ ಮಾಡುತ್ತಾರೆ. ಇನ್ನು ಕೆಲವರು ಸುಲಭವಾಗಿ ಸಂದೇಶ ಕಳುಹಿಸುತ್ತಾರೆ. ಮನುಷ್ಯನೆಂದರೆ ಒಂದು ಜೀವರಾಸಾಯನಿಕ ವ್ಯವಸ್ಥೆ ಎಂದು ವೈದ್ಯ ವಿಜ್ಞಾನ ಹೇಳುತ್ತದೆ. ದೇಹದ ಒಳಗೆ ಸಂವೇದನೆಗಳನ್ನು ರವಾನಿಸಬಲ್ಲ ಇಂದ್ರಿಯಗಳೊಂದಿಗಿನ ಆಂತರಿಕ ನೆಟ್‌ವರ್ಕ್ ವ್ಯವಸ್ಥೆ ಇದೆ ತಾನೇ? ಅ...

ತಾಲೂಕು ಚುಸಾಪ ಅಧ್ಯಕ್ಷರಾಗಲಿರುವ ವರ್ಮರು

Image
ನಮ್ಮ ಆಪ್ತರು ಯಾವ ಸಾಧನೆ ಮಾಡಿದರೂ ಅದು ನಮ್ಮದೇ ಸಾಧನೆ ಎಂಬಷ್ಟು ಸಂತೋಷವಾಗುತ್ತದೆ. ಏಕೆಂದರೆ ನಮ್ಮ ಮನಸ್ಸಿಗೆ ಬಾಹ್ಯದ ದೃಢೀಕರಣವೊಂದು ಏನೋ ಒಂದು ಮಹತ್ವ ನೀಡಿದಂತೆನಿಸುತ್ತದೆ. ಅಮೃತವಾಹಿನಿ ಮಾಡುತ್ತಿರುವ ಕೆಲಸಗಳಿಗೆ ಸಿಂಹದ ಬಲ ಸಿಕ್ಕಂತಾಗಿದೆ. ಈ ಹಿಂದೆ ನಾವು ನಿರೀಕ್ಷಿಸಿರುವಂತೆ ನಮ್ಮ ಸ್ನೇಹಿತರು ಸಂಕಲ್ಪದ ಪ್ರಕಾರ ಸಾಹಿತ್ಯಪರ ಚಟುವಟಿಕೆಗಳಲ್ಲಿ ಮುನ್ನಡೆಯುತ್ತಿರುವುದು ಸಂತಸಕರ ಎನ್ನಬೇಕು. ಈಗ ಕಾರಣ ಬೇರೇನಲ್ಲ. ಶ್ರೀಯುತ ರಾಜಾರಾಮ ವರ್ಮ ವಿಟ್ಲ ಅವರು ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂಬುದೇ ಸಂಚಲನ ಮೂಡಿಸುವ ವಿದ್ಯಮಾನವಾಗಿದೆ. ಶ್ರೀಯುತ ರಾಜಾರಾಮ ವರ್ಮ ಅವರು ಮುಖ್ಯವಾಗಿ ಕವಿ. ಸಂಘಟಕ. ನನ್ನ ಅತ್ಯಂತ ಹತ್ತಿರದ ಸ್ನೇಹಿತರು. ಆಡಳಿತಾತ್ಮಕವಾಗಿ ಮತ್ತು ಮಿಕ್ಕೆಲ್ಲಾ ರೀತಿನೀತಿಗಳಿಂದಲೂ ಅಪಾರ ಅನುಭವಿ ಮತ್ತು ಜ್ಞಾನವುಳ್ಳವರು. ವಿದ್ಯಾಸಂಸ್ಥೆಗಳಲ್ಲಿ ಮಹತ್ವದ ಹುದ್ದೆಗಳನ್ನು ಅಲಂಕರಿಸಿದವರು. ಹಾಗೆಂದು ಯಾವುದೇ ಆಗ್ರಹಗಳನ್ನು ಸಮಗ್ರವಾಗಿ ಪರಿಶೀಲಿಸಿಯೇ ಅವರು ನಿರ್ಣಯಗಳನ್ನು ಎತ್ತಿಕೊಳ್ಳುತ್ತಾರೆ. ಶ್ರೀಯುತ ರಾಜಾರಾಮ ವರ್ಮ ವಿಟ್ಲ ಅವರು ಉತ್ತಮ ಕವಿ. ಕಟ್ಟುನಿಟ್ಟಿನ ವ್ಯಕ್ತಿ. ಇವರ ನಿಲುವುಗಳೆಲ್ಲವೂ ಜೀವಪರ. ಸಮಾಜಶಾಸ್ತ್ರೀಯ ನೆಲೆಗಟ್ಟಿನಲ್ಲಿ ಯಾವುದನ್ನಾದರೂ ಇದಮಿತ್ಥಂ ಎಂಬಂತೆ ವಿಮರ್ಶೆ ಮಾಡಬಲ್ಲ ಪಾಂಡಿತ್ಯವಿದೆ. ಹೀಗಿದ್ದೂ ಮಾತುಗಳಲ್ಲಿ ತೀರ್ಮಾನಗಳನ್ನು ಕೊಡದೇ ಸ್...

Opting happiness and positivity

Image
"Look at the bright side of your life and choose to be happy. Yes, it is a matter of choice. When negative thoughts enter your mind, just refuse to look at them, substitute them with happy thoughts" - when I was reading a web namely raiseyourmind.com I saw these words of the couch. It is a big question, sometimes. In front of me I find several choices. When I going to write or wanting to analyse, I have to follow a super condition. That is, in fact I have to choose the best out of best in it to get better. In things, in people, in subjects and objects. When life forms it is subjected to our thought itself. Because I found patterns in it. Thereby one rule I should follow when I wire inside the mind that considering actions and reactions should be related to positive things itself. Because I want to maximise the positive in my life. So I have to take the positive responsiveness of my mind to activate high with the surrounding positive subjects and experiences rather. It is a ...

ವಿಮರ್ಶೆ 🖼️ ವಿದ್ಯಾರ್ಥಿನಿ ಪಂಚಮಿಕುಮಾರಿ ವಿರಚಿತ 'ಆರಾಧನೆ'

Image
ಕುl ಪಂಚಮಿಕುಮಾರಿ ಬಾಕಿಲಪದವು ನಮ್ಮ ಜನತಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಹುಮುಖ ಪ್ರತಿಭೆಯ ವಿದ್ಯಾರ್ಥಿನಿ. ಈಕೆ ಪ್ರಕಟಿಸುತ್ತಿರುವ ತನ್ನ ಚೊಚ್ಚಲ ಕೃತಿ 'ಆರಾಧನೆ' ಎಂಬ ಕವನ ಸಂಕಲನಕ್ಕೆ ಎರಡು ಮಾತುಗಳ ಮುನ್ನುಡಿಯನ್ನು ಬರೆದುಕೊಡಲು ಅತ್ಯಂತ ಹೆಮ್ಮೆಪಡುತ್ತೇನೆ.  ಕವಿಮನಸ್ಸು ಹೆಚ್ಚು ಸೂಕ್ಷ್ಮಗ್ರಾಹಿಯಾದುದು. ಸುತ್ತಲ ಜಗತ್ತನ್ನು ಬೆರಗಿನಿಂದ ನೋಡುತ್ತಾ, ತನ್ಮಯತೆಯಿಂದ ಅನುಭವಿಸುತ್ತಾ, ಕುತೂಹಲ ತಳೆಯುತ್ತಾ, ಪ್ರತಿಕ್ರಿಯಿಸುತ್ತಾ ಹೋದಂತೆ ಪ್ರಕೃತಿಯ ಮೂಲದ್ರವ್ಯದಿಂದಲೇ ಕೃತಿಯೊಂದು ರಚನೆಯಾಗುತ್ತದೆ. ಅದರಂತೆ ಇಲ್ಲಿ ಪಂಚಮಿಕುಮಾರಿ ತನ್ನ ಸೊಗಸಾದ ಕವನ ಸಂಕಲನವನ್ನು ಬರೆದು ಓದುಗರಿಗೆ ನೀಡಿದ್ದಾಳೆ.  ಭಾವದ ಉತ್ಕಟ ಸ್ಥಿತಿಯಲ್ಲಿ ಕವಿತೆ ಸೃಷ್ಟಿಯಾಗುತ್ತದೆ. ಜಾತ ಸ್ವರೂಪದ ಪ್ರತಿಭೆ ಮತ್ತು ವ್ಯುತ್ಪತ್ತಿಯ ಬಲದಿಂದ ಕವಿತ್ವ ಸಿದ್ಧಿಸುತ್ತದೆ. ತನ್ನ ಹೈಸ್ಕೂಲು ವಿದ್ಯಾಭ್ಯಾಸದ ಆರಂಭದಿಂದಲೇ ಕುl ಪಂಚಮಿ ಓದು ಮತ್ತು ಬರವಣಿಗೆ ಎರಡರಲ್ಲೂ ಮುಂದಿದ್ದು, ಓದಲು ಕೊಟ್ಟ ಪುಸ್ತಕಗಳನ್ನು ಲಗುಬಗೆಯಿಂದ ಜ್ಞಾನಪಿಪಾಸುವಿನಂತೆ ಓದಿ ಮುಗಿಸುತ್ತಿದ್ದಳು. ಶೈಲೀಕರಣದ ಸಮಸ್ಯೆ ಕಾಡದಂತೆ ಲಾಗಾಯ್ತಿನಿಂದಲೂ ಛಂದಸ್ಸು, ವ್ಯಾಕರಣ ಮತ್ತು ಭಾಷೆಯ ಹಿಡಿತವನ್ನು ಸಂಪಾದಿಸಿದ್ದರಿಂದ ಆಕೆಯ ಬರವಣಿಗೆಯ ಪದ್ಧತಿ ಬಲಿಷ್ಠಗೊಳ್ಳುತ್ತಿರುವುದನ್ನು ಗಮನಿಸಬೇಕಾಗಿದೆ.  ಸಂಕಲನದ ಶೀರ್ಷಿಕೆಯಾಗಿರುವ 'ಆರಾಧನೆ' ಪುಸ್ತಕದ ಮೊದಲನೇ ಕವಿ...