Posts

Showing posts from September, 2018

ದಿನಕರ ಇಂದಾಜೆ ಅವರ 'ಗರುಡಾವತಾರ'

Image
ಹೊಸದಿಗಂತ ನಿರ್ವಾಹಕ ಸಂಪಾದಕ ಶ್ರೀಯುತ ದಿನಕರ ಇಂದಾಜೆ ಒಂದು ಸಂದರ್ಭದಲ್ಲಿ ನನ್ನನ್ನು ಪತ್ರಿಕೆಯ ಉಪಸಂಪಾದಕನನ್ನಾಗಿಸಿ ಮುನ್ನಡೆಸಿದವರು. ಸಾಹಿತಿಯಾಗಿ, ಕಾದಂಬರಿಕಾರರಾಗಿಯ ೂ ಮುಂಚೂಣಿಯಲ್ಲಿದ...

ಅವರವರ ಬದುಕಲ್ಲಿ ಅವರವರು ಹೀರೋಗಳೇ!

Image
ಈ ಲೋಕದಲ್ಲಿ ಅದೆಂಥ ವಿಚಿತ್ರ ಮನುಷ್ಯರಿರುತ್ತಾರಪ್ಪಾ! ಕೆಲವರಿರುತ್ತಾರೆ. ಅವರಿಗೆ ಮತ್ತೊಬ್ಬರಿಗೆ ಬುದ್ಧಿ ಹೇಳುವ ತೆವಲು, ತವಕ. ಒಂದು ಬಗೆಯ ತಿಕ್ಕಲು ಸ್ವಭಾವ. ತಮ್ಮ ಮೂಗಿನ ನೇರಕ್ಕೆ ಮಾತಾಡಿಬಿಡುವ...

ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸುವುದು

Image
'ಮನೆಯೆ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರು' ಎಂಬಂತೆ ಮೊದಲು ಸಂಸ್ಕಾರ ನೀಡುವವಳು ತಾಯಿ. 'ವಿದ್ಯೆಯಲಿ ತನುಮನವ ತಿದ್ದಿಕೊಳ್ಳಲು ಬೇಕು' ಎಂದು ಕವಿ ಸರ್ವಜ್ಞ ಹೇಳಿದ್ದಾನೆ. ಹಿಂದೆ ಮನೆಗಳಲ್ಲಿ ಕೂಡುಕು...

2016ರ ಕುವೆಂಪು ಜನ್ಮದಿನಾಚರಣೆಯನ್ನು 'ವಿಶ್ವ ಮಾನವ ದಿನ'ವನ್ನಾಗಿ ಆಚರಿಸಿದ ಸಂದರ್ಭದಲ್ಲಿ ಮಾತನಾಡುವ ಅವಕಾಶ.

Image

2017ರಲ್ಲಿ ಕಯ್ಯಾರ ಕಿಞ್ಞಣ್ಣ ರೈ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಕಾಣಿಸಿಕೊಂಡ ಒಂದು ಸಂದರ್ಭ.

Image

ಸುವರ್ಣ ಸಂಭ್ರಮ

Image
ಇದು ಸುವರ್ಣ ಸಂಭ್ರಮ ಹಾಡೋಣ ಸರಿಗಮ ನೋಡಿರಣ್ಣ ಚಂದ ನಮ್ಮ ಶಾಲೆಯಂದ ಕೊಂಡಾಡಿ ಕೀರ್ತಿ ತುಂಬೋಣ ಸ್ಫೂರ್ತಿ ಈ ಬಯಲು ಅಂಗಣ ನಲಿದು ಕಲಿವ ರಿಂಗಣ ಪಾಠ ವಿಷಯ ಜ್ಞಾನ ಹೊಸ ತಂತ್ರಜ್ಞಾನ ತೊಲಗಿಸಿ ಅಜ್ಞಾನ ತೋರಿತು ಸುಜ್ಞಾನ ಮೆರೆದಾಟವ ನೋಡು ಮೆರವಣಿಗೆ ಮಾಡು ನಮ್ಮ ಶಾಲೆಯೊಡಲು ಪ್ರಕೃತಿಯ ಮಡಿಲು ವಿದ್ಯೆಯ ಸಂಪತ್ತು ಸದ್ಬುದ್ಧಿಯನಿತ್ತು ಕಾಪಾಡಿದ ಶಾಲೆಯೇ ಏನು ನಿನ್ನ ಲೀಲೆ! ಶಾಲೆಗೆ ಐವತ್ತು ತುಂಬಿದ ಈ ಹೊತ್ತು ಸ್ವಾಗತಿಸಿದೆ ತೋರಣ ಆನಂದದ ಪ್ರೇರಣ -ಶಿವಕುಮಾರ ಸಾಯ (೧೨.೧೨.೨೦೧೫ರಂದು ಜರಗಿದ ಶಾಲಾ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಅಭಿನಯಿಸಲ್ಪಟ್ಟ ಗೀತೆ.)

ಮತ್ತೆ ಬರೆಯುತ್ತೇನೆ ಕವಿತೆ

Image
ಮತ್ತೆ ಬರೆಯುತ್ತೇನೆ ಕವಿತೆ ದೇವರ ಹೆಸರಿನಲ್ಲಿ; ಬರೆಯುತ್ತೇನೆ ಕವಿತೆ ಒಂದು ನಿಶ್ಚಯಕ್ಕಾಗಿ. ಮುಡಿಪಿನ ಧಾರಣೆಯ ಬಯಸುವ ಬಯಕೆಗಳ ಮಾಲೆಯಂತೆ ಬವಣೆಯ ನೀಗುವ ಭರವಸೆ ಕರುಣೆಯಲಿ ಕರಪಿಡಿದು ಕಾಪಾಡುವುದು. ಪವಾಡಗಳು ನಡೆಯುವವು ಪ್ರಸಿದ್ಧಿಯಂತೆ; ನಿನ್ನ ಆಶೋತ್ತರಗಳಿಲ್ಲಿ ನೆರವೇರುವವು ನಿರ್ಣಯದಂತೆ. ನೀ ಈ ಕ್ಷಣ ಒಮ್ಮೆ ಅಳುತ್ತಿರಬಹುದು, ಮತ್ತೊಮ್ಮೆ ವರ್ತಮಾನದಲ್ಲಿ ಗೆರೆ ಎಳೆದು ಉಸಿರಾಡುತ್ತಿರಬಹುದು, ಮಗದೊಮ್ಮೆ ನಗುನಗುವ ವಿಧಾನ, ತಂತ್ರೋಪಾಯ ಪಾಲಿಸುತ್ತಿರಬಹುದು.... ಯಾವುದೂ ಶಾಶ್ವತವಲ್ಲ- ನಿನ್ನ ದುಗುಡಗಳು ಕೂಡ ನಿಜವಲ್ಲ; ಅಪೂರ್ವ ನಿಲುವಿನಿಂದ ಗೆಲುವಿನ ಕಡೆ ಚಲಿಸುತ್ತಾ ಮತ್ತೆ ಬರೆಯುತ್ತೇನೆ ಕವಿತೆ- ಒಂದು ತದೇಕ ಚಿತ್ತದ ಧ್ಯಾನದಂತೆ, ತಪಸ್ಸಿನಂತೆ, ನಿರ್ವಾಹಕನ ನ್ಯಾಯದಂತೆ ದೇವರ ಹೆಸರಿನಲ್ಲಿ. ✍️ಶಿವಕುಮಾರ ಸಾಯ 'ಅಭಿಜಿತ್'

ಘನತೆ

Image
ಕಾಪಾಡು ಕೃಷ್ಣ ಕಾಪಾಡು; ಕೊಳಲನೂದುತ್ತ ಪಾಡು. ವ್ಯಾಸರ ಕಾವ್ಯ- ತಪದ ಸೃಷ್ಟಿ ನೀ, ರಮಾರಮಣನೆಂದರೂ ಸರಿಹೋಗುವುದು ಅವತರಣದಲ್ಲಿ. ಸಂಸ್ಕೃತದ ಶಕ್ತಿ, ಯುಗಯುಗದ ಉತ್ಪತ್ತಿ, ಪರಮ ಧೀ- ಸಂಕಲ್ಪದ ಸನ್ನಿಧಿ ಔಂ ಔಂ ಔಂ ನಮಃ! ಕವಿಗೆ ಕಿವಿಯಾಗಿರುವವನು, Projection of consciousness ನೀನು- ವಿಠ್ಠಲನು. ಪ್ರಾರ್ಥನೆಗಳು ಫಲಿಸುತ್ತಿವೆ ಗೆಳೆಯನೇ ಈಗ: ಅಂದು-ಇಂದಿನ ಒಂದು ನಿಶ್ಶಬ್ದ ಧ್ಯಾನದ ಕೋರಿಕೆಯಂತೆ ಮಾತ್ರ, ಅಚಂಚಲವಾಗಿ. ✍️ ಶಿವಕುಮಾರ ಸಾಯ 'ಅಭಿಜಿತ್'

ಮೌನ ಮುರಿದ ಸಿಂಹ

Image
ಗವಿಯಲ್ಲಿನ ಸಿಂಹದ್ದು ರಾಜಾರೋಷ-- ಈ ದಿನ ಸಿಂಹಕ್ಕೆ ಬಂತು ಆವೇಶ; ಅದು ತನ್ನ ಮೌನ ಮುರಿದಿದೆ. ಶಂಕೆಯಿಲ್ಲ-- ಸಿಂಹ ಯಾವತ್ತೂ ಮರ್ಯಾದೆಯ ಗದ್ದುಗೆಯಲ್ಲಿರುತ್ತದೆ; ಮಹಲಿನ ಅಮಲಿನಲ್ಲಲ್ಲ. ತಾನು ಯಾವುದನ್ನು ಮಾಡಬೇಕೋ ಅದನ್ನೇ ಮಾಡುವುದು, ಯಾವುದನ್ನು ಆಡಬೇಕೋ ಅದನ್ನೇ ಆಡುವುದು, ಯಾವುದನ್ನು ತಿನ್ನಬೇಕೋ ಅದನ್ನೇ ತಿನ್ನುವುದು ಸಿಂಹ! ಸಿಂಹ ಸ್ಥಿತಪ್ರಜ್ಞ; ಮಂತ್ರಿ-ಮಹೋದಯರಿಗೆ ಕರೆ ಮಾಡಿ ಶತ್ರುಗಳನ್ನು ಕೆಣಕಿ ಕಾಡಿದರೆ ಸಿಂಹಕ್ಕೆ ಅದೂ ಪುರುಷತ್ವವೇ. ಬಹುಪರಾಕ್! ಯಾವ ಮನುಷ್ಯ ಕೂಡ ಸಿಂಹಕ್ಕೆ ಎದುರಾಗಲಾರ; ಏಕೆಂದರೆ, ಸಿಂಹದ ಎದುರು ಎಂತಹ ಮನುಷ್ಯನಿದ್ದರೂ ಮಂಗಕ್ಕೇ ಸಮಾನ! ✍️ಶಿವಕುಮಾರ ಸಾಯ 'ಅಭಿಜಿತ್'

ವಿಕಸನ

Image
ವಿಶ್ವ ವಿನೋದದ ಚಿಲುಮೆ ಪ್ರಕೃತಿದೇವಿಯ ಹಿರಿಮೆ ಮಾಯಾ ಮೋಹಕ ಯಾನ ಬಾಳು ರಸಾಮೃತ ಗಾನ ಸಾವಿರ ಸಾವಿರ ಕೋಟೆ ಕೊತ್ತಲ ಬೆಟ್ಟ ಬಯಲು ಸಾಲು ಜೀವಿ ವಿಕಾಸದ ಸೃಷ್ಟಿ ಪರಂಪರೆ ಹುಟ್ಟು ಏಳುಬೀಳು ದೇಶ ವೇಷ ಆಕಾಶ ಕೋಶ ಬುದ್ಧಿ ಭಾವ ಬಲವು ಸುಜ್ಞಾನದಿಂದ ವಿಜ್ಞಾನದಿಂದ ವಿಸ್ತರಿಸುತಿರಲಿ ಅರಿವು ತಂಗಾಳಿಯಂತೆ ತಿಲ್ಲಾನದಂತೆ ಹೊಮ್ಮುತಿಹುದು ನಲಿವು ಶಿವಕರುಣೆಯಿಂದ ಜಗ ತೋರುತಿಹುದು ದಿನದಿನವು ಹೊಸತು ಚೆಲುವು ✍️ಶಿವಕುಮಾರ ಸಾಯ 'ಅಭಿಜಿತ್'

ಸಂಪರ್ಕಗಳು

Image
ನಿಮ್ಮ ಜೀವನದಲ್ಲಿ ಈ ಮೂರು ಬಗೆಯ ಜನರು ನಿಮ್ಮ ಸಂಪರ್ಕಕ್ಕೆ ಬರುತ್ತಾರೆ ಎಂದು ಮನಃಶಾಸ್ತ್ರ ಹೇಳುತ್ತದೆ : People for a reason, People for a season ಹಾಗೂ People for lifetime. 1. People for a reason: 🤼‍♀️🤼‍♂️ ನಿಮ್ಮ ಬದುಕಿನಲ್ಲಿ ಅವಶ್ಯವಿದ್ದ ಯಾವುದೋ ಕಾರಣಕ್ಕಾಗಿ ಸಂಪರ್ಕಕ್ಕೆ ಬಂದವರೇ People for a reason. ಅವರು ಕ್ಲಿಷ್ಟಕರ ಸನ್ನಿವೇಶದಲ್ಲಿ ನೆರವಾಗುತ್ತಾರೆ. ಮಾರ್ಗದರ್ಶನ ಮತ್ತು ಬೆಂಬಲ ನೀಡುತ್ತಾರೆ. ಭೌತಿಕ, ಭಾವನಾತ್ಮಕ ಅಥವಾ ಆಧ್ಯಾತ್ಮಿಕ ಸಹಾಯ ಒದಗಿಸುತ್ತಾರೆ. ಆದರೆ ಕಾರಣಗಳು ಇಲ್ಲವಾದಾಗ, ನೀವು ಉದ್ದೇಶಗಳನ್ನು ಈಡೇರಿಸಿಕೊಳ್ಳಬಲ್ಲಷ್ಟಾದಾಗ ಆ ವ್ಯಕ್ತಿಗಳಿಗೆ ಜರೂರತೆಯಿರುವುದಿಲ್ಲ. ಅಂತಹ ಸಂಬಂಧಗಳು ತಾತ್ಕಾಲಿಕವಾಗಿವೆ.‍ 2. People for season: 👨‍👧‍👦👨‍👧‍👧👩‍👦👨‍👧 ಕೆಲವು ವ್ಯಕ್ತಿಗಳು ನಿಮ್ಮ ಜೀವನದಲ್ಲಿ ಒಂದು ಅವಧಿಯಲ್ಲಿ ಇರುತ್ತಾರೆ. ಉದಾಹರಣೆಗೆ ಬಾಲ್ಯ, ಯೌವನ ಅಥವಾ ವೃದ್ಧಾಪ್ಯದಲ್ಲಿರಬಹುದು. ಅವರೇ people for a season. ಅವರು ನಿಮಗೆ ಶಾಂತಿ, ಸಂತೋಷ, ನಗು, ನೆಮ್ಮದಿ ನೀಡುತ್ತಾರೆ. ಅದನ್ನು ನಂಬಿ. ಆದರೆ ಅವರು ನಿಮ್ಮೊಡನೆ ಶಾಶ್ವತವಾಗಿ ಇರಲಾರರು. ಈ ಸಂಬಂಧಗಳೂ ಕೂಡ ಸಾರ್ವಕಾಲಿಕವಲ್ಲ. 3. People for lifetime: 👩‍❤️‍👨👨‍❤️‍👨👩‍❤️‍👩 ಜೀವನಪೂರ್ತಿಯ ಸಂಬಂಧಿಗಳು ಜೀವನಪೂರ್ತಿ ಜೊತೆಗಾರರಾಗಿದ್ದು ಪಾಠಗಳನ್ನು ಕಲಿಸುತ್ತಲೇ ಅವರು ಜೊತೆಯಲ್ಲಿ ಉಳಿಯು...

ವರ್ಣನೆ

Image
ಪದ ಬದಲಾದಾಗ ಪದ್ಯ ಬದಲಾಗುವುದು; ವರ್ಣ ಬದಲಾದಾಗ ವರ್ಣನೆಯು ಬದಲಾಗುವುದು. ಎಲ್ಲ ಬದಲಾಗುವುದು, ಜಗವೆ ಪರಿವರ್ತಿಸುವುದು; ಇಂದಿಗದು ಸರಳ ಎಂದಾಗ, ರಾಗಕ್ಕೊಂದು ಕೊಳಲು, ಪ್ರೀತಿಗೊಂದು ಭಾಷೆ ಇರುವಾಗ ಸಮಯ ಬದಲಾದರೆ ಸಂಯಮವು ಬದಲಾಗುವುದು, ಆಯಾಮ ಬೇರಾಗುವುದು; ಪಾತ್ರ ಬದಲಾದರೆ ಸೂತ್ರ ಬದಲಾಗುವುದು. ಆಸೆಗಳು ತವರೂರು; ತತ್ತ್ವಕ್ಕೆ ಇಳಿದು, ಮಹತ್ವ ತಿಳಿದು, ಮುತ್ತುಗಳ ತೊಟ್ಟಾಗ ಇಂದ್ರನೇ. ಗುರಿ ಬದಲಾದರೆ ಗಂಟೆ ಬದಲಾಗುವುದು; ಅಣು ಬದಲಾದರೆ ಗುಣ ಬದಲಾಗುವುದು; ಅವರು ಭಾವನೆಗಳನ್ನು ಕೆಣಕಿದರು, ಊಹನೆಗಳನ್ನಲ್ಲ! ಆ ಭಾವನೆಗಳೇ ಬೇರೆ, ಈ ನಿನ್ನ ಬಗೆಯೇ ಬೇರೆ! ✍️ ಶಿವಕುಮಾರ ಸಾಯ 'ಅಭಿಜಿತ್'

ಆಮೆ ಎಂಬ ಯೋಗಿ

Image
ಆಮೆ ಒಂದು ತಪಸ್ವಿಯಂತೆ; ಅದು ತೆವಳುತ್ತದೆ ಅಷ್ಟೇ. ಮೊಲದ ಜೊತೆ ಸ್ಪರ್ಧಿಸಿ ಮ್ಯಾರಥಾನ್ ಗೆದ್ದ ಆಮೆ ಇತಿಹಾಸಕ್ಕೆ ಸೇರಿತು ಅಥವಾ ದಂತಕಥೆಯಾಯಿತು. ಆಮೆಗೆ ಜಲದ ಭಯವಿಲ್ಲ ನೆಲದ ಮೇಲೂ ಭಯವಿಲ್ಲ ನಿರ್ಭಯವಾಗಿರುವ ಆಮೆ ಉಭಯವಾಸಿ. ಆಮೆ ಯೋಗಿಯೇ; ಅದು ನಿಧಾನವಾಗಿ ಉಸಿರಾಡುತ್ತಾ ನಿರಾಳವಾಗಿ ಬದುಕುವುದು ಎರಡುನೂರು ವರುಷ. ಶುಭ ಕೋರುವಾಗ 'ಆಯುಷ್ಮಾನ್ ಭವ' ಅನ್ನುವುದು ಹಳೆಯದಾಯಿತು 'ಆಮೆಯಾಗು' ಎಂದರೇನೆ ಸೊಗಸು. ಆಮೆಯೊಂದು ತನ್ನ ಇಂದ್ರಿಯಗಳನ್ನು ಫಕ್ಕನೆ ಚಿಪ್ಪಿನೊಳಗೆ ಎಳೆದುಕೊಳ್ಳುತ್ತದೆ ಎಂದು ಪುಸ್ತಕದಲ್ಲಿದೆ ವರದಿ. ಅಚ್ಚರಿಯಾಗುತ್ತಿದೆ, ಆಮೆಗೂ ಗೊತ್ತಿರಬಹುದೆ ವಿಶ್ವದ ಕೇಂದ್ರ ತನ್ನೊಳಗಿರುವುದೆಂದು?! ಅದು ಯಾವ ಪವಾಡ ಮಾಡಿತೋ ತಿಳಿಯದು ತನ್ನ ಗೆಲುವಿಗಾಗಿ ಮತ್ತು ನಿಲುವಿಗಾಗಿ. ಅಂತೂ ಆಮೆಯ ದೇಹ ವಜ್ರಕಾಯವಾಗಿದ್ದು ಸಂಕಲ್ಪದಿಂದಲೇ; ಆಮೆಯ ಬದುಕಿನ ಆರೋಗ್ಯ, ಆಯುಷ್ಯ ಮತ್ತು ಯೋಗ್ಯತೆ ಬಲಿಷ್ಠ ಮಾದರಿಯೇ. ✍️ ಶಿವಕುಮಾರ ಸಾಯ 'ಅಭಿಜಿತ್' 🐢🐢🐢🐢🐢🐢🐢🐢

ನುಡಿಬಿಂದು: 'ಧ್ರುವೀಕರಣ'

Image
ಮೊಟ್ಟೆಯೊಳಗೆ ಪಕ್ವವಾಗಿರುವ ಭ್ರೂಣವು ಯಾವ ಬಿಂದುವಿನಲ್ಲಿ ಹೊರಬರಬೇಕೋ ಅಲ್ಲೇ ಮರಿಯಾಗಿ ಹೊರಬಂದಿರುತ್ತದೆ. ಅಷ್ಟರ ಮುನ್ನ ಆ ವ್ಯವಸ್ಥೆ ಇನ್ನಷ್ಟು ಸುಲಭವೋ ಅಥವಾ ಕ್ಲಿಷ್ಟವೋ ಆಗಿರುತ್ತಿದ್ದರೆ ಮೊಟ್ಟೆ ಮರಿಯಾಗುವ ಪ್ರಕ್ರಿಯೆಯೇ ಜರಗುವುದಿಲ್ಲ. ಹಾಗೆಯೇ ನೀರಿನಲ್ಲಿ ಒಂದು ನೆಲವಾಸಿ ಜೀವಿ ಬಿದ್ದುಬಿಟ್ಟಿತು ಎಂದಿಟ್ಟುಕೊಳ್ಳಿ. ಆಗ ಅದರ ಒಳಹೊರಗಿನ ಒದ್ದಾಟ-ಗುದ್ದಾಟ ಮತ್ತು ಚಲನವಲನಗಳ ಫ್ರೀಕ್ವೆನ್ಸಿ ಕೂಡಾ ಒಂದು ಬಗೆಯಲ್ಲಿ ಜೀವಿಯನ್ನು ಕಾಪಾಡುವ ಸಾಧ್ಯತೆಗಳತ್ತ ಕೊಂಡೊಯ್ಯಬಹುದು. ಎತ್ತರದ ಬೆಟ್ಟಗಳಲ್ಲಿ ಯಶಸ್ವಿಯಾಗಿ ಬದುಕುವ ಮರಗಳಾಗಿರಲಿ ಅಥವಾ ಭೂಮಿಯೊಳಗಿನ ಹುಳುಹುಪ್ಪಟೆಗಳಾಗಿರಲಿ, ಎಲ್ಲವೂ ತಮಗೆ ಬೇಕಾದ ಅಂಗೋಪಾಂಗಗಳನ್ನು ಹೊಂದಿರುವುದರಿಂದ ವ್ಯತ್ಯಸ್ತ ಪರಿಸರದಲ್ಲಿ ವ್ಯತ್ಯಸ್ತ ರೀತಿಯಲ್ಲಿ ಬದುಕುತ್ತವೆ. ನಾವು ಎಲ್ಲಿ ಯಾವ ಪರಿಸ್ಥಿತಿಯಲ್ಲಿ ಬೆಳೆದು ಬದುಕುತ್ತಿದ್ದೇವೋ ಅದು ನಾವು ಮಾತ್ರ ಸುಲಭವಾಗಿ ನಿಭಾಯಿಸಬಲ್ಲ ಪರಿಸ್ಥಿತಿಯಾಗಿರುತ್ತದೆ. ಎಲ್ಲರೂ ಯಾವಾಗಲೂ ಎಲ್ಲಿರಬೇಕೋ ಅಲ್ಲೇ ಇರುತ್ತಾರೆ. ಇದು ಪ್ರಕೃತಿಯಲ್ಲಿ ನಡೆಯುವ ಸಹಜ, ಸಾರ್ವತ್ರಿಕ ಧ್ರುವೀಕರಣ. ✍️ಶಿವಕುಮಾರ ಸಾಯ 'ಅಭಿಜಿತ್' 🔵🔴

ಸಫಲತೆಯ ಸೂತ್ರೀಕರಣ

Image
ಒಮ್ಮೊಮ್ಮೆ ಕೆಲವರು ಮುಟ್ಟಿದ್ದೆಲ್ಲ ಚಿನ್ನವಾಗಿಬಿಡುವುದನ್ನು ನಾವು ನೋಡುತ್ತೇವೆ. ಕೆಲವೊಂದು ದೇಶ ಕಾಲ ಪರಿಸ್ಥಿತಿಗಳು ಎಷ್ಟು ಪಕ್ವವಾಗಿರುತ್ತವೆಯೆಂದರೆ ನೀವು ಅನಾಯಾಸವಾಗಿ ನಡೆದಾಡಿದರೂ ಕೂಡಾ ಅಮಿತವಾದ ಪ್ರತಿಫಲಗಳು ನಿಮ್ಮದಾಗುತ್ತವೆ. ಹಾಗಾದರೆ, ಒಂದು ಕ್ರಿಯೆಯ ಸಫಲತೆಯ ಸ್ವರೂಪದಲ್ಲಿರುವ ನಿರ್ಧಾರಕಗಳು ಯಾವುವು? ಸಂಕಲ್ಪ : ಬಲಿಷ್ಠ ಕಾರ್ಯಗಳ ಹಿಂದೆ ಬಲಿಷ್ಠ ಸಂಕಲ್ಪ ಇರುತ್ತದೆ. ನಿಮ್ಮ ಗುರಿ ನಿಶ್ಚಿತ ವಿಜಯದ ಕಡೆಗೆ ಇರುತ್ತದೆ. ಆತ್ಮವಿಶ್ವಾಸ: ಆತ್ಮವಿಶ್ವಾಸವೇ ಜಯದ ಗುಟ್ಟು. ಯಶಸ್ಸನ್ನು ಪಡೆಯಬೇಕಾದರೆ ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು. ಶಕ್ತಿ, ಯುಕ್ತಿ ಮತ್ತು ಪಕ್ವತೆ: ಒಂದು ಕಾರ್ಯ ಕೈಗೊಳ್ಳಲು ಶಕ್ತಿ ಮುಖ್ಯ. ಆದರೆ ಅದರ ಗುಣಾತ್ಮಕತೆ ಹಾಗೂ ಯೋಜಿತ ನಿಭಾವಣೆಯೂ ಅತ್ಯಂತ ಮುಖ್ಯವಾಗಿದೆ. ಯುಕ್ತಿಯನ್ನು ಬಳಸಿ ಅತ್ಯಲ್ಪ ಶಕ್ತಿಯಿಂದಲೂ ಜಯಭೇರಿ ಹೊಡೆಯಬಹುದು. ಪಕ್ವತೆಯೂ ಸರಿಯಾದ ರೀತಿಯಲ್ಲಿ ಹಾಗೆಯೇ ಇರಬೇಕು. ನಂಬಿಕೆಗಳು: ಯಶಸ್ವೀ ಕ್ರಿಯೆಗಳ ಹಿಂದಿನ ನಂಬಿಕೆಗಳು ಯುಕ್ತವಾಗಿರುತ್ತವೆ. ಅವು ನಿಮ್ಮ ಗೊತ್ತು ಗುರಿಗಳನ್ನು, ಆದ್ಯತೆಗಳನ್ನು ರೂಪಿಸುತ್ತವೆ ಎನ್ನಬಹುದು. ನೀವೇನು ನಂಬಿರುವಿರೋ ಅದು ಆ ಕ್ಷಣದ ಬೇಡಿಕೆಗಳಿಗೆ ಅನುಗುಣವಾದುದಾಗಿರುತ್ತದೆ. ಪರಿಸರ: ಪರಿಸರದ ಸ್ವರೂಪವು ಯಶಸ್ವೀ ಕಾರ್ಯಗಳಲ್ಲಿ ಸಂದರ್ಭೋಚಿತವಾಗಿರುತ್ತವೆ. ಹವಾಮಾನ, ಭೌತಿಕ, ಜೈವಿಕ ಹಾಗೂ ರಾಚನಿಕ ಆಯಾಮಗಳ ಸಾನ್ನಿಧ್ಯ ಅದೇ ಬಗೆಯಲ್ಲಿರಬೇಕು. ಅದು ...

‘ಒಳಗೊಳ್ಳುವಿಕೆ’ ಹಾಗೆಂದರೇನು?!

Image
‘ಒಳಗೊಳ್ಳುವಿಕೆ’ಯು ಪ್ರಕೃತ, ತಥಾಕಥಿತ ತತ್ತ್ವಗಳಿಗಿಂತ ಮಿಗಿಲಾದ ಒಂದು ತತ್ತ್ವವಿಚಾರವಾಗಿದೆ. ಇದು ಸತ್ಯ ಸ್ವರೂಪದಿಂದ ಉತ್ಪ್ರೇರಿತವಾಗಿದೆ. ಇಲ್ಲಿ ಉತ್ಪ್ರೇಕ್ಷೆಗಳಿಲ್ಲ. ಪ್ರಕೃತಿಸ್ವರೂಪದಲ್ಲಿ ದೇವರು ತನ್ನೆಲ್ಲಾ ಗುಣಗಳ ಸಾರ ಸರ್ವಸ್ವವೇ ಸರಿ. ಇದನ್ನೇ ಸರ್ವಸ್ವರೂಪವೆಂದೂ, ಸಗುಣಬ್ರಹ್ಮವೆಂದೂ ಹೇಳುವರು. ಅದೇ ಬಗೆಯಲ್ಲಿ ನಿರ್ಗುಣ ಬ್ರಹ್ಮವಾದರೋ ಗುಣರಹಿತ, ರೂಪರಹಿತ ಎಂದೂ ಹೇಳಲ್ಪಟ್ಟಿದೆ. ಜೀವಿಯ ರೂಪದಲ್ಲಿ ವ್ಯಕ್ತವಾದಾಗ, ಪ್ರಕೃತಿ ಸ್ವರೂಪವಾಗಿ ತೆರೆದುಕೊಂಡಿದ್ದಾಗ ನೀವು ಸಗುಣಬ್ರಹ್ಮವೇ ಹೊರತು ನಿರ್ಗುಣಬ್ರಹ್ಮವಲ್ಲ.  ಪ್ರಕೃತಿಯು ತನ್ನೆಲ್ಲಾ ಗುಣಧರ್ಮವನ್ನು ಅನುಗುಣವಾಗಿ ಹಾಗೂ ಧ್ವನಿಪೂರ್ಣವಾಗಿ ವ್ಯಕ್ತಪಡಿಸುತ್ತಿರಬೇಕು ಮತ್ತು ವ್ಯಕ್ತಪಡಿಸುತ್ತಿರುತ್ತದೆ. ವಾಸ್ತವವಾಗಿ ಎಲ್ಲಾ ಗುಣಗಳು ಎಲ್ಲರ, ಎಲ್ಲವುಗಳ ಜಾತ ಸ್ವರೂಪ ಮತ್ತು ಸ್ವತ್ತು. ಇಲ್ಲಿ ನೆನಪಿಡಬೇಕಾದ ಒಂದೇ ಒಂದು ಶಬ್ದ ‘ಒಳಗೊಳ್ಳುವಿಕೆ’.  ದುಷ್ಟಶಿಕ್ಷಣ, ಶಿಷ್ಟರಕ್ಷಣ- ಇದೇ ಸದ್ಧರ್ಮ - ಕರ್ಮ. ✍️ ಶಿವಕುಮಾರ ಸಾಯ ‘ಅಭಿಜಿತ್’ 🔴🔵

ಪದ್ಯ ರಚನೆ, ರಾಗ ಸಂಯೋಜನೆ ಕಾರ್ಯಾಗಾರ

Image
ನಾನು ಕಾರ್ಯನಿರ್ವಹಿಸುತ್ತಿರುವ ಅಡ್ಯನಡ್ಕ ಜನತಾ ಪ್ರೌಢಶಾಲೆಯಲ್ಲಿ ಡಿಸೆಂಬರ್ 2017ರಲ್ಲಿ ನಡೆದ ಪದ್ಯ ರಚನೆ ಮತ್ತು ರಾಗ ಸಂಯೋಜನೆ ಕಾರ್ಯಾಗಾರದಲ್ಲಿ ನಾನು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಸಂದರ್ಭ . -ಶಿವಕುಮಾರ ಸಾಯ 'ಅಭಿಜಿತ್'

ಹೇ ಗುರುವೆ...

Image
ಹೇ ಗುರುವೆ, ಓ ಚಿರವೆ, ಅಖಂಡ ಮಂಡಲ ವಿಭುವೇ... ನಿರ್ವಿಕಾರಿ, ಲೋಕ ವಿಹಾರಿ, ಪ್ರಚಂಡ ರೂಪಿ ಪ್ರಭುವೇ.... ಆದರದಲಿ ನಮ್ಮ ಹರಸು ಹೇ ದೇವ, ನೀ ಲಾಲಿಸು ಎಮ್ಮ ಪ್ರೇಮದಿ ಪಾಲಿಸು llಹೇ ಗುರುವೆ.. ll ಅಳಿಯದ ವಿದ್ಯೆಯ ಕಲಿಸಿ, ಬೆಳೆಯುವ ಪದ್ಧತಿ ತಿಳಿಸಿ, ಜ್ಞಾನದ ದಾರಿಯ ತೋರಿ, ಬೆಳ್ಳಿಯ ಕಿರಣವ ಬೀರಿ; ಅನುಭವದಮೃತ ನೀಡಿ, ಬುದ್ಧಿಯ ತಿದ್ದಿ ತೀಡಿ, ಹೆಗ್ಗಳಿಕೆಯನು ಸಲಿಸಿ, ಜಗ್ಗದ ತೆರದಲಿ ಗೆಲಿಸಿ llಆದರದಲಿ.. ll ಹೇ ಗುರುವೆ.. ll ಭಕ್ತಿಯ ಜಪವನು ನಡೆಸಿ, ಮೌನದ ತಪ ಆಚರಿಸಿ, ಸಾಧನ ಶಿಖರವನೇರಿ, ಬಾರಿಸೆ ವಿಜಯದ ಭೇರಿ llಆದರದಲಿ.. ll ಹೇ ಗುರುವೆ... ll ✍️ಶಿವಕುಮಾರ ಸಾಯ 'ಅಭಿಜಿತ್' 🔴🔵

ಸ್ಪಂದನೆ

Image
ಮಗುವಿಗೆ ಮಲಗುವ ಮಂಚದಂತಿರುವ ತೊಟ್ಟಿಲಿನ ಕೊನೆಯ ಅಂಚುಗಳ ಮೇಲೆ ಮೊದಲ ಪ್ರೀತಿ; ಬಾಲಪಾದಗಳಲ್ಲಿ ಮೆಲ್ಲನೇ ಅದು ಹಾಸಿಗೆಯನೊದೆಯುತ್ತದೆ. ಹೊದೆದು ಮಲಗಿದ್ದಾಗ ದಾದಿಯೋ ಅಥವಾ ಇನ್ಯಾರೋ ಮಗುವನ್ನು ನೋಡಿ ಹೋಗುತ್ತಾರೆ; ಅದರ ಅಂಗಾಲುಗಳ ಚುಂಬಿಸಿ ಪ್ರೀತಿಯಲಿ ಸ್ಪರ್ಶಿಸುತ್ತಾರೆ. ಅಂಗಾಲುಗಳಿಗೆ ಗೊತ್ತಿರಬಹುದು, ಅವು ಮಾತಾಡಲಾರವು; ಕಣ್ಣುಗಳಿಗೆ ತಿಳಿದಿರಬಹುದು, ಅವು ನುಡಿಯಲಾರವು; ಮುಡಿಪು. ಅದೆಷ್ಟೋ ಗೆಳೆಯರು ತಿಂಡಿ ನೀಡುತ್ತಾರೆ ಆಟವಾಡುತ್ತಾರೆ ಎದ್ದಾಗ ಚಪ್ಪಾಳೆ ತಟ್ಟಿ, ಬಿದ್ದಾಗ ಮದ್ದು ಹಚ್ಚುತ್ತಾರೆ ಪವಾಡದಂತೆ ಎತ್ತಿ ಬಿಡುತ್ತಾರೆ ಮುತ್ತು ಕೊಡುತ್ತಾರೆ. ನಂಬಿಕೆಯು ಬೆಳೆದಂತೆ ಸ್ನೇಹ ಉಳಿಯುವುದು ಪ್ರೀತಿ ಬಾಳುವುದು. ಎಂದೂ ಪ್ರೀತಿ ಕೊಟ್ಟವರಲ್ಲಷ್ಟೇ ಮುತ್ತಿನ ಬೆಲೆಯ ಕೇಳಬೇಕು; ಅದು ಯಾರೆಂದು ತಿಳಿದು ಕೃತಜ್ಞತೆ ಹೇಳಬೇಕು. ✍️ ಶಿವಕುಮಾರ ಸಾಯ 'ಅಭಿಜಿತ್' 🔵🔵

ಆದ್ಯತೆ

Image
ಧ್ಯಾನವೆಂದರೆ ನೀನು ನಿನ್ನೊಳಗೆ ಒಂದಾಗುವುದು ಒಂದೇ ಆಗಿ, ಶಾಶ್ವತವಾಗಿ ಉಳಿಯುವುದು. ನಿರ್ದ್ವಂದ್ವ; ನಿಶ್ಚಿಂತೆ, ಸ್ಥಿರತೆ, ಅಸ್ತಿತ್ವದ ಅಚಲತೆ; ಅರಿವಿನ ಪುಳಕ, ಕೈಚಳಕ; ವಿದೇಹ ವಿವೇಕದ ವಚನ. ಅಮೂರ್ತದಿಂದ ಮೂರ್ತಕ್ಕೆ ಸಾಗಲು ಕೈಹಿಡಿದ ಬೆಳಕೇ ವಿಜ್ಞಾನ; ಇಂತು ಬಲಾಢ್ಯವಾಗುವುದೇ ಪ್ರಜ್ಞಾನ. ನಿನ್ನೊಡಲ ಬ್ರಹ್ಮಾಂಡದಲ್ಲಿ ಬೆಳ್ಳಿ ಬೆಡಗಿನ ಸಂಭ್ರಮ; ಉತ್ಸವದ ಉತ್ಸಾಹ, ಹೊನಲು, ನಗೆಹಬ್ಬ! ✍️ ಶಿವಕುಮಾರ ಸಾಯ 'ಅಭಿಜಿತ್' 🔵🔵🔵🔵

ಮಹಾಕಾವ್ಯ

Image
ಈ ಪ್ರಕೃತಿ ಅರ್ಧ ನಾರೀಶ್ವರನಂತೆ; ಇಲ್ಲೆಲ್ಲೋ ರಾಮರಾಜ್ಯವಿದೆಯಂತೆ. ಕಾಪಾಡುವ ಕೃಷ್ಣನೂ, ಹನುಮನೂ ಇರುತ್ತಾರಂತೆ; ಅರ್ಜುನನೇ ಗೆಲ್ಲುತ್ತಾನಂತೆ. ಹೂವು ಹಾರವಾಗಿ, ಹಣ್ಣು ಆಹಾರವಾಗಿ ವೃದ್ಧಿಯಾಗಲಿ; ಗುಣಕ್ಕೆ ಗುಣ ಸೇರಿ ಸಮೃದ್ಧಿಯಾಗಲಿ; ಬೀಜ-ಮಂತ್ರ ಕುಲಕೋಟಿಯಾಗಿ ಮಾಗಲಿ; ಬೀಗಲಿ. ಪ್ರಕೃತಿಯ ಪ್ರಕೃತಿ ಒಂದು ಪ್ರತಿಮೆ; ಅದರ ವೈಭವವೇ ಮಹಾಕಾವ್ಯ. ✍️ಶಿವಕುಮಾರ ಸಾಯ 'ಅಭಿಜಿತ್'

ಯಶಸ್ವೀ ಜೀನಿಯಸ್‌ಗಳು ಅದೃಷ್ಟವಂತರೂ ಆಗಿರುತ್ತಾರೆ ಯಾಕೆ??!

Image
ವ್ಯಕ್ತಿಯನ್ನು ಜೀನಿಯಸ್ ಅನ್ನಬೇಕಾದರೆ ಆತ ಕೇವಲ ಬುದ್ಧಿವಂತನಾದರಷ್ಟೇ ಸಾಲುವುದಿಲ್ಲ. ಅವನಲ್ಲಿ ಹೆಜ್ಜೆ-ಹೆಜ್ಜೆಗೆ ಅಡೆತಡೆ ಹಾಗೂ ಅದನ್ನು ಪಾರುಗೈಯುವ ಅಧಿಕ ಪ್ರಮಾಣದ ಗೆಲುವಿನ ಅಂಶ ಇರಲೇಬೇಕಾಗುತ್ತದೆ. ಆದುದರಿಂದ ಒಬ್ಬ ಜೀನಿಯಸ್ ಪ್ರಸಿದ್ಧನೂ ಯಶಸ್ವಿಯೂ ಆಗಿರುತ್ತಾನೆಂದರೆ ಅವನಲ್ಲಿ ಗೆಲುವಿನ ಅಂಶ ಅತ್ಯಧಿಕವಾಗಿದೆ ಎಂದೇ ಅರ್ಥ. ಅದೃಷ್ಟವಂತ ಜೀನಿಯಸ್‌ಗಳಿಗೆ ಉದಾಹರಣೆ ಐನ್‌ಸ್ಟೈನ್, ಸ್ಟೀಫನ್ ಹಾಕಿಂಗ್ ಮುಂತಾದ ಅತಿ ಯಶಸ್ವೀ ವಿಜ್ಞಾನಿಗಳು. ನಮ್ಮಲ್ಲಿ ಸಾಹಿತ್ಯದಲ್ಲೂ ಕುವೆಂಪು, ಠಾಗೋರ್ ಅವರನ್ನು ಜೀನಿಯಸ್ ಎಂದು ಕರೆದಿದ್ದಾರೆ. ವ್ಯಕ್ತಿ ಆತನ ಪ್ರಯೋಗಗಳಲ್ಲಿ ಯಶಸ್ವಿಯಾಗಿರುತ್ತಾ ಅದರ ಸಂಪೂರ್ಣ ಪ್ರಸಿದ್ಧಿ ಆತನಿಗೆ ಸಂದರೆ ಮಾತ್ರ ಆತನನ್ನು ಸಾಕಷ್ಟು ಅದೃಷ್ಟವಂತ ಜೀನಿಯಸ್ ಎಂದು ಹೇಳಬಹುದು. ಇತ್ತೀಚಿನ ಕವಿಗಳಲ್ಲಿ ಸಾಹಿತ್ಯದ ಪ್ರಮಾಣ ಮತ್ತು ಯಶಸ್ಸು ಎರಡನ್ನೂ ಗಮನಿಸಿ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪ ಅವರನ್ನು ಅತ್ಯುತ್ತಮ ಉದಾಹರಣೆಯಾಗಿ ಸ್ವೀಕರಿಸಬಹುದು. ⏺️ಯಶಸ್ವೀ ಜೀನಿಯಸ್‌ಗಳ ಲಕ್ಷಣಗಳು "It is immaterial to me whether I run my machine in my mind or test it in my shop" ಎಂದು ನಿಕೊಲಾ ಟೆಸ್ಲಾ ಹೇಳಿದ್ದಾರೆ. ಜೀನಿಯಸ್‌ಗಳು ಪ್ರಯೋಗ ಮಾಡುವುದು ಉತ್ತರಗಳ ಪ್ರಸ್ತುತಿಗಾಗಿ ಅಷ್ಟೇ. ಆತನ ಗೆಲುವು ಆತನ ಒಳಗಿರುತ್ತದೆ ಹಾಗೂ ಪ್ರಯೋಗಾಲಯದಲ್ಲಿ ಅದು ಜಾಗೃತ ರೂಪ ಪಡೆಯುತ್ತದೆ. ಜೀನ...

ಅಭಿವ್ಯಕ್ತಿಯ ವಿಧಾನವೂ, ಆದರ್ಶ ಹಾಗೂ ವಾಸ್ತವತೆಗಳ ಸಂಘರ್ಷವೂ

Image
ಕೆಲವು ಸಾರಿ ವಾಸ್ತವತೆಗಳು ನಮ್ಮನ್ನು ಬಯಲಿನಲ್ಲೇ ವಂಚಿಸುತ್ತಿರುತ್ತವೆ. ಏಕೆಂದರೆ ಒಮ್ಮೊಮ್ಮೆ ನಾವು ಅಂದುಕೊಂಡ ಅನಿಸಿಕೆಗಳು ಪೂರ್ತಿಯಾಗಿ ಸುಳ್ಳಾಗಿ ಸಾಬೀತಾಗುತ್ತವೆ ಮತ್ತು ಹಿಂಸಿಸುತ್ತಿರುತ್ತವೆ. ಎಲ್ಲರನ್ನೂ ಗೆಲ್ಲಬೇಕೆಂಬ ಹಂಬಲ ತಳೆದಿರುತ್ತೇವೆ. ಆದರೆ ಈ ನಿರೀಕ್ಷೆಗಳು ಹುಸಿಯಾಗಿಬಿಟ್ಟಿರುತ್ತವೆ. ನಿಜವಾಗಿಯೂ ನಮಗೇಕೆ ಆ ಬಗೆಯ ಆಗ್ರಹಗಳಿರುತ್ತವೆಯೋ ಗೊತ್ತಿಲ್ಲ. ಆದರೆ ಎಲ್ಲರನ್ನೂ ಮೆಚ್ಚಿಸಬೇಕೆಂಬ ಹಂಬಲವನ್ನು ಜೀವಿಯಾದವನು ಕೈಬಿಡಬೇಕು. ಏಕೆಂದರೆ ನೀವು ಏನನ್ನೇ ಮಾಡಲಿ ಬಿಡಲಿ ಒಂದಷ್ಟು ಜನ ನಿಮ್ಮನ್ನು ಹೊಗಳುತ್ತಾರೆ. ಒಂದಷ್ಟು ಜನ ಅದೇ ಕಾರಣಕ್ಕಾಗಿ ತೆಗಳುತ್ತಾರೆ. ಯಾವುದು ನಿಮ್ಮ ದೌರ್ಬಲ್ಯವೆನ್ನಲಾಗುತ್ತದೆಯೋ ಅದೇ ನಿಮ್ಮ ಪ್ರಾಬಲ್ಯವೂ ಆಗಿರುತ್ತದೆ!  ವಿಮರ್ಶೆಯ ರೀತಿರಿವಾಜುಗಳು ಹಾಗೂ ವಿಚಾರಗಳು ಬದಲಾಗಬಹುದೇ ಹೊರತು ಜನರ ಪ್ರಮಾಣದಲ್ಲಿ ಅಂತಹ ವ್ಯತ್ಯಾಸಗಳಾಗುವುದಿಲ್ಲ. ನಿಮ್ಮ ಸುತ್ತಲಿನ ಮೂರನೇ ಒಂದಂಶದಷ್ಟು ಜನ ನಿಮ್ಮನ್ನು ವಿನಾಕಾರಣ ಬೇಷರತ್ತಾಗಿ ಪ್ರೀತಿಸುತ್ತಾರೆ, ಸ್ವೀಕರಿಸುತ್ತಾರೆ, ಗೌರವಿಸುತ್ತಾರೆ. ಇನ್ನು ಒಂದಂಶದಷ್ಟು  ಜನ ನಿಂದಕರೇ ಆಗಿರುತ್ತಾರೆ. ಉಳಿದ ಒಂದಂಶದಷ್ಟು ಜನರು ಪೂರ್ತಿಯಾಗಿ ನಿಮ್ಮನ್ನು ಸ್ವೀಕರಿಸುವುದೂ ಇಲ್ಲ. ತಿರಸ್ಕರಿಸುವುದೂ ಇಲ್ಲ. ನಿಮ್ಮನ್ನು ಚೆನ್ನಾಗಿ ತಿಳಿದವರಿಗೆ ಮತ್ತೆ ನಿಮ್ಮಯಾವುದೇ ಚರ್ಯೆಗಳನ್ನು ಪರಿಚಯಿಸಬೇಕಾಗಿಯೇ ಇಲ್ಲ. ಯಾರು ಅರ್ಥೈಸಿಕೊಳ್ಳುವುದಿಲ್ಲವೋ ಅವರು ...

ನೈಜ ಗೆಳೆಯರು

Image
ನೈಜ ಗೆಳೆಯರು ನಿನ್ನ ಕೈಗುಣ ನೆನೆಯುತ್ತಾರೆ ಅವರೆಂದೂ ಕೈಬಿಡುವುದಿಲ್ಲ. ನೈಜ ಗೆಳೆಯರೆಂದರೆ ನಿನ್ನ ಆತ್ಮಸಂಗಾತಿಗಳು; ಅವರೆಂದೂ ಹಳಿಯುವುದಿಲ್ಲ ಹಂಗಿಸುವುದಿಲ್ಲ ನಿನ್ನೊಳಗಿನ ಭಾಗವೇ ಆಗಿ ಬಾಹ್ಯದಲ್ಲಿ ಬೆಳೆದವರೇ ಗೆಳೆಯರು. ನೈಜ ಗೆಳೆಯರು ನಿನ್ನ ವಿರುದ್ಧ ಸೇಡು ಕಾರುವುದಿಲ್ಲ ಸೋಲು ಉಣಿಸುವುದಿಲ್ಲ ಮದ್ದು ಅರೆಯುವುದಿಲ್ಲ ಮತ್ಸರಿಸುವುದಿಲ್ಲ ಕತ್ತಿ ಮಸೆಯುವುದಿಲ್ಲ ಅಲ್ಲದೇ ಹೊಟ್ಟೆ ಉರಿಸುವುದಿಲ್ಲ ಎಲ್ಲಕ್ಕಿಂತ ಮಿಗಿಲಾಗಿ ಅಷ್ಟು ವಿಮರ್ಶಿಸುವುದಿಲ್ಲ. ದೇಹ ನಿನ್ನದೇ ಆಗಿದ್ದು ಉಸಿರಾಡುತ್ತಿರುವಾಗ, ಗೆಳೆಯರು ನಿನ್ನ ಅವಯವಗಳಂತಿದ್ದು ಹರಸುವರು. ನೈಜ ಗೆಳೆಯರು ನೀನು ನಡೆಯುತ್ತಿರುವಾಗ ತಮಗೆ ಅರಿವಿರದೆ ನಿನ್ನೊಡನೆ ಚಲಿಸುವರು ಅವರೆಂದೂ ನಿನ್ನ ಸುಟ್ಟು ಬೆಂಕಿ ಮಾಡಿ ಸಿಗರೇಟು ಹಚ್ಚಿಕೊಳ್ಳುವುದಿಲ್ಲ. ನೈಜ ಗೆಳೆಯರ ನೀನು ಮೆಚ್ಚಿಸಬೇಕಿಲ್ಲ ಅವರು ತಾವೇ ಮೆಚ್ಚಿಕೊಳ್ಳುವರು ಹಚ್ಚಿಕೊಳ್ಳುವರು. ಭವ್ಯತೆಯನ್ನಷ್ಟೇ ಹೊಗಳಿ ಹೊರಗೆಲ್ಲ ಉಗುಳಿದವರು ನಿನ್ನ ಮೇಲೆ ಸವಾರಿ ಮಾಡಿ ತೆಗಳಿದವರು ಗೆಳೆಯರಲ್ಲ ನೀ ಬಿದ್ದಾಗಲೂ ಬಿಡದೆ ಮುದ್ದಿಸಿ ಮೇಲೆತ್ತಿದವರೇ ಗೆಳೆಯರು. ನಿಜವಾದ ನಿನ್ನ ಗೆಳೆಯರಿಗೆ ನೀನೆಂದೂ ಪರಕೀಯನಾಗುವುದಿಲ್ಲ ಏಕೆಂದರೆ ನೈಜ ಗೆಳೆಯರು ಯಾವತ್ತೂ ಸ್ವಾರ್ಥದ ಸಂವಿಧಾನ ರಚಿಸಿಕೊಳ್ಳುವುದಿಲ್ಲ. ಸಾವು ನೋವಿಗೂ ಬೆದರಲು ಬಿಡದೆ ನಾವಿದ್ದೇವೆಂದು ನೈಜ ಗೆಳೆ...

ಮನಸ್ಸೆಂಬ ಆಕಾಶವು

Image
ಮನಸ್ಸೆಂಬ ಆಕಾಶವೂ ಅಪಾರ; ಇಲ್ಲೂ ಹಗಲಿರುಳೆನ್ನದೆ ನಕ್ಷತ್ರಗಳು ಹೊಳೆಯುತ್ತವೆ. ವಿಶ್ವವೆಂದರೆ ಹಲವು ಅಗಾಧಗಳ ಕಲ್ಪನೆ, ಅಸೀಮ, ಅಪರಿಮಿತ ಪ್ರತೀತಿ, ಬಹುತ್ವ ಅಥವಾ ಜೀವಂತ ಪರಿಕಲ್ಪನೆ. ಭೂತ-ಭವಿಷ್ಯಗಳಿಲ್ಲದ ನಿಶ್ಚಲ ವರ್ತಮಾನ ನಿನ್ನ ದೇಶ-ಕಾಲ; ಅದು-ಇದು ಇರದ ಅಭೇದ ಸ್ವಯಂಪೂರ್ಣತೆ, ಪರಿಪೂರ್ಣತೆ, ಅಲಂಕಾರ ರಹಿತ ಸ್ಥಿರ ಸ್ಥಿತಿ. ನಿನ್ನೊಳಗೆ ಕೇವಲವಲ್ಲದ ಈ ಜಗತ್ತೂ ಮೀರಿ ಬೆಳೆದು ಇನ್ನೂ ಇದೆ ಎನ್ನುವಂತೆ ಬಾಳುತ್ತಿರು, ಜೀವನ ನಿನ್ನ ವಿಶಾಲತೆ; ಪ್ರಪಂಚ ಚಲಿಸುತ್ತಿದೆ ತನ್ನ ವಿಸ್ತಾರಕ್ಕೆ. -ಶಿವಕುಮಾರ ಸಾಯ 'ಅಭಿಜಿತ್' 🎆🎆🎆🎆🎆🎆🎆🎆

ಶಬ್ದ ಮತ್ತು ಸಾರ್ಥಕ್ಯ

Image
ನಿತ್ಯ ನಿರ್ಮಲನಂತೆ ನೀನು ನಿಶ್ಚಲನಾಗಿ ವರ್ತಮಾನದಿ ಬಾಳ ನೋಡಬೇಕು ಹಾಡು ಹುಟ್ಟುವುದಿರಲಿ, ತಾಳ ತಟ್ಟುವುದಿರಲಿ ನಿನ್ನೊಳಗೆ ಆನಂದ ಮೂಡಬೇಕು ಅಮ್ಮ ನೀಡಿದ ಊಟ, ಅಪ್ಪ ಹೇಳಿದ ಪಾಠ ಸ್ನೇಹಿತರ ಮುನ್ನೋಟ ಫಲಿಸಬೇಕು ಪುಣ್ಯವೇ ಫಲವಾಗಿ ಬೆಳೆಯುತ್ತ ಹೋಗುವುದು ಕಾವು ಕೊಡು, ಈ ಆಟ ಜರಗಬೇಕು ಶತ್ರುವಿಗೆ ಧಿಕ್ಕಾರ, ಮಿತ್ರರಿಗೆ ಸತ್ಕಾರ ಪ್ರಾಣಶಕ್ತಿಗೆ ಧ್ಯಾನ ಶ್ರೇಯಸ್ಕರ ನೋವುಗಳ ಮರೆಯುತ್ತ ಮಾತಾಡುವಂತಾಯ್ತು ಪಾಲಿಸಿದ ದೇವರಿಗೆ ನಮಸ್ಕಾರ ವಿಶ್ವವ್ಯಾಪಕ ಶಕ್ತಿ, ಅಂತರಂಗದಿ ಭಕ್ತಿ ನಿಜದ ನೆಲೆ ಯುಗದ ಬೆಲೆ ಘನತೆ ತಾರೆಗಳು ಹೊಳೆಯುವವು, ದಿನರಾತ್ರಿ ಕಳೆಯುವವು ಉದ್ಭವಿಸಿ ಶಬ್ದ - ಕವಿತೆ ಸ್ಫೂರ್ತಿ ಹೊಸದಾಗಿರಲಿ, ಕೀರ್ತಿ ಹೊಶದಾಗಿರಲಿ ಹರಿಸೋಣ ಪ್ರೀತಿಯೊರತೆ; ಹಬ್ಬವಿದು ಸಂತೋಷ; ನಿಬ್ಬೆರಗು, ಆವೇಶ; ಹಬ್ಬೋಣ ವೀರಚರಿತೆ ✍️ ಶಿವಕುಮಾರ್ ಸಾಯ 'ಅಭಿಜಿತ್'

ಆರಾಧನೆ

Image
ವಂದನೆ.... ಭಾವದ ಸಂವೇದನೆ... ರಾಗದ ಸಂಯೋಜನೆ... ಆರಾಧನೆ.... ಸ್ವರಗಳೆ ನೀನು, ಭರವಸೆ ನೀನು ಕರುಣೆಯ ಕೃಪೆ ನೀನು ಕರಗಳು ಹರಸಲಿ, ತೆರೆಗಳು ತೆರೆಯಲಿ ಗುರು ಚರಣಕೆ ಶರಣು. ಹಸಿರಿನ ತೋರಣ, ಉಸಿರಿನ ಕಾರಣ ಜೀವನ ಪಾವನವಿರಲು, ಗಿರಿಗಳಲ್ಲಿ ಮುಗಿಲಲ್ಲಿ ಮಿಂಚಿನಲಿ ಬಾನಿನಂಚಿನಲಿ ಹೊನಲು; ಮಿರುಮಿರುಗುತಿರುವ ಅರಿವಿಂದ ಕಂಗೊಳಿಸಿ ಹೊಮ್ಮುತಿರುವುದು ಚಿಮ್ಮುತಿರುವುದು ಹೆಮ್ಮೆ ತರುವುದು ಘಮಲು. ಹಗಲಿಂದಿರುಳಿಗೆ, ಕೊಳಲಿನ ಕೊರಳಿಗೆ ಹಾಡಿನ ದನಿಗೆ ಶ್ರುತಿಗೆ ರಸಧಾರೆಯನು, ಹೊಸಪ್ರೇಮವನು ತೊಡಿಸಿತು ಮುಡಿಸಿತು ಕೃತಿಗೆ. ಜನಪ್ರಿಯವಾಯಿತು ಅಭಿವ್ಯಕ್ತಿ ತನು ಮನ ಧನ ಕಾಯುವ ಶಕ್ತಿ ಶಾಂತಿಯ ಲೋಕ, ಸ್ವಭಾವೋಕ್ತಿ ಸಮರ್ಪಣೆಯಾಗುತ್ತಿದೆ ಭಕ್ತಿ. ✍️ ಶಿವಕುಮಾರ ಸಾಯ 'ಅಭಿಜಿತ್'

ದೇವ ಹೇ ಶುಭಕರ....

Image
ದೇವ, ಹೇ ಶುಭಕರ ನಿನ್ನೊಲುಮೆಯೆ ಪ್ರಿಯಕರ ಅಸ್ತಿತ್ವ, ಅಧಿಕಾರ, ಸೌಖ್ಯ ದಾತಾರ; ನೀ ತಳೆದೆ ಬಹುರೂಪ ಸತ್ಯಾವತಾರ. ದೇಹಧಾರಿಯು ನೀನು ಕೃಪೆ ಹೊಮ್ಮಿದವನು; ನಗುವಲ್ಲಿ ನಲಿವಲ್ಲಿ ಸೊಗ ಚಿಮ್ಮಿದವನು. ವಿಶ್ವಾಸ, ಒಡನಾಟ, ಶ್ವಾಸ-ಉಸಿರಾಟ; ಹೃದಯಮಂದಿರದಲ್ಲಿ ಪ್ರತಿಭಾಸ-ಪಾಠ! ಪಂಚಭೂತ ತತ್ತ್ವ ನಾರಾಯಣತ್ವ; ಹಂಸಕ್ಷೀರ ನ್ಯಾಯ ಸುಗುಣ ಸಮತ್ವ. ಆಂತರ್ಯದ ಆ ಮಹಾ ಚೈತನ್ಯ ನೀನು; ನಿನ್ನ ಸಾಕಾರಕ್ಕೆ ಕೊರತೆ ಇನ್ನೇನು? ಕಣ್ಮುಚ್ಚಿ ಧ್ಯಾನಿಸಿರೆ ದೃಷ್ಟಿ ಸಮಾನ; ವಿಶ್ವವ್ಯಾಪಕ ವಿಜಯ ಶಾಂತಿ ವಿಧಾನ! ✍️ ಶಿವಕುಮಾರ ಸಾಯ 'ಅಭಿಜಿತ್'

Abhi+Jith=Abhijith! ಪ್ರಶ್ನೆಗೊಂದು ಪ್ರಶ್ನಾತೀತ ಉತ್ತರ!?

Image
ಸಂಸ್ಕೃತದಲ್ಲಿ ಶಬ್ದಗಳು ಧಾತುಗಳಿಂದ ಉಂಟಾಗಿರುತ್ತವೆ. ಧಾತುಗಳ ಬೆಂಬತ್ತಿದರೆ ನಮ್ಮ ಎಲ್ಲ ಸಂದೇಹಗಳು ದೂರವಾಗುತ್ತವೆ. ಎಲ್ಲ ಸವಾಲುಗಳಿಗೆ ಸಂಕಲ್ಪವೇ ದಿಟ್ಟವಾಗಿ ಉತ್ತರಿಸಿಬಿಡುತ್ತದೆ. ಯಾವುದೇ ವಿಷಯಜ್ಞಾನವು ಪೂರ್ಣದ ಕಲ್ಪನೆಯಿಲ್ಲದೆ ಪರಿಪೂರ್ಣವೆನಿಸಲಾರದು. ಆದರೆ ಪ್ರತಿಯೊಂದು ಜೀವಿ, ನಿರ್ಜೀವಿಯೂ ಕೂಡಾ ದೈವಿಕ ದೃಷ್ಟಿಯಲ್ಲಿ ಪರಿಪೂರ್ಣವೇ. ಈ ವಾಸ್ತವತೆಯ ಅರಿವಿದ್ದವನಿಗೆ ಸುಪ್ತ ಮನಸ್ಸಿನ ಒಳಗಿದ್ದು ಜಾಗೃತ ಬದುಕಿನ ಎಲ್ಲ ಸಂಗತಿಗಳ ಪೂರ್ಣ ನೋಟ ಪಡೆಯಬಹುದು. ಮನೋವಿಜ್ಞಾನದೊಂದಿಗೆ ಈ ವಿಚಾರದಲ್ಲಿ ಜ್ಯೋತಿರ್ವಿಜ್ಞಾನ ಕೈಜೋಡಿಸುತ್ತದೆ. ಪ್ರತಿಯೊಂದನ್ನು ಇಲ್ಲಿ 'ಬೆಳಕು' ಎಂದು ಪರಿಗಣಿಸಲಾಗುತ್ತದೆ. ಎಲ್ಲ ಪದಾರ್ಥಗಳು ಪರಿಪೂರ್ಣವಾದರೂ ಅವುಗಳೊಳಗಿನ ಪಂಚಭೂತಗಳಾದ ನೀರು, ಗಾಳಿ, ಆಕಾಶ, ಅಗ್ನಿ, ಮಣ್ಣು ಇವುಗಳ ಸಾರಭೂತ ಸ್ಥಿತಿ-ನಿಷ್ಪತ್ತಿ ಬೇರೆ ಬೇರೆಯೇ ಇರುತ್ತದೆ. ಎಲ್ಲಾ ಆಯಾಮಗಳೂ ಒಂದು ಕ್ರಿಯೆ ಪ್ರಕ್ರಿಯೆಯಲ್ಲಿ ಐಚ್ಛಿಕವಾಗಿಯೋ ಅನೈಚ್ಛಿಕವಾಗಿಯೋ ಪಾಲ್ಗೊಂಡು ಸ್ಥಿತಿಗತಿ ಅವುಗಳ ಕಾಸ್ಮಸ್ ಅಥವಾ ವಿಶ್ವನಿಯಮದಂತೆ ಒಂದಿಷ್ಟು ಬದಲಾಗುತ್ತಲೇ ಇರುತ್ತವೆ. ಅವುಗಳನ್ನು ನಾವು ಇಚ್ಛಾನುಸಾರ ಸುಸ್ಥಿರವಾಗಿಟ್ಟುಕೊಳ್ಳಲೂ ಸಾಧ್ಯ. ಅದಕ್ಕೆ ಸಾಧನೆಯೂ, ಸಿದ್ಧಿಯೂ ಎರಡೂ ಬೇಕು. ಯಾರಾದರೂ ನಿಮ್ಮನ್ನು ನಿಗೂಢವೆಂದು ಕರೆದರೆ ನಿಮಗೇನು ಅನಿಸಬಹುದು? ಇಂಥ ಒಂದು ಪ್ರಶ್ನೆಯನ್ನು ಅದೇ ಮನಃಶಾಸ್ತ್ರದ ನೆಲೆಯಿಂದ ಇಂದು ವಿಶ್ಲೇಷಿಸಬೇಕಾಗುತ್...

ಧ್ರುವ

Image
ಧ್ರುವಕ್ಕೆ ಇಲ್ಲೇ ಕೇಂದ್ರಸ್ಥಾನ; ತನ್ನೊಳಗೆ ತಾನೆ ರಾಜಧಾನಿಯಂತೆ ಒಂದು ಆಸ್ಥಾನ ಸ್ನೇಹಕ್ಕೆ ವಲಯ, ಪ್ರಶಾಂತ ನಿಲಯ, ದೇವಾಲಯ- ಸ್ವಯಂ ಭು! ತಾನೇ ತಾನಾಗಿ ಶಕ್ತಿ ಸಂಚಯನ, ಸಂಚಲನ, ಸಂಚಾರ, ಧ್ರುವೀಕರಣ.... 'ಧ್ರುವರಾಜ'ನಿಗೆ ದೇಹ ರಾಜಸ್ಥಾನ; ದೇಶ-ಕಾಲಾತೀತ ಕಾರಸ್ಥಾನ... ತನ್ನೊಳಗೆ ಆಕಾಶ ಬೆಳೆದು, ನಕ್ಷತ್ರ, ನಂದಾದೀಪ ಹೊಳೆದು ತತ್ತ್ವ ತಿಳಿದದ್ದಕ್ಕೆ ಧನ್ಯ ✍️ ಶಿವಕುಮಾರ ಸಾಯ 'ಅಭಿಜಿತ್'

ದರ್ಶನ

Image
ಎಚ್ಚೆತ್ತಾಗ ಸುತ್ತಮುತ್ತ ಪವಾಡ; ನಿರಂತರ ಕಾಳಜಿಯ ಕಳಶವಿಟ್ಟರು ಅಂತರಂಗದ ದೇವ-ದೇವಿಯರು! ಅಚ್ಚರಿ, ಯಾರು ಪ್ರಜ್ಞೆ ತೋರಿದರು, ಮುಕ್ತಿಯ ದೃಷ್ಟಿ ದೊರಕಿಸಿದರು ನೋಡು ದೀಪೋತ್ಸವದ ಜ್ಯೋತಿ- ಜಾಗೃತಿಯ ದರ್ಶನ; ಸ್ವಾತಂತ್ರ್ಯ-ಸ್ವರ್ಗ, ಹಾಡು 'ವಿ' ಎಂಬ ಉಪಸರ್ಗ! ಫಲಿತ ವಿನ್ಯಾಸ ಕೈಚಳಕ; ಮೆರೆಸಿ, ಮೇಳೈಸಿ ಪುಳಕ ಹೊಮ್ಮಿಸಿತು ಹೊಂಬೆಳಕ!! ✍️ಶಿವಕುಮಾರ ಸಾಯ 'ಅಭಿಜಿತ್'

ಚೆಲುವು

Image
ಗುಣಕ್ಕೆ ಗುಣ ಪ್ರಾಪ್ತಿಯ ಪ್ರಪಂಚದಲ್ಲಿ ನಿನ್ನ ವಿಶ್ವಾಧಾರ ಬೃಹತ್ತು! ಬಯಕೆ, ಈಡೇರಿಕೆ; ಆಕಾಶ, ಭೂಮಿ, ಪಾತಾಳ, ಅನಂತಾನಂತ ಅಷ್ಟೂ ಇಷ್ಟಕ್ಕಿಳಿಸಿ, ನಿನ್ನ ಮಟ್ಟ, ಆಕಾರ ಬೆಳೆಸಿ ಆನಂದ ಮೆರೆಸಿದೆ. ಹೊರ ಎಂಬುದಿಲ್ಲ- ಒಳಗಣ ಜೀವಕಳೆ ತುಂಬಿದೆ; ಗುಣಕ್ಕೆ ಗುಣ ಬೆರೆತು, ದೊರೆತು, ಒಳ-ಹೊರಗು ಮಧ್ಯೆ ಬೆಡಗು-ಬೆರಗು ತೆರೆಯುತಿದೆ; ನಿನ್ನ ಜ್ಞಾನ, ವಿಜ್ಞಾನ, ತತ್ತ್ವಜ್ಞಾನ ಬೆಳಗುತಿದೆ; ಶಾಂತಿ ಮೊಳಗುತಿದೆ. ಪಿಂಡಾಂಡದಿಂದ ಬ್ರಹ್ಮಾಂಡ ವರೆಗೂ ಹಿಗ್ಗು; ಹಿರಿತನ, ಜವನಿಕೆ. ✍️ ಶಿವಕುಮಾರ ಸಾಯ 'ಅಭಿಜಿತ್'

MSRT - Mind Sound Resonance Technique

Image
Sound is a form of energy or vibration. Using the sound energy in appropriate manner is surely a great technique. In scientific yoga system it is called as 'Mind Sound Resonance Technique. Here we have the steps of MSRT or Mind Sound Resonance Technique which includes 12 steps. 1. Prayer - Salutation to divine (Maha mrutyunjaya mantra). 2. Quick relaxation technique (QRT) Observe the abdominal breathing internally with closing eyes. 3. Loud chanting (ahatha) of *AAAkara *UUUkara *MMMkara 4. AUM- 3 rounds. 5. Alternate loud and in silent chanting of AAAkara, UUUkara, MMMkara. 6. AUM (3 rounds). 7. Ahatha of Maha mrutyunjaya mantra. 8. Alternate ahatha- anahatha of maha mrutyunjaya mantra (3 rounds). 9. Anahata of AUM (3 rounds). 10. Silence. 11. Resolve. 12. Closing prayer for peace. ✍️ Shivakumar Saya 'Abhijith'

ಕಲ್ಕಿ: ಭಗವಂತನ 10ನೇ ರಹಸ್ಯ ಅವತಾರವೇ?! (ವಿಶೇಷ ಲೇಖನ)

Image
ಕಲ್ಕಿ ಅವತಾರವನ್ನು ಭಗವಂತನ 10ನೇ ಅವತಾರವೆಂದು ಭಾವಿಸಲಾಗಿದೆ. ಕಲ್ಕಿ ಅವತಾರದ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ. ಕಲ್ಕಿಯು ಕಲಿಯುಗದ ದುರಿತಗಳನ್ನು ಕಂಡು ಅದನ್ನು ಕೃತಯುಗಕ್ಕೆ ಮರಳಿ ತರಲು ದೇವರು ತಾಳುವ ಅವತಾರವೆನ್ನಲಾಗಿದೆ. ಕಲ್ಕಿಯು 'ಸಂಭಾಲ' ಎಂಬ ಹಳ್ಳಿಯಲ್ಲಿ ನದೀ ತೀರದಲ್ಲಿ ಬ್ರಾಹ್ಮಣ ದಂಪತಿಯ ಮಗನಾಗಿ ಹುಟ್ಟುತ್ತಾನೆ. ಆತ ಸಂಸಾರಿಯಾಗಿರುತ್ತಾನೆ. ಬಿಳಿಯ ಕುದುರೆಯೇರಿ ಆತ ಅವತರಿಸುತ್ತಾನೆ ಎಂದು ರೂಪಕಗಳಿವೆ. ಕಲ್ಕಿ ಈಗಾಗಲೇ ಜನ್ಮ ತಾಳಿದ್ದಾನೆ ಎಂದು ಕೆಲವರು, ಕಲ್ಕಿ ಬಂದ ನಂತರ ಯುಗಾಂತ್ಯವಾಗುವುದೆಂದು ಹಲವರು ಭಾವಿಸುತ್ತಾ ಕಲ್ಕಿ ಅವತಾರವನ್ನು ನಾವು ಕಾಣಲಾರೆವು ಎನ್ನುವವರೂ ಇದ್ದಾರೆ. ವಾಸ್ತವದಲ್ಲಿ ಧರ್ಮ ಸಂಸ್ಥಾಪನೆಗೆ ಸಂಬಂಧಿಸಿ ಕಲ್ಕಿಯಷ್ಟು ಸುಂದರ ರೂಪಕವೇ ಇಲ್ಲ. ಏಕೆಂದರೆ ಕಲ್ಕಿ ಕ್ರೂರಿಯಲ್ಲ. ಕಲ್ಕಿ ಕಣ್ಣಿಗೆ ಕಾಣಬಲ್ಲ ಅವತಾರವಲ್ಲ. ಮತ್ತೆ ಕಲಿಯುಗವು ನಿಧಾನವಾಗಿ ಸತ್ಯಯುಗವಾಗುತ್ತದೆ. ಅಲ್ಲಿ ಪ್ರಳಯವಿಲ್ಲ. ಪರಿವರ್ತನೆ. ಇದು ಮತ್ತೊಂದು ವಾದ. ಕಲ್ಕಿಯು ಕಲಿಯನ್ನು, ನಂತರ ತನ್ನ ಕೆಲವು ಶತ್ರುಗಳನ್ನು ಮೊದಲು ನಾಶಮಾಡುತ್ತಾನೆ ಎಂದು ಸಾಂಕೇತಿಕವಾಗಿಯೂ ಹೇಳಲಾಗಿದೆ. ಇದಕ್ಕೆ ಪೂರಕವಾಗಿ ಭಾಗವತದ ವಿಭೂತಿಯೋಗಾಧ್ಯಾಯದಲ್ಲಿ ರೋಹಿಣಿ ನಕ್ಷತ್ರದ ಶ್ರೀಕೃಷ್ಣನ ಹೇಳಿಕೆಯಿದೆ. ಆತ ಅಲ್ಲಿ ನಡೆದ ಕಾಲ್ಪನಿಕ ಸಂವಾದದಲ್ಲಿ 'ನಕ್ಷತ್ರಗಳಲ್ಲಿ ನಾನು ಅಭಿಜಿತ್' ಎಂದಿದ್ದಾನೆ. ಪುನರ್ವಸು ನಕ್ಷತ್ರದ ಪರಶುರಾ...

ಸ್ಫೂರ್ತಿ

Image
ಇಂದು ಹೊಸತು, ಈಗ ಹೊಸತು ಹೊಂದು ಹೊಚ್ಚಹೊಸತು; ಹಿಂದು-ಮುಂದು ಎರಡು ಇರದ ಅಂದದರಿವೆ ಹೊಸತು. ಪಕ್ವ ಭಾವ, ಒಳಗೆ ಜೀವ ಪ್ರಾಣಶಕ್ತಿ-ನಿಲುಮೆ; ಸ್ವಾಭಿಮಾನ-ಸೊಗಸು-ಹಿರಿಮೆ ಅಂತರಾಳ, ಚಿಲುಮೆ! ಸ್ವರದ ತಂತ್ರ, ಮಂತ್ರ ಸೆಳೆತ ವಿದ್ಯೆ, ನವವಿಚಾರ; ನಡೆಯು ನೇರ, ನುಡಿಯು ಮಧುರ ಇದುವೆ ಜಯವಿಹಾರ! ನಿನಗೆ ನೀನೆ ಸೂತ್ರಧಾರ ನೀನೆ ಪಾತ್ರಧಾರ; ಮುಕ್ತ ನೀನು, ಶಕ್ತ ನೀನು ಚೆಲುವ ಚಿತ್ರಗಾರ! ✍️ ಶಿವಕುಮಾರ ಸಾಯ 'ಅಭಿಜಿತ್'

ಪ್ರಕೃತಿ

Image
ನೀ ದೇಹಾಭಿಮಾನಿಯಾಗಿರು; ಒಂದು ಅಸ್ತಿತ್ವ, ಕಾಸ್ಮಾಲಜಿ, ಫೆಂಗ್ ಶುಯಿ, ತಪಸ್ಸು ಮತ್ತು ತಂತ್ರ ನಿನ್ನದೇ. ನಿನ್ನೊಳಗೆ ನೀನಿರು; ಕಾಂತಿ ಮಿನುಗುವುದು, ವಿನಂತಿ ಜರಗುವುದು. "ಕಠಿಣ ಪರೀಕ್ಷೆಗಳೇ ತಾಲೀಮು; ಸರಳವಾದದ್ದೇ ಅಂತಿಮ-" ಕಲ್ಪದಲ್ಲೀಗ ಅವಸರ್ಪಿಣಿಯೇ ಇಲ್ಲವಾಗುವುದು; ನಿನ್ನ ಉತ್ಸರ್ಪಿಣಿ ಮಾತ್ರ ಒಡನೆ ಬೆಳೆಯುವುದು; ಉಳಿಯುವುದು. ✍️ ಶಿವಕುಮಾರ ಸಾಯ 'ಅಭಿಜಿತ್'

ಸೃಷ್ಟಿ

Image
ಅಮೃತಮಯ, ಆನಂದಮಯ ಸೃಷ್ಟಿಯ ದೃಷ್ಟಿಯು ಭವ್ಯಮಯ; ವಿಶ್ವಮಯ, ವಿಶ್ವಾಸಮಯ ಬಾಳಿನ ತೋರಣ ದಿವ್ಯಮಯ. ಬ್ರಹ್ಮಮಯ, ಬ್ರಹ್ಮಾಂಡಮಯ ಕಲ್ಪಗಳಾಗಲಿ ಪೂರ್ಣಮಯ; ನಾದಮಯ, ನಿನಾದಮಯ ಸಂಕಲ್ಪಗಳೇ ವರ್ಣಮಯ. ಶಾಂತಮಯ, ಪ್ರಶಾಂತಮಯ ಅನುಭವವಾಗಲಿ ಪ್ರೇಮಮಯ; ಸ್ವಾದಮಯ, ಆಸ್ವಾದಮಯ ಸ್ವಾಧೀನತೆಯೇ ಸದ್ಗಮಯ. ಅಕ್ಷರಮಯ, ಲಕ್ಷಣಮಯ ಕಾವ್ಯ, ವಿನೋದ, ವಿಜ್ಞಾನಮಯ; ಅಕ್ಷಯಮಯ, ಅಕ್ಷತಮಯ ಜೀವನರಂಗ ವಿಶಿಷ್ಟಮಯ. ಅದ್ಭುತಮಯ, ಆಶ್ಚರ್ಯಮಯ ಸದಾ ಶಿವನೆ ಸಂತೋಷಮಯ; ಭಾಗ್ಯಮಯ, ಯೋಗ್ಯಮಯ ಔಂ ನಮಃ ಅನಂತಮಯ. ✍️ ಶಿವಕುಮಾರ ಸಾಯ 'ಅಭಿಜಿತ್'

ಈಗ ಗೆದ್ದವನು

Image
ಹೊರಬಿದ್ದ ಪದಗಳು ಕವಿತೆಯಾದರೆ, ಒಳಗಿನ ಪದಗಳು ಧ್ಯಾನವೇ ಆದವು. ಪದಗಳ ವಿಜ್ಞಾನದಲ್ಲಿ ನಿರ್ಮಿತಿ; ಜೀವನ ಉತ್ಪ್ರೇಕ್ಷೆಯಂತೆ ನಡೆಯುತ್ತಿದೆ. ಒಳಗೊಬ್ಬ ಬೆಳಗುತ್ತಾನೆ ಬೆಳಕಿನ ವಿಜ್ಞಾನಿ ಕುಣಿಯುತ್ತಾನೆ ಈಗ ಗೆದ್ದವನು ಟ್ರಿಪಲ್ ವರ್ಡ್ಸ್ ಬರೆಯುತ್ತಾನೆ ಸ-ಪ-ಸ ಹಾಡುತ್ತಾನೆ ಸಂಕಲ್ಪದಿಂದ ಸೃಷ್ಟಿಸುತ್ತಾನೆ. ಈ ಕಾಸ್ಮಸ್ ಅತ್ಯದ್ಭುತ, ಇದರೊಳಗೆ ಸರ್ವಸ್ವ; ಆಮೇಲೆ ಟೆಲಿಪತಿ, ಶಬ್ದವಿದ್ಯೆ, ಗುರುತ್ವ, ವಿದ್ಯುತ್ಕಾಂತೀಯ ಅಲೆ, ಕನಸು, ಮಹಾಭಾರತ, ಜೆನೆಟಿಕ್ಸ್ ಇತ್ಯಾದಿ. ಈಗ ಗೆದ್ದವನು ಕವಿಯಲ್ಲ-ಕಲ್ಕಿ, ಗಾರುಡಿಗನು; ಲೋಕಗಳು ಶಾಂತಿಯಿಂದ ಬಾಳುತ್ತಿವೆ. ನನ್ನೊಳಗಿನ ನಾನು, ಈಗ ನಿಗೂಢವಲ್ಲ. ✍️ ಶಿವಕುಮಾರ ಸಾಯ 'ಅಭಿಜಿತ್'

ಬೆಳಕು ಎಂದರೆ ಬೆಳಕೇ

Image
ಬೆಳಕು ಎನ್ನುವುದು ಶಕ್ತಿ, ಯುಕ್ತಿ, ಚೈತನ್ಯ; ಜ್ಞಾನ, ವಿಜ್ಞಾನ, ಧ್ಯಾನ ಅಥವಾ ಒಳ್ಳೆಯದು. ಜೀವ-ಭಾವಗಳ ಧೈರ್ಯ-ಶೌರ್ಯ, ಸತ್ಯ, ನ್ಯಾಯ, ವಿವೇಚನೆ, ಬೆರಗು, ಬೆಳವಣಿಗೆ, ಪಕ್ವತೆ, ಸಂಕಲ್ಪ ಬಲವಿರುವುದು. ಸ್ವಾಭಿಮಾನ, ಸ್ವಾಧೀನತೆಯಿಂದ ಹೋರಾಡುತ್ತಾ ಭವ್ಯತೆಯ ತೋರುವುದು; ಬೆಳಕಿನ ಸರಳರೇಖೆ ಸದಾ ದಿವ್ಯತೆಯ ಸಾರುವುದು. ✍️ ಶಿವಕುಮಾರ ಸಾಯ 'ಅಭಿಜಿತ್'

ವಿಶ್ವಶಕ್ತಿಯು ನೀನು

Image
ವಿಶ್ವಶಕ್ತಿಯು ನೀನು, ನಮ್ಮ ಶೌರ್ಯ ಸಾಹಸ ನೀನು; ಒಡಲೂ ನೀನು, ಒಡೆಯನೂ ನೀನು, ನಡೆಸುವ ಸ್ವಾಮಿಯು ನೀನು. ಸನ್ಮತಿ ನೀನು, ಸಂಹಿತೆ ನೀನು, ಅಂತರ್ಯಾಮಿಯು ನೀನು; ಅಂತರಂಗದಿ ಚಿರಂತನನು ನೀ, ಅಮಿತ ಪರಾಕ್ರಮಿ ನೀನು. ನೀನೇ ಗುರುವು, ನೀನೇ ವರವು, ಪರಮ ಗುಣೋಜ್ವಲ ನೀನು; ನೀನೆ ಅಭಿಮಾನ, ನೀನೆ ಔನ್ನತ್ಯ, ಸಕಲ ಸೌಭಾಗ್ಯ ನೀನು. ಪ್ರಾಣವು ನೀನು, ಪ್ರಮಾಣವು ನೀನು, ಅಚಲ ನಿರ್ಭೀತಿ ನೀನು; ನೀನೆ ಅರ್ಹತೆ, ನೀನೆ ಅಸ್ಮಿತೆ, ಬಲವು, ಬೆಂಬಲವು ನೀನು. ✍️ ಶಿವಕುಮಾರ ಸಾಯ 'ಅಭಿಜಿತ್'